ಬಾಕಿ ಸಂಬಳ ಕೇಳಲು ಬಂದ ನೌಕರನಿಗೆ ಮಹಿಳಾ ಉದ್ಯಮಿಯೋರ್ವಳು ತನ್ನ ಬೂಟು ನೆಕ್ಕುವಂತೆ ಮಾಡಿದ ಹಾಗೂ ಇತರ ನೌಕರರಿಂದ ಬೆಲ್ಟ್‌ನಿಂದ ಹೊಡೆಸಿದ ಹೇಯ ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ನಡೆದಿದೆ. 

ಮೊರ್ಬಿ: ಬಾಕಿ ಸಂಬಳ ಕೇಳಲು ಬಂದ ನೌಕರನಿಗೆ ಮಹಿಳಾ ಉದ್ಯಮಿಯೋರ್ವಳು ತನ್ನ ಬೂಟು ನೆಕ್ಕುವಂತೆ ಮಾಡಿದ ಹಾಗೂ ಇತರ ನೌಕರರಿಂದ ಬೆಲ್ಟ್‌ನಿಂದ ಹೊಡೆಸಿದ ಹೇಯ ಘಟನೆ ಗುಜರಾತ್‌ನ ಮೊರ್ಬಿಯಲ್ಲಿ ನಡೆದಿದೆ. ಇಲ್ಲಿನ ಸೆರಾಮಿಕ್‌ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನಿಲೇಶ್‌ ದಾಲ್ಸಾನಿಯಾ ಎಂಬ ವ್ಯಕ್ತಿಯನ್ನು ಕೇವಲ 18 ದಿನಗಳಲ್ಲೇ ವಜಾಗೊಳಿಸಲಾಗಿತ್ತು. ಬಳಿಕ ಆ 18 ದಿನಗಳ ತನ್ನ ಕೆಲಸಕ್ಕೆ ನೀಡಬೇಕಾಗಿದ್ದ ಸಂಬಳ ಕೇಳಲು ಬುಧವಾರ ನಿಲೇಶ್‌ ತನ್ನ ಇಬ್ಬರು ಸ್ನೇಹಿತರೊಂದಿಗೆ ರಾಣಿಬಾ ಇಂಡಸ್ಟ್ರೀಸ್‌ (ಟೈಲ್ಸ್‌ ಕಂಪನಿ)ಗೆ ತೆರಳಿದ್ದ.

ಈ ವೇಳೆ ನಿಲೇಶ್‌ನನ್ನು ಕಂಡು ಕೋಪಗೊಂಡ ರಾಣಿಬಾ ಮತ್ತು ಆಕೆಯ ಸಹಾಯಕ ಮೊದಲು ಮೂವರಿಗೂ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಐವರು ಇತರ ಆರೋಪಿಗಳು ನಿಲೇಶ್‌ಗೆ ತೀವ್ರವಾಗಿ ಥಳಿಸಿದ್ದಾರೆ. ಅದಾಗ್ಯೂ ಆತನನ್ನು ಕಂಪನಿಯ ತಾರಸಿಗೆ ಕರೆದೊಯ್ದು ಮತ್ತೆ ಬೆಲ್ಟ್‌ನಿಂದ ಹೊಡೆದಿದ್ದಾರೆ. ಈ ವೇಳೆ ನಿಲೇಶ್‌ ದಲಿತ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಈ ವೇಳೆ ರಾಣಿಬಾ ನಿಲೇಶ್‌ಗೆ ತನ್ನ ಬೂಟು ನೆಕ್ಕುವಂತೆ ಮಾಡಿದ್ದಾಳೆ. ಅಲ್ಲದೇ ‘ಇನ್ನೊಮ್ಮೆ ರಾಣಿಬಾಗೆ ಕರೆ ಮಾಡಿ ಸಂಬಳ ಕೇಳುವುದಿಲ್ಲ ಈ ಕಡೆ ಬರುವುದಿಲ್ಲ’ ಎಂಬ ಬಲವಂತದ ಹೇಳಿಕೆ ನೀಡಿಸಿ ಅದನ್ನು ಚಿತ್ರೀಕರಿಸಿದ್ದಾರೆ. ಇನ್ನೊಮ್ಮೆ ಕಂಪನಿಯ ಕಡೆ ಕಂಡರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾಳೆ. ಇದೀಗ ನಿಲೇಶ್‌ ಮತ್ತು ಇಬ್ಬರು ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದಾರೆ.

ದೇಶದ ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮಾರಿಯಾ ನೇಮಕ : ಇವರು ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ

ರಾಯಚೂರು: ಸಚಿವ ಎನ್ಎಸ್ ಬೋಸರಾಜು ಬೆಂಬಲಿಗನ ಭೀಕರ ಹತ್ಯೆ!