5000 ವರ್ಷಗಳ ಹಿಂದೆ ಪಾಂಡವರ ರಾಜಧಾನಿ ಇಂದ್ರಪ್ರಸ್ಥ ಹೇಗಿತ್ತು? AI ವಿಡಿಯೋ ನೋಡಿ ರೋಮಾಂಚನಗೊಂಡ ಜನರು
5000 ವರ್ಷಗಳ ಹಿಂದಿನ ಪಾಂಡವರ ರಾಜಧಾನಿ ಇಂದ್ರಪ್ರಸ್ಥವನ್ನು AI ತಂತ್ರಜ್ಞಾನದ ಮೂಲಕ ಮರುಸೃಷ್ಟಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಚಕಿತಗೊಳಿಸಿದೆ.
ಪಾಂಡವರ ರಾಜಧಾನಿ ಹೆಸರು ಇಂದ್ರಪ್ರಸ್ಥ. ನೀವು ಮಹಾಭಾರತ ಆಧಾರಿತ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಪಾಂಡವರ ರಾಜಧಾನಿ ಮತ್ತು ಅವರ ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಂಡಿರುತ್ತೀರಿ. ಇಂದಿಗೂ ಮಾಹಾಭಾರತ ಮತ್ತು ರಾಮಾಯಾಣ ಮಹಾಕಾವ್ಯಗಳನ್ನು ಆಧರಿಸಿದ ಸಿನಿಮಾ, ವೆಬ್ ಸಿರೀಸ್, ಧಾರಾವಾಹಿಗಳು ಬರುತ್ತಲೇ ಇರುತ್ತವೆ. ಈಗಾಗಲೇ ಬಂದಿರುವ ಚಿತ್ರಗಳಲ್ಲಿ ಅಂದಿನ ನಗರಗಳು ಹೇಗಿದ್ದವು ಎಂಬುದನ್ನು ತೋರಿಸುವಲ್ಲಿ ನಿರ್ದೇಶಕರು ಯಶಸ್ಸಿಯೂ ಆಗಿದ್ದಾರೆ. ಕ್ರಿಸ್ತ ಪೂರ್ವ 3000 ಕಾಲಘಟ್ಟದಲ್ಲಿ ಇಂದ್ರಪ್ರಸ್ಥ ಎಂಬ ನಗರವಿತ್ತು ಎಂಬುದರ ಬಗ್ಗೆ ಉಲ್ಲೇಖವಿದೆ.
5 ಸಾವಿರಗಳ ಹಿಂದೆ ಪಾಂಡವರ ರಾಜಧಾನಿ ಹೇಗಿತ್ತು ಎಂಬುವುದು ಕಥೆ ಮತ್ತು ಕಾವ್ಯಗಳಲ್ಲಿತ್ತು. ಇದೀಗ ಆ ದೃಶ್ಯ ವೈಭೋಗವನ್ನು AI ಮೂಲಕ ತೋರಿಸಲಾಗಿದೆ. ಈ ಅದ್ಭುತವಾದ ವಿಡಿಯೋ ನೋಡಿದ್ರೆ ರೋಮ ರೋಮಗಳಲ್ಲಿ ರೋಮಾಂಚನವಾಗುತ್ತದೆ. ಸದ್ಯ ಈ ಸುಂದರವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭಕ್ತಿಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಈ ವಿಡಿಯೋವನ್ನು ಪ್ರಿಯಾಂಕು ಶರ್ಮಾ (@priyanku_sarmah) ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಪ್ರಿಯಾಂಕು ಶರ್ಮಾ, ಓರ್ವ ಎಐ ಸ್ಪೆಷಲಿಸ್ಟ್ ಮತ್ತು ಎಐ ಫಿಲಂ ಮೇಕರ್ ಆಗಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಹಾಯದಿಂದ ಪ್ರತಿಬಾರಿಗೂ ಹೊಸತನದ ವಿಡಿಯೋ ಮತ್ತು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಎಐ ತಂತ್ರಜ್ಞಾನದ ಸಹಾಯದೊಂದಿಗೆ ತಮ್ಮ ಕೌಶಲ್ಯ ಬಳಸಿ ಮನಮೋಹಕ ವಿಡಿಯೋ ರಚಿಸಿದ್ದಾರೆ.
ಇದನ್ನೂ ಓದಿ: ಒಂದು ಗಂಟೆಯಲ್ಲಿ ತಿಮ್ಮಪ್ಪನ ದರ್ಶನ; ಟಿಟಿಡಿ ಆಡಳಿತ ಮಂಡಳಿಯಿಂದ ಹೇಳಿಕೆ ಬಿಡುಗಡೆ
ಎಐ ಕಲ್ಪನೆಯಲ್ಲಿ ಮೂಡಿ ಬಂದ ಇಂದ್ರಪ್ರಸ್ಥ ನಗರದ ದೃಶ್ಯ ನೋಡಗರನ್ನು ಚಕಿತಗೊಳಿಸುತ್ತದೆ. ಪಾಂಡವರ ಭವ್ಯ ಸಾಮ್ರಾಜ್ಯದ ಹೇಗಿತ್ತು ಎಂದು ಕಥೆಯಲ್ಲಿ ಕೇಳಿದ್ದರಿಗೆ ಅದರ ದೃಶ್ಯವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಬೃಹತ್ ಅರಮನೆಗಳು, ಮಾರುಕಟ್ಟೆ, ಸುಂದರವಾದ ಉದ್ಯಾನವನ, ವ್ಯಾಪಾರ ಮಳಿಗೆಗಳು ಸೇರಿದಂತೆ ಅನೇಕ ಸ್ಥಳಗಳನ್ನು ವಿಡಿಯೋದಲ್ಲಿ ನೋಡಬಹುದು. ಇಷ್ಟು ಮಾತ್ರವಲ್ಲ ರಾಜ, ಸೈನಿಕರು ಮತ್ತು ಸಾಮಾನ್ಯ ಸೈನಿಕರನ್ನು ಸಹ ಇಲ್ಲಿ ಕಾಣಬಹುದು. ಮಡಿಕೆ ಮಾಡೋದು, ಮೀನು ಮಾರಾಟ, ಗುರುಕುಲದಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಸನ್ನಿವೇಶಗಳನ್ನು ವಿಡಿಯೋದಲ್ಲಿ ಸೃಷ್ಟಿಸಲಾಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಈ ರೀತಿಯ ನಗರ ನಮ್ಮ ಕಾಲದಲ್ಲಿ ಇಲ್ಲವಲ್ಲಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ರಚನೆ ಮಾಡಿದ ಎಐ ತಂತ್ರಜ್ಞಾನ ಮತ್ತು ಪ್ರಿಯಾಂಕು ಶರ್ಮಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ವಿಡಿಯೋಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ವಿಡಿಯೋ ನೋಡಿ ಸಂತಸದಿಂದ ಜನರು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: AI Chatbots ಜೊತೆ ಎಂದಿಗೂಈ ವಿಷಯಗಳನ್ನು ಶೇರ್ ಮಾಡಿಕೊಳ್ಳಬೇಡಿ!