Asianet Suvarna News Asianet Suvarna News

ಫಸ್ಟ್ ನೈಟ್‌ಗೂ ಮುನ್ನ ಗಂಡುಮಗು ಹೆರೋದು ಹೇಗೆ ಎಂಬ ಪುಸ್ತಕವನ್ನು ವಧು ಕೈಗಿಟ್ಟ ಅತ್ತೆ ಮಾವ! ಕೇಸ್ ದಾಖಲಿಸಿದ ಮಹಿಳೆ

2012ರಲ್ಲಿ ಮದುವೆಯ ಮುನ್ನಾದಿನದಂದು ಮಹಿಳೆಗೆ  ಗಂಡು ಮಗುವನ್ನು ಗರ್ಭಧರಿಸುವ ಹಂತಗಳನ್ನು ವಿವರಿಸುವ ಸೂಚನೆಯ ಟಿಪ್ಪಣಿ ನೀಡಲಾಯಿತು. ಕಡೆಗೂ ಮಹಿಳೆಗೆ ಹೆಣ್ಣು ಮಗುವಾಯಿತು. ಅಂದಿನಿಂದ ಪತಿ ಮತ್ತು ಅತ್ತೆಮಾವ ಕಿರುಕುಳ ನೀಡುವುದಾಗಿ ಮಹಿಳೆ ದೂರಿದ್ದಾರೆ. 

Instructions from in-laws to give birth to baby boy Young woman on mental abuse skr
Author
First Published Mar 6, 2024, 11:28 AM IST

ಕೊಚ್ಚಿ: ಗಂಡು ಮಗುವನ್ನು ಹೆರಲು ಸಾಧ್ಯವಾಗದ ಕಾರಣ ತನ್ನ ಪತಿ ಮತ್ತು ಆತನ ಕುಟುಂಬವು ಚಿತ್ರಹಿಂಸೆ ನೀಡುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೇರಳ ಹೈಕೋರ್ಟ್‌ನ ಮೊರೆ ಹೋದ ದುರದೃಷ್ಟಕಾರಿ ಘಟನೆ ನಡೆದಿದೆ.  1994 ರ ಪ್ರೀ-ಕಾನ್ಸೆಪ್ಷನ್ ಮತ್ತು ಪ್ರೀ-ನೇಟಲ್ ಡಯಾಗ್ನೋಸ್ಟಿಕ್ ಟೆಕ್ನಿಕ್ಸ್ ಆಕ್ಟ್ ಅಡಿಯಲ್ಲಿ ತನ್ನ ಅತ್ತೆ ಮಾವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ. 39 ವರ್ಷದ ಮಹಿಳೆಯ ದುರವಸ್ಥೆಯನ್ನು ಪರಿಶೀಲಿಸಿದ ಕೇರಳ ಹೈಕೋರ್ಟ್  ದಿಗ್ಭ್ರಮೆ ವ್ಯಕ್ತಪಡಿಸಿತು. 

ಮಹಿಳೆಯ ಅರ್ಜಿಯ ಪ್ರಕಾರ, 2012ರಲ್ಲಿ ತನ್ನ ಮದುವೆಯ ಮುನ್ನಾದಿನದಂದು ಆಕೆಗೆ 'ಗಂಡು ಮಗುವಿನ ಗರ್ಭ ಧರಿಸುವುದು ಹೇಗೆಂದು ವಿವರವಾದ ಸೂಚನೆ' ಇರುವ ಪುಸ್ತಕ ಹಸ್ತಾಂತರಿಸಲಾಯಿತು. 
ಈ ಸಂಬಂಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕೊಲ್ಲಂ ಮೂಲದ ಮಹಿಳೆಯೊಬ್ಬರು, ಮದುವೆಯ ದಿನವೇ ಗಂಡು ಮಗುವನ್ನು ಹೊಂದುವಂತೆ ಸೂಚನೆ ನೀಡಿದ್ದ ಅತ್ತೆಮಾವ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.


 

ಅಷ್ಟಾಗಿಯೂ ಮಹಿಳೆ 2014ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಂದಿನಿಂದಲೂ ಪತಿ ಹಾಗೂ ಅತ್ತೆಮಾವನಿಂದ ಕಿರುಕುಳ ಎದುರಿಸುತ್ತಿರುವುದಾಗಿ ಮಹಿಳೆ ದೂರಿದ್ದಾರೆ. ಪತಿ ಹೆಣ್ಣು ಮಗುವೆಂದು ಮಗುವನ್ನು ನೋಡಲೂ ಬಂದಿಲ್ಲ. ತಾವು ಬಾಣಂತನ ಮುಗಿಸಿ ಅತ್ತೆ ಮನೆಗೆ ಹೋದಾಗ ಕೇವಲ 1 ತಿಂಗಳಲ್ಲಿ ಅಲ್ಲಿಂದ ವಾಪಸ್ ಕಳುಹಿಸಲಾಗಿದೆ. ಆ ನಂತರದ ವರ್ಷಗಳಲ್ಲಿ ಪತಿ ದೂರವೇ ಉಳಿದಿದ್ದಾನೆ. ಮಗುವಿನ ಪೋಷಣೆಗೆ ಹಣ ಒದಗಿಸಲು ಕೂಡಾ ಒಪ್ಪಿಲ್ಲ ಎಂದು ಮಹಿಳೆ ದೂರಿದ್ದಾರೆ. 

ಒಳ್ಳೆಯ ಗಂಡು ಮಗು!
'ಯಾವುದೇ ಗಂಡು ಮಾತ್ರವಲ್ಲದೆ 'ಒಳ್ಳೆಯ ಗಂಡು' ಮಗುವಾಗಲು 95 ಪ್ರತಿಶತ ಅವಕಾಶವನ್ನು ಖಚಿತಪಡಿಸುವ ಲೈಂಗಿಕ ಸಂಭೋಗವನ್ನು ನಡೆಸುವ ನಿಖರವಾದ ವಿಧಾನ ಮತ್ತು ಸಮಯವನ್ನು ಸೂಚಿಸುವ ಸ್ಪಷ್ಟ ಟಿಪ್ಪಣಿ ಒಳಗೊಂಡ ಪುಸ್ತಕ ಅದಾಗಿತ್ತು. ಪತಿ ಮತ್ತು ಆತನ ಕುಟುಂಬವು ಹೆಣ್ಣುಮಕ್ಕಳು ಯಾವಾಗಲೂ ಆರ್ಥಿಕ ಹೊರೆ ಎಂದು ನಂಬಿದ್ದರಿಂದ ಟಿಪ್ಪಣಿಯಲ್ಲಿನ ಸೂಚನೆಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು' ಎಂದು ಮಹಿಳೆ ದೂರಿನ ಅರ್ಜಿಯಲ್ಲಿ ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ ನಗ್ತಿದ್ಲು, ಇದ್ದಕ್ಕಿದ್ದಂತೆ ಅಳ್ತಿದ್ಲು.. ಪತ್ನಿ ಹೀಗೇಕಾಡ್ತಿದ್ಳು ಎಂದು ಹೇಳಿದ ರಣವೀರ್ ಸಿಂಗ್

ಮಹಿಳೆಯ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡ ಹೈಕೋರ್ಟ್, ಪ್ರಸವಪೂರ್ವ ರೋಗನಿರ್ಣಯ ವಿಭಾಗದ ನಿರ್ದೇಶಕರು ಮತ್ತು ಹೆಚ್ಚುವರಿ ನಿರ್ದೇಶಕರಿಗೆ (ಕುಟುಂಬ ಕಲ್ಯಾಣ) ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ.
 

Follow Us:
Download App:
  • android
  • ios