ಸ್ವದೇಶಿ ನಿರ್ಮಿತ ಲಘು ಕಾಪ್ಟರ್‌ಗಳು ಇಂದು ಭಾರತೀಯ ವಾಯುಪಡೆಗೆ ಸೇರ್ಪಡೆ
ದೇಶೀ ನಿಮಿತ ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಅನ್ನು ಇಂದು ಭಾರತೀಯ ವಾಯುಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್. ಚೌಧರಿ ಅವರು ಜೋಧಪುರದಲ್ಲಿ ಈ ಹೆಲಿಕಾಪ್ಟರ್‌ನ್ನು ಲೋಕಾರ್ಪಣೆ ಮಾಡಲಿದ್ದಾರೆ.
ನವದೆಹಲಿ: ದೇಶೀ ನಿಮಿತ ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಅನ್ನು ಇಂದು ಭಾರತೀಯ ವಾಯುಪಡೆಗೆ ಸೇರಿಸಿಕೊಳ್ಳಲಾಗುತ್ತದೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿ.ಆರ್. ಚೌಧರಿ ಅವರು ಜೋಧಪುರದಲ್ಲಿ ಈ ಹೆಲಿಕಾಪ್ಟರ್‌ನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಈಗಿನ ‘ಧ್ರುವ’ ಹೆಲಿಕಾಪ್ಟರ್ ಮಾದರಿಯ ಈ ಹೆಲಿಕಾಪ್ಟರ್‌ಗಳು ಬಹು-ಉದ್ದೇಶಗಳಿಗೆ (Multi Task) ಬಳಸಲ್ಪಡುತ್ತವೆ. ಈ ಹೆಲಿಕಾಪ್ಟರ್‌ಗಳ (Helicopters)ಮೂಲಕ ಕ್ಷಿಪಣಿಗಳನ್ನೂ ಹಾರಿಸಬಹುದು ಹಾಗೂ ಶಸ್ತ್ರಾಸ್ತ್ರಗಳನ್ನೂ ಬಳಸಬಹುದು. ಇವುಗಳ ಸೇರ್ಪಡೆಯಿಂದ ದೇಶದ ವಾಯುಪಡೆಗೆ (Indian Airforce) ಭಾರಿ ಬಲ ಬರಲಿದೆ ಎಂದು ಸರ್ಕಾರ ಸಂತಸ ವ್ಯಕ್ತಪಡಿಸಿದೆ.
ಹೊಸ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಸಿದ್ದಪಡಿಸಿದ ಹುಬ್ಬಳ್ಳಿ ಯುವಕ, ಶೀಘ್ರದಲ್ಲೇ ಸೇನೆಗೆ ಸೇರ್ಪಡೆ!
5.8 ಟನ್ ತೂಕ
ಈ ಲಘು ಯುದ್ಧ ಕಾಪ್ಟರ್‌ಗಳು 5.8 ಟನ್ ತೂಕವಿದ್ದು, ಎರಡು ಎಂಜಿನ್‌ಗಳನ್ನು ಹೊಂದಿದೆ. 3887 ಕೋಟಿ ರೂ. ವೆಚ್ಚದಲ್ಲಿ ಇಂಥ 15 ಕಾಪ್ಟರ್‌ಗಳನ್ನು ಸೇನೆಗೆ ಖರೀದಿಸಲು ಸರ್ಕಾರ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
Light Combat Helicopter: ರಾಜಸ್ಥಾನ ಗಡಿಯಲ್ಲಿ ಸ್ವದೇಶಿ ಅಟ್ಯಾಕ್ ಹೆಲಿಕಾಪ್ಟರ್ ನಿಯೋಜಿಸಲಿರುವ ಏರ್‌ಫೋರ್ಸ್!
ಕಣ್ತಪ್ಪಿಸುವ ಸಾಮರ್ಥ್ಯ
ಎಲ್‌ಸಿಎಚ್ ಕಾಪ್ಟರ್, ಹಲವು ಸ್ಟೆಲ್ತ್ (ಶತ್ರುಗಳ ಕಣ್ತಪ್ಪಿಸುವ) ಗುಣಗಳನ್ನು ಹೊಂದಿದೆ. ತನ್ನ ಮೇಲಿನ ದಾಳಿ ತಡೆಯಲು ರಕ್ಷಣಾ ವ್ಯವಸ್ಥೆ ಕೂಡಾ ಹೊಂದಿದೆ. ರಾತ್ರಿ ವೇಳೆ ಕೂಡಾ ದಾಳಿ ನಡೆಸಬಲ್ಲದಾಗಿದೆ. ಅತ್ಯಂತ ಎತ್ತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬಲ್ಲದು. ದಾಳಿಯ ಜೊತೆಗೆ ರಕ್ಷಣಾ ಕಾರ್ಯಚರಣೆ, ಕಣ್ಗಾವಲಿಗೂ ಕೂಡಾ ಇದನ್ನೂ ಬಳಸಬಹುದು.