ಭಾರತ-ಚೀನಾ ಸಂಘರ್ಷದ ಬೆನ್ನಲ್ಲೇ ಅರುಣಾಚಲ ಪ್ರದೇಶದ ತವಾಂಗ್‌ ಜಿಲ್ಲೆಯ ಚೀನಾ ಗಡಿರೇಖೆ ಬಳಿ ಉತ್ತಮ ಸಂಪರ್ಕಕ್ಕಾಗಿ 23 ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ಇಟಾನಗರ: ಭಾರತ-ಚೀನಾ ಸಂಘರ್ಷದ ಬೆನ್ನಲ್ಲೇ ಅರುಣಾಚಲ ಪ್ರದೇಶದ ತವಾಂಗ್‌ ಜಿಲ್ಲೆಯ ಚೀನಾ ಗಡಿರೇಖೆ ಬಳಿ ಉತ್ತಮ ಸಂಪರ್ಕಕ್ಕಾಗಿ 23 ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಬುಧವಾರ ಮಾತನಾಡಿದ ತವಾಂಗ್‌ ಜಿಲ್ಲಾಧಿಕಾರಿ ಕೆ.ಎನ್‌ ದಾಮೊ, ‘ಈಗಿರುವ ಟವರ್‌ಗಳು ನಿರೀಕ್ಷಿತ ಸೇವೆ ನೀಡುತ್ತಿಲ್ಲ. ರಕ್ಷಣಾ ಪಡೆ ಮಾತ್ರವಲ್ಲದೇ ನಾಗರಿಕರಿಗೂ ಇದರಿಂದ ತೊಂದರೆಯುಂಟಾಗುತ್ತಿದೆ. ತವಾಂಗ್‌ ಸೇರಿ ಅನೇಕ ನಾಗರಿಕ ಪ್ರದೇಶಗಳಿಗಾಗಿ ಒಟ್ಟು 43 ಟವರ್‌ಗಳಿಗಾಗಿ ಸರ್ಕಾರಕ್ಕೆ ಜಿಲ್ಲಾಡಳಿತ ಕೋರಿತ್ತು. ಈಗ ಎಸ್‌ಎನ್‌ಎಲ್‌ ಹಾಗೂ ಭಾರ್ತಿ ಏರ್‌ಟೆಲ್‌ನ 23 ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದಿದ್ದಾರೆ.

ಚೀನಾದ ತವಾಂಗ್‌ ತಂಟೆಗೆ ಬ್ರೇಕ್‌; ತಿರುಗೇಟಿನ ಬಳಿಕ ಕೆಂಪು ಸೈನಿಕರು ವಾಪಸ್‌: ಸಂಸತ್ತಿಗೆ ಕೇಂದ್ರ ಮಾಹಿತಿ

ಚೀನಾಗೆ ಕರಾಟೆ ಪಂಚ್‌ ನೀಡಲು ಸಿದ್ಧತೆ: ITBP ಯೋಧರಿಗೆ ತರಬೇತಿ..!