Asianet Suvarna News Asianet Suvarna News

ನಾವೀನ್ಯತಾ ಸೂಚ್ಯಂಕ: ಭಾರತಕ್ಕೀಗ 40ನೇ ಸ್ಥಾನ

2022ನೇ ಸಾಲಿನ ವಿಶ್ವ ನಾವೀನ್ಯತಾ ಸೂಚ್ಯಂಕ ಬಿಡುಗಡೆಯಾಗಿದ್ದು, 7 ಸ್ಥಾನಗಳಷ್ಟುಏರಿಕೆ ಕಂಡಿರುವ ಭಾರತ 40ನೇ ಸ್ಥಾನಕ್ಕೆ ಜಿಗಿದಿದೆ. ಜಿನಿವಾ ಮೂಲದ ವಲ್ಡ್‌ರ್‍ ಇಂಟಲೆಕ್ಚುವಲ್‌ ಪ್ರಾಪರ್ಟಿ ಆರ್ಗನೈಸೇಶನ್‌ (ಡಬ್ಲ್ಯುಐಪಿಒ) ಗುರುವಾರ ಈ ವರದಿ ಬಿಡುಗಡೆ ಮಾಡಿದೆ.

Innovation Index: India is currently ranked 40 akb
Author
First Published Sep 30, 2022, 9:36 AM IST

ನವದೆಹಲಿ: 2021ರಲ್ಲಿ ಭಾರತ 46ನೇ ಸ್ಥಾನದಲ್ಲಿತ್ತು. ಅಂದರೆ ಹಿಂದಿನ ವರ್ಷಕ್ಕಿಂತ ಭಾರತ 7 ಸ್ಥಾನಗಳ ಏರಿಕೆ ಕಂಡಿದೆ. ಇನ್ನು ಕೇಂದ್ರದಲ್ಲಿ ನರೇಂದ್ರ ಮೋದಿ(Narendra Modi)  ನೇತೃತ್ವದ ಸರ್ಕಾರ (government) ಅಧಿಕಾರಕ್ಕೆ ಬಂದ ಮಾರನೇ ವರ್ಷ ಅಂದರೆ 2015ರಲ್ಲಿ ಭಾರತ 81ನೇ ಸ್ಥಾನದಲ್ಲಿತ್ತು. ಅದಕ್ಕೆ ಹೋಲಿಸಿದರೆ ಇದೀಗ 41 ಸ್ಥಾನಗಳ ಭಾರೀ ಏರಿಕೆ ಕಂಡಿದೆ. ಇನ್ನು ಭಾರತದ ನೆರೆಯ ದೇಶ ಚೀನಾ 10ನೇ ಸ್ಥಾನ ಪಡೆದುಕೊಂಡಿದೆ.

ಸಂಸ್ಥೆಗಳು, ಮಾನವ ಬಂಡವಾಳ ಮತ್ತು ಸಂಶೋಧನೆ, ಮೂಲ ಸೌಕರ್ಯ (infrastructure), ಮಾರುಕಟ್ಟೆ ಅರಿವು, ಉದ್ಯಮ ಅರಿವು, ಜ್ಞಾನ ಮತ್ತು ತಂತ್ರಜ್ಞಾನ (technology), ರಚನಾತ್ಮಕ ಫಲಿತಾಂಶ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ನೀಡಲಾಗುತ್ತದೆ.

ಶಿಕ್ಷಣ, ತಂತ್ರಜ್ಞಾನದಲ್ಲಿ ರಾಜ್ಯದ ಪ್ರಗತಿಗೆ ರಾಷ್ಟ್ರಪತಿ ಕೋವಿಂದ್‌ ಶ್ಲಾಘನೆ

ಭಾರತ ಮತ್ತು ಟರ್ಕಿ ದೇಶಗಳು ಇದೇ ಮೊದಲ ಬಾರಿಗೆ ಟಾಪ್‌ 40ರೊಳಗೆ ಸ್ಥಾನ ಪಡೆದುಕೊಂಡಿವೆ. ಉನ್ನತ ಮಧ್ಯಮ ಆದಾಯ ವರ್ಗದಲ್ಲಿ ಮೂಲಸೌಕರ್ಯ ಹೊರತುಪಡಿಸಿ ಉಳಿದೆಲ್ಲಾ ವರ್ಗದಲ್ಲೂ ಭಾರತ ಸರಾಸರಿಗಿಂತ ಉತ್ತಮ ಸಾಧನೆ ಮಾಡಿದೆ ಎಂದು ವರದಿ ಹೇಳಿದೆ. ಟಾಪ್‌ 5 ನಾವೀನತ್ಯಾ ಅರ್ಥಿಕತೆಯಲ್ಲಿ ಸ್ವಿಜರ್ಲೆಂಡ್‌, ಅಮೆರಿಕ (AMerica) , ಸ್ವೀಡನ್‌, ಬ್ರಿಟನ್‌ (Britain) , ನೆದರ್ಲೆಂಡ್‌ ಸ್ಥಾನ ಪಡೆದಿದೆ.

ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ; ಅಗ್ರಸ್ಥಾನಕ್ಕೇರಿದ ತಮಿಳುನಾಡು, ಆಂಧ್ರಕ್ಕೆ ಕೊನೆಯ ಸ್ಥಾನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ನಾವೀನ್ಯತೆಯಲ್ಲಿ ಇನ್ನಷ್ಟು ಮೇಲಕ್ಕೆ ಏರಲು ದೇಶ ಸಜ್ಜಾಗಿದೆ. ನಾವೀನ್ಯತೆ ಎಂಬುದು ಇದೀಗ ಇಡೀ ದೇಶಾದ್ಯಂತ ಚರ್ಚೆಯಲ್ಲಿರುವ ವಿಷಯ. ನಮ್ಮ ಸಾಧಕರಿಗೆ ಅಭಿನಂದನೆಗಳು. ನಾವು ಈವರೆಗೆ ಸಾಕಷ್ಟು ದೂರ ಸಾಗಿ ಬಂದಿದ್ದೇವೆ ಮತ್ತು ಇನ್ನಷ್ಟು ಎತ್ತರಕ್ಕೆ ಏರಲು ಬಯಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. 
 

Follow Us:
Download App:
  • android
  • ios