Asianet Suvarna News Asianet Suvarna News

ರಾಯಚೂರು: ಸಚಿವ ಎನ್ಎಸ್ ಬೋಸರಾಜು ಬೆಂಬಲಿಗನ ಭೀಕರ ಹತ್ಯೆ!

ಸಚಿವ ಎನ್‌ಎಸ್ ಬೋಸರಾಜರ ಕಟ್ಟಾ ಬೆಂಬಲಿಗ, ದಲಿತ ಮುಖಂಡನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ, ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ನಡೆದಿದೆ. 

Horrible killing of a supporter of Minister NS Bosaraj at manvi rav
Author
First Published Oct 30, 2023, 12:21 PM IST

ರಾಯಚೂರು (ಅ.30): ಸಚಿವ ಎನ್‌ಎಸ್ ಬೋಸರಾಜರ ಕಟ್ಟಾ ಬೆಂಬಲಿಗ, ದಲಿತ ಮುಖಂಡನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ, ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ನಡೆದಿದೆ. 

ಪ್ರಸಾದ್ (40) ಹತ್ಯೆಗೀಡಾದ ದುರ್ದೈವಿ. ಸಚಿವ ಎನ್‌ಎಸ್ ಬೋಸರಾಜು ಕಟ್ಟಾ ಬೆಂಬಲಿಗನಾಗಿದ್ದ ಪ್ರಸಾದ್, ದಲಿತ ಸಂಘಟನೆಯಲ್ಲಿ ಗುರುತಿಸಿಕೊಂಡು ಹಲವು ಹೋರಾಟಗಳಲ್ಲೂ ಸಕ್ರಿಯನಾಗಿದ್ದ. ಬೈಕ್‌ನಲ್ಲಿ ಹೋಗುವಾಗ ದಾರಿಯಲ್ಲಿ ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳು. ವೈಯಕ್ತಿಕ ದ್ವೇಷ ಹಿನ್ನೆಲೆ ನಡೆದಿರುವ ಶಂಕೆ. ದುಷ್ಕರ್ಮಿಗಳು ಏಕಾಏಕಿ ಕೊಡಲಿಯಿಂದ ನಡೆಸಿದ ಭೀಕರ  ದಾಳಿಗೆ ಸ್ಥಳದಲ್ಲಿ ಮೃತಪಟ್ಟಿರುವ ಪ್ರಸಾದ್.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಎಸ್ ಪಿ ನಿಖಿಲ್. ಬಿ.ಭೇಟಿ ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮಾನ್ವಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ. ಸದ್ಯ ಹತ್ಯೆ ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಜನ ಪ್ರದೇಶದಲ್ಲಿ ಬಿದ್ದಿತ್ತು ರೌಡಿಶೀಟರ್ ಹೆಣ: ಮುದಿರೌಡಿ ಎಂದು ಕೆಣಕಿದ್ದೇ ಕೊಲೆಗೆ ಕಾರಣವಾಯ್ತಾ..?

Follow Us:
Download App:
  • android
  • ios