ಭಾರತ ರಾಷ್ಟ್ರೀಯ ಲೋಕ ದಳ (ಐಎನ್‌ಎಲ್‌ಡಿ) ಪಕ್ಷದ ನಾಯಕ ಅಭಯ್‌ ಸಿಂಗ್‌ ಚೌತಲಾ ರಾಜೀನಾಮೆ|  ಟ್ರಾಕ್ಟರ್‌ನಲ್ಲಿ ಬಂದು ಹರ್ಯಾಣ ಶಾಸಕ ರಾಜೀನಾಮೆ!

ಚಂಡೀಗಢ(ಜ.28): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಾರ‍ಯಣದ ಭಾರತ ರಾಷ್ಟ್ರೀಯ ಲೋಕ ದಳ (ಐಎನ್‌ಎಲ್‌ಡಿ) ಪಕ್ಷದ ನಾಯಕ ಅಭಯ್‌ ಸಿಂಗ್‌ ಚೌತಲಾ ಬುಧವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಹಸಿರು ಟ್ರ್ಯಾಕ್ಟರ್‌ ಏರಿ ವಿಧಾನಸಭಾ ಆವರಣಕ್ಕೆ ಬಂದ ಚೌತಲಾ ಅವರು, ಕಳೆದ ಕೆಲವು ತಿಂಗಳುಗಳಿಂದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿ, ರಾಜೀನಾಮೆ ಸಲ್ಲಿಸಿದರು.

ಚೌತಲಾ ಅವರು 90 ಮಂದಿ ಶಾಸಕರಿರುವ ಹರಾರ‍ಯಣ ವಿಧಾನಸಭೆಯಲ್ಲಿ ಐಎನ್‌ಎಲ್‌ಡಿ ಪಕ್ಷದಿಂದ ನೇಮಕವಾಗಿರುವ ಏಕೈಕ ಶಾಸಕರಾಗಿದ್ದಾರೆ.