'ಮೇಡಮ್ ನಿಮಗೆ ನಾನು ಜಗದೀಪ್, ಉಪರಾಷ್ಟ್ರಪತಿಯಲ್ಲ' 83 ವರ್ಷದ ಶಾಲಾ ಟೀಚರ್‌ಗೆ ಹೇಳಿದ ಜಗದೀಪ್ ಧನ್ಕರ್!
ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಎರಡು ದಿನಗಳ ಭೇಟಿಗಾಗಿ ಕೇರಳದಲ್ಲಿದ್ದಾರೆ. ಈ ವೇಳೆ ಅವರು ತಮ್ಮ ಶಾಲಾ ಟೀಚರ್ 83 ವರ್ಷದ ರತ್ನಾ ನಾಯರ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ನವದೆಹಲಿ (ಮೇ.22): ಭಾರತದಲ್ಲಿ, ಶಿಕ್ಷಕ-ವಿದ್ಯಾರ್ಥಿ ನಡುವಿನ ಸಂಬಂಧವನ್ನು ಸಂಸ್ಕೃತ ಶ್ಲೋಕಗಳು ಮತ್ತು ವೇದ ಶ್ಲೋಕಗಳಲ್ಲಿ ದೈವತ್ವದ ಕಲ್ಪನೆಗಳೊಂದಿಗೆ ವಿವರಿಸಲಾಗಿದೆ. ವಾರ್ಷಿಕವಾಗಿ, ಭಾರತೀಯ ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ತಮ್ಮ ಶಿಕ್ಷಕರ ಕೊಡುಗೆಯನ್ನು ಸೆಪ್ಟೆಂಬರ್ 5 ರಂದು ಆಚರಿಸುತ್ತಾರೆ, ಇದನ್ನು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಮತ್ತು ಐದನೇ ಅತಿದೊಡ್ಡ ಆರ್ಥಿಕತೆಯಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಭಾರತದ ಉಪರಾಷ್ಟ್ರಪತಿ 72 ವರ್ಷದ ಜಗದೀಪ್ ಧನ್ಕರ್ ಕೇರಳದಲ್ಲಿ ತಮ್ಮ 83 ವರ್ಷದ ಶಾಲಾ ಟೀಚರ್ ರತ್ನಾ ನಾಯರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದು ವಿದ್ಯಾರ್ಥಿ ಹಾಗೂ ಶಿಕ್ಷಕ ನಡುವಿನ ಸಂಬಂಧದ ಸ್ಪಷ್ಟ ಚಿತ್ರಣ ನೀಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಉಪರಾಷ್ಟ್ರಪತಿಯಾದ ಮತ್ತು ಈಗ ಭಾರತದ ಎರಡನೇ ಅತ್ಯುನ್ನತ ಸಾಂವಿಧಾನಿಕ ಕಚೇರಿಯಲ್ಲಿರುವ ಧನ್ಕರ್, ಮೇ 22 ರಂದು ನವದೆಹಲಿಯಿಂದ ದಕ್ಷಿಣಕ್ಕೆ 2400 ಕಿಮೀ ದೂರದಲ್ಲಿರುವ ದಕ್ಷಿಣ ಭಾರತದ ಕೇರಳ ರಾಜ್ಯದ ಚಂಪಾಡ್ ಗ್ರಾಮಕ್ಕೆ ಭೇಟಿ ನೀಡಿದ್ದರು.
ಚಂಪಾಡ್‌ನಲ್ಲಿ ಭಾರತದ ಉಪರಾಷ್ಟ್ರಪತಿ ತಮ್ಮ ಶಾಲಾ ಶಿಕ್ಷಕಿಯಾಗಿದ್ದ 83 ವರ್ಷದ ರತ್ನಾ ನಾಯರ್ ಅವರನ್ನು ಭೇಟಿಯಾಗಲಿದ್ದಾರೆ. ಪಶ್ಚಿಮ ಭಾರತದದ ರಾಜಸ್ಥಾನದದ ಚಿತ್ತೂರ್‌ಗಢ ಜಿಲ್ಲೆಯಲ್ಲಿದ್ದ ಸೈನಿಕ್ ಸ್ಕೂಲ್‌ನಲ್ಲಿ ರತ್ನಾ ನಾಯರ್ ಶಿಕ್ಷಕಿಯಾಗಿದ್ದ ಧನ್ಕರ್ ಅಲ್ಲಿ ವಿದ್ಯಾರ್ಥಿಯಾಗಿದ್ದರು. 55 ವರ್ಷಗಳ ಬಳಿಕ ಧನ್ಕರ್, ತಮ್ಮ ಶಿಕ್ಷಕಿಯನ್ನು ಭೇಟಿಯಾಗಿದ್ದಾರೆ. 2022ರ ಆಗಸ್ಟ್ 11 ರಂದು ನನ್ನ ಪದಗ್ರಹಣ ಕಾರ್ಯಕ್ರಮಕ್ಕೆ ಅವರು ನನಗೆ ಆಹ್ವಾನ ನೀಡಿದ್ದರು. ಅವರಿಗೆ ಶಿಕ್ಷಕರಾಗಿದ್ದವರು ಪೈಕಿ ಇಬ್ಬರು ಮಾತ್ರವೇ ಜೀವಂತವಾಗಿದ್ದೇವೆ. ಆದರೆ, ಅನಾರೋಗ್ಯದ ಕಾರಣದಿಂದಾಗಿ ನನಗೆ ದೆಹಲಿಗೆ ಹೋಗಲು ಆಗರಲಿಲ್ಲ' ಎಂದು ಜಗದೀಪ್ ಧನ್ಕರ್ ಅವರು ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ದಿನವನ್ನು ನೆನಪಿಸಿಕೊಂಡಿದ್ದಾರೆ.
ಸೋಮವಾರ ಕಣ್ಣೂರು ಜಿಲ್ಲೆಯ ಪಣಿಯಣ್ಣೂರು ಗ್ರಾಮ ಪಂಚಾಯತಿಯಲ್ಲಿ ಜಗದೀಪ್ ಧನ್ಕರ್ ತಮ್ಮ ಪತ್ನಿ ಡಾ. ಸುದೇಶ್ ಧನ್ಕರ್ ಅವರೊಂದಿಗೆ ರತ್ನಾ ನಾಯರ್ ಅವರನ್ನು ಭೇಟಿಯಾದರು. ಕಾರಿನಿಂದ ಇಳಿಯುತ್ತಿದ್ದಂತೆ ಅವರು ಶಿಕ್ಷಕಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ರತ್ನಾ ನಾಯರ್, 'ನನಗೆ ಇದಕ್ಕಿಂತ ದೊಡ್ಡ ಗುರುದಕ್ಷಿಣೆ ಬೇಕಿಲ್ಲ' ಎಂದು ಧನ್ಕರ್ ಅವರಿಗೆ ತಿಳಿಸಿದ್ದಾರೆ. ಉಪರಾಷ್ಟ್ರಪತಿಯೊಂದಿಗೆ ಮಾತನಾಡುವ ವೇಳೆ, ಜಗದೀಪ್ ಧನ್ಕರ್, ಖಾಕಿ ಬಣ್ಣದ ಸಮವಸ್ತ್ರ ತೊಟ್ಟು ಮುಂದಿನ ಬೆಂಚ್‌ನಲ್ಲಿ ಏಕಾಗ್ರತೆಯಿಂದ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿ ದಿನಚರಿಗಳನ್ನು ನೆನಪಿಸಿಕೊಂಡರು.
'ಆತ ತುಂಬಾ ಚಟುವಟಿಕೆಯಿಂದ ಇದ್ದ. ಶಿಸ್ತು ಹಾಗೂ ವಿಧೇಯ ವಿದ್ಯಾರ್ಥಿ. ಕ್ಲಾಸ್‌ನ ಹೊರಗೂ ಕ್ಲಾಸ್‌ನ ಒಳಗೂ ಒಂದೇ ರೀತಿಯಲ್ಲಿ ಇರುತ್ತಿದ್ದ. ಚರ್ಚಾ ಸ್ಪರ್ಧೆಗಳಲ್ಲಿ ಮುಂದಿರುತ್ತಿದ್ದ. ಕ್ರೀಡೆಯ ಜೊತೆ ಕಲಿಯುವುದರಲ್ಲೂ ತೀಕ್ಷಣಗ್ರಾಹಿಯಾಗಿದ್ದ' ಎಂದು ರತ್ನಾ ನಾಯರ್ ನೆನಪಿಸಿಕೊಂಡಿದ್ದಾರೆ.
ಚಿತ್ತೂರ್‌ಗಢದ ಸೈನಿಕ್ ಶಾಲೆ ವಸತಿ ಶಾಲೆಯಾಗಿತ್ತು. ವರ್ಷದಲ್ಲಿ ಅಂದಾಜು 9 ತಿಂಗಳು ಅವರು ಶಿಕ್ಷಕರೊಂದಿಗೆ ಇರಬೇಕಿತ್ತು. ಇದರಿಂದಾಗಿ ಶಿಕ್ಷಕರ ಜೊತೆ ಉತ್ತಮ ಬಾಂಧವ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಇದರ ನಡುವೆ ಪೋಷಕರು ಶಾಲೆಗೆ ಭೇಟಿ ನೀಡುತ್ತಿದ್ದರು. ಜಗದೀಪ್ ಅವರ ತಂದೆ ಸಾಮಾನ್ಯವಾಗಿ ಶಾಲೆಗೆ ಭೇಟಿ ನೀಡುತ್ತಿದ್ದರು. ಪ್ರತಿ ತಿಂಗಳು ಶಾಲೆಗೆ ಬರುತ್ತಿದ್ದ ಅವರು, ತಮ್ಮ ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಿದ್ದರು ಎಂದಿದ್ದಾರೆ. ಮನೆಗೆ ಬಂದಿದ್ದ ಧನ್ಕರ್ ಅವರಿಗೆ ರತ್ನಾ ನಾಯರ್ ಕುಟುಂಬ ಎಳನೀರು ನೀಡಿದ್ದಲ್ಲದೆ, ಮನೆಯಲ್ಲಿಯೇ ತಯಾರಿಸಿದ ಇಡ್ಲಿ ಹಾಗೂ ಬಾಳೆಹಣ್ಣಿನ ಚಿಪ್ಸ್‌ಅನ್ನು ನೀಡಿದ್ದರು. ಸೈನಿಕ್ ಶಾಲೆಯ ಹಲವು ವಿದ್ಯಾರ್ಥಿಗಳು ಸೇನೆಯಲ್ಲಿದ್ದರೆ, ದೇಶದ ಉಪರಾಷ್ಟ್ರಪತಿಯಂಥ ಸ್ಥಾನಕ್ಕೇರಿದ ವ್ಯಕ್ತಿ ಧನ್ಕರ್ ಮಾತ್ರವೇ ಆಗಿದ್ದಾರೆ.
ನ್ಯಾಯಾಂಗ, ಕೊಲಿಜಿಯಂ ವಿರುದ್ಧ ಹೇಳಿಕೆ: ಉಪರಾಷ್ಟ್ರಪತಿ ಧನಕರ್, ಸಚಿವ ರಿಜಿಜು ವಿರುದ್ಧ ಇಂದು ಸುಪ್ರಿಂಕೋರ್ಟ್ ವಿಚಾರಣೆ
ಇನ್ನು ಶಿಕ್ಷಕಿಯನ್ನು ಭೇಟಿ ಮಾಡಿ ಮಾತನಾಡಿದ ಧನ್ಕರ್, 'ಮೇಡಮ್ ನಿಮಗೆ ನಾನು ಎಂದಿಗೂ ಜಗದೀಪ್ ಮಾತ್ರ. ಭಾರತದ ಉಪರಾಷ್ಟ್ರಪತಿಯಲ್ಲ. ನೀವು ನನ್ನ ಶಿಕ್ಷಕಿ. ನನ್ನ ಹೆಸರು ಹಿಡಿದು ಕರೆಯುವ ಎಲ್ಲಾ ಅಧಿಕಾರ ನಿಮಗಿದೆ' ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅವರು, 'ನನ್ನ ಹಕ್ಕು ಹಾಗೂ ನನ್ನ ಕರ್ತವ್ಯದ ಬಗ್ಗೆ ಭಿನ್ನತೆ ಗೊತ್ತಿದೆ. ನಾನು ಈ ದೇಶದ ಪ್ರಜೆ. ಹಾಗಾಗಿ ಇಲ್ಲಿ ಕರ್ತವ್ಯವೇ ಮೊದಲು' ಎಂದಿದ್ದರು.
ರಾಜ್ಯಸಭೆ ಚೇರ್ಮನ್ ಜಗದೀಪ್ ಧನ್‌ಕರ್‌ಗೆ ಕೈ ತೋರಿಸಿ ಮಾತನಾಡಿದ ಜಯಾ ಬಚ್ಛನ್, ಬಿಜೆಪಿ ಆಕ್ರೋಶ!