ದೇಶದ ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮಾರಿಯಾ ನೇಮಕ : ಇವರು ಈ ಹುದ್ದೆಗೇರಿದ ಮೊದಲ ದಲಿತ ವ್ಯಕ್ತಿ

ದೇಶದ ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮಾರಿಯಾ(63) ನೇಮಕಗೊಂಡಿದ್ದಾರೆ. ಈ ಮೂಲಕ ಈ ಹುದ್ದೆಗೆ ಏರಿದ ಮೊದಲ ದಲಿತ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೀರಾಲಾಲ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

New Delhi Heeralal Samaria was appointed as the countrys Chief Information Commissioner, the first Dalit officer to be elevated to the post akb

ನವದೆಹಲಿ: ದೇಶದ ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ್‌ ಸಮಾರಿಯಾ(63) ನೇಮಕಗೊಂಡಿದ್ದಾರೆ. ಈ ಮೂಲಕ ಈ ಹುದ್ದೆಗೆ ಏರಿದ ಮೊದಲ ದಲಿತ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೀರಾಲಾಲ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಿಯಾ ಈವರೆಗೂ ಮಾಹಿತಿ ಆಯೋಗದ ಆಯುಕ್ತರಲ್ಲಿ ಒಬ್ಬರಾಗಿದ್ದರು 2020ರಲ್ಲಿ ಮಾಹಿತಿ ಆಯೋಗಕ್ಕೆ ನೇಮಕವಾಗುವ ಮೊದಲು ಐಎಎಸ್‌ ಅಧಿಕಾರಿಯಾಗಿದ್ದು(IAS Officer) ಕಾರ್ಮಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಈಗ ಪದೋನ್ನತಿ ಭಾಗ್ಯ ಲಭಿಸಿದೆ.

ಅ.3ರಂದು ವೈ.ಕೆ . ಸಿನ್ಹಾ ಅವರ ಅಧಿಕಾರಾವಧಿ ಮುಗಿದ ನಂತರ ಹುದ್ದೆ ಖಾಲಿ ಇತ್ತು. ಸುಪ್ರೀಂಕೋರ್ಟ್‌ ಅ.30ರಂದು ಕೇಂದ್ರ ಸರ್ಕಾರಕ್ಕೆ (Union Govt) ಎಚ್ಚರಿಕೆ ನೀಡಿ ಮಾಹಿತಿ ಆಯೋಗದಲ್ಲಿ ಖಾಲಿ ಹುದ್ದೆಗಳನ್ನು ಉಳಿಸಿಕೊಂಡಲ್ಲಿ ಮಾಹಿತಿ ಹಕ್ಕು ಕಾಯ್ದೆ ಎಂಬುದು ಮರಣ ಪತ್ರವಾಗುತ್ತದೆ ಎಂದು ಕಿಡಿಕಾರಿತ್ತು. ಅದರ ಬೆನ್ನಲ್ಲೇ ಸಮಾರಿಯಾ ನೇಮಕ ನಡೆದಿದೆ.

ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ

ರಾಜ್ಯಪಾಲರ ವಿಳಂಬ ಧೋರಣೆಗೆ ಸುಪ್ರೀಂ ಅತೃಪ್ತಿ

ನವದೆಹಲಿ: ರಾಜ್ಯಪಾಲರು ಮಸೂದೆಗಳಿಗೆ ಸಹಿ ಹಾಕುವುದನ್ನು ತಡ ಮಾಡುತ್ತಿರುವ ಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಕೋರ್ಟಲ್ಲಿ ದೂರು ದಾಖಲಾಗುವ ಮುನ್ನವೇ ಅವರು ತಮ್ಮ ಕರ್ತವ್ಯ ನಿರ್ವಹಿಸಿದರೆ ಒಳಿತು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಪಂಜಾಬ್‌ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್ (Banwarilal Purohit) ಸರ್ಕಾರ ಮಂಡಿಸಿದ್ದ 3 ಆರ್ಥಿಕ ಮಸೂದೆಗಳಿಗೆ ಒಪ್ಪಿಗೆ ಕೊಡದೆ ವಿಳಂಬ ಮಾಡಿದ್ದಾರೆ ಎಂದು ಆಪ್‌ (AAP government) ಸರ್ಕಾರ ಕೋರ್ಟ್‌ ಮೊರೆ ಹೋಗಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಈ ಅಭಿಪ್ರಾಯಗಳನ್ನು ಹೇಳಿದೆ.

ಗಾಜಾ ನಗರ ಪೂರ್ಣ ಸುತ್ತುವರಿದ ಇಸ್ರೇಲ್‌ಗೆ ಕನಿಷ್ಠ 1 ಲಕ್ಷ ಭಾರತೀಯ ಕಟ್ಟಡ ಕಾರ್ಮಿಕರು?

‘ರಾಜ್ಯಪಾಲರು ತಾವು ಜನಪ್ರತಿನಿಧಿಗಳಲ್ಲ ಎಂಬುದನ್ನು ಅರಿಯಬೇಕು ಹಾಗೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ತಮ್ಮ ವಿವೇಚನೆಯಲ್ಲಿ ಕೆಲಸ ಮಾಡಿದರೆ ಪ್ರಜಾಪ್ರಭುತ್ವದ ಸುಗಮ ಚಲನೆಗೆ ಅವಕಾಶವಾಗುತ್ತದೆ. ಕೋರ್ಟಲ್ಲಿ ದೂರು ದಾಖಲಾಗುವ ಮುನ್ನವೇ ಅವರು ತಮ್ಮ ಕರ್ತವ್ಯ ನಿರ್ವಹಿಸಿದರೆ ಉತ್ತಮ’ ಎಂದು ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ ( D.Y. Chandrachuda) ಅವರ ಪೀಠ ಹೇಳಿತು.

ಇದೇ ವೇಳೆ, ‘ಪ್ರಸ್ತುತ ರಾಜ್ಯಪಾಲರು 3 ಮಸೂದೆಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ಮುಂದಿನ ವಿಚಾರಣೆಯಲ್ಲಿ ತಿಳಿಸಬೇಕು’ ಎಂದು ಪಂಜಾಬ್‌ ಸರ್ಕಾರವನ್ನು ಪ್ರತಿದ್ಧಿಸುತ್ತಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Tushar Mehta) ಅವರಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.

Latest Videos
Follow Us:
Download App:
  • android
  • ios