ನೆರೆಮನೆಯವರಿಂದ ಜೀವ ಭಯ ಎದುರಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿಕೊಂಡಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಂದೋರ್: ನೆರೆಮನೆಯವರಿಂದ ಜೀವ ಭಯ ಎದುರಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿಕೊಂಡಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಾನು ಹಾಗೂ ತನ್ನ ಕುಟುಂಬದವರು ತಮ್ಮ ನೆರೆಮನೆಯವರಿಂದ ಜೀವ ಬೆದರಿಕೆ ಎದುರಿಸುತ್ತಿದ್ದೇವೆ. ಹೀಗಾಗಿ ಸುರಕ್ಷತೆಗಾಗಿ ಹಾಗೂ ಎಲ್ಲಾದರು ತನ್ನ ಮೇಲೆ ಅವರು ಹಲ್ಲೆ ಮಾಡಿದರೆ ಸಾಕ್ಷ್ಯಕ್ಕಾಗಿ ತನ್ನ ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿರುವುದಾಗಿ ಆತ ಹೇಳಿಕೊಂಡಿದ್ದಾರೆ. ಇವರು ಇಂದೋರ್‌ನ ಹೀರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಿ ನಗರದ ನಿವಾಸಿಯಾಗಿದ್ದು, ವೈರಲ್ ಆದ ವೀಡಿಯೋದಲ್ಲಿ ತಾವು ಅನುಭವಿಸುತ್ತಿರುವ ಭಯಾನಕ ಸ್ಥಿತಿಯನ್ನು ವಿವರಿಸಿದ್ದಾರೆ. ಅಲ್ಲದೇ ತನಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
ಸತೀಶ್ ಅವರೇ ವಿಡಿಯೋದಲ್ಲಿ ವಿವರಿಸಿದಂತೆ, ಅವರು ತಮ್ಮ ನೆರೆಹೊರೆಯವರಾದ ಬಲಿರಾಮ್ ಚೌಹಾಣ್ ಮತ್ತು ಮುನ್ನಾ ಚೌಹಾಣ್ ಅವರೊಂದಿಗೆ ಬಹಳ ಸಮಯದಿಂದ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಹೊಂದಿದ್ದು, ಬಲಿರಾಮ್ ಮತ್ತು ಮುನ್ನಾ ತಮ್ಮ ಆಸ್ತಿಯನ್ನು ಕಬಳಿಸಲು ಬಯಸುತ್ತಿದ್ದಾರೆ ಮತ್ತು ಈ ವಿವಾದದಿಂದಾಗಿ ಪ್ರತಿದಿನ ಜಗಳಗಳು ನಡೆಯುತ್ತಿವೆ ಎಂದು ಸತೀಶ್ ಆರೋಪಿಸಿದ್ದಾರೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಅವರು ತಮ್ಮ ಜೀವಕ್ಕೆ ಅಪಾಯ ಎದುರಾಗಿದ್ದು,ತಮ್ಮ ನೆರೆಮನೆಯವರು ತಮ್ಮ ಮನೆಗೆ ನುಗ್ಗಿ ತಮ್ಮ ಕುಟುಂಬ ಸದಸ್ಯರನ್ನು ಥಳಿಸಿದ್ದಾರೆ. ತಮ್ಮ ಮನೆಯಲ್ಲಿ ಅಳವಡಿಸಲಾದ ಕ್ಯಾಮೆರಾವನ್ನು ನೆರೆಹೊರೆಯವರು ತೆಗೆದು ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಎಕ್ಸ್‌ನಲ್ಲಿ ಈ ವೀಡಿಯೋವನ್ನು @Anurag_Dwary ಎಂಬುವವರು ಹಂಚಿಕೊಂಡಿದ್ದು, ವೀಡಿಯೊದಲ್ಲಿ, ಮೊದಲ ನೋಟದಲ್ಲಿ, ಈ ಚಿತ್ರವು ನಿಮ್ಮನ್ನು ನಗಿಸಬಹುದು, ಆದರೆ ಕೇಳಿ, ಇಂದೋರ್‌ನಲ್ಲಿ, ಈ ವ್ಯಕ್ತಿ ತನಗೆ ಎದುರಾಗಿರುವ ಸಮಸ್ಯೆಯಿಂದಾಗಿ ಹೆಲ್ಮೆಟ್‌ಗೆ ಸಿಸಿಟಿವಿ ಕ್ಯಾಮೆರಾ ಜೋಡಿಸಿಕೊಂಡು ತಿರುಗಾಡುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬಕ್ಕೆ ಯಾವುದೇ ಭದ್ರತೆಯನ್ನು ಒದಗಿಸಿಲ್ಲ, ಸತೀಶ್ ಮತ್ತು ಅವರ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಲು ಪ್ರಯತ್ನಿಸಿದರೂ ಅವರಿಗೆ ಸಹಾಯ ನಿರಾಕರಿಸಿದ್ದಾರೆ ಎಂದು ಸತೀಶ್ ದೂರಿದ್ದಾರೆ.
ಹೀಗಾಗಿ ಎಲ್ಲಾ ಪ್ರಯತ್ನಗಳ ನಂತರ ಸತೀಶ್ ಅಂತಿಮವಾಗಿ ಸ್ವತಃ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಮುಂದಾಗಿದ್ದು, ಯಾವುದೇ ದುಷ್ಕೃತ್ಯ ನಡೆದರೆ ಪುರಾವೆ ಪಡೆಯಲು ತಲೆಯ ಮೇಲೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿಕೊಂಡಿದ್ದಾರೆ. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭವಿಷ್ಯದಲ್ಲಿ ಯಾವುದೇ ಕಾನೂನು ಕ್ರಮಕ್ಕಾಗಿ ಸಾಕ್ಷಿಗಾಗಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಇಂದೋರ್‌ನಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
