Asianet Suvarna News Asianet Suvarna News

ಭಾರತದ ಶ್ರೀಮಂತ ಮಹಿಳೆ ರೋಶನಿ ಈಗ HCL ಕಂಪನಿ ನೂತನ ಅಧ್ಯಕ್ಷೆ!

ಭಾರತದ 3ನೇ ಅತೀ ದೊಡ್ಡ ಸಾಫ್ಟ್‌ವೇರ್ ರಫ್ತು ಮಾಡುವ HCL ಟೆಕ್ ನೂತನ ಅಧ್ಯಕ್ಷರನ್ನು ನೇಮಿಸಿದೆ. 38 ವರ್ಷದ ರೋಶನಿ ನಾಡರ್ ಮಲ್ಹೋತ್ರಗೆ ಹೊಸ ಜವಾಬ್ದಾರಿ ನೀಡಲಾಗಿದೆ. ರೋಶನಿ ಭಾರತದ ಶ್ರೀಮಂತ ಮಹಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. HCL ಟೆಕ್ ಕಪಂನಿ ಅಧ್ಯಕ್ಷ ಸ್ಥಾನ, ಶ್ರೀಮಂತಿಕೆ ಸೇರಿದಂತೆ ಇತಹ ಮಾಹಿತಿ ಇಲ್ಲಿದೆ.

Indias Software giant HCL Tech appointed Roshni Nadar as a chairperson
Author
Bengaluru, First Published Jul 17, 2020, 5:38 PM IST

ಬೆಂಗಳೂರು(ಜು.17): ಭಾರತದ ಪ್ರತಿಷ್ಠಿತ  HCL ಟೆಕ್ ಕಂಪನಿಯಲ್ಲಿ ಕೆಲ ಬದಲಾವಣೆಗಳಾಗಿವೆ. HCL ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿವ್ ನಾಡರ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಸ್ಥಾನಕ್ಕೆ ಶಿವ್ ನಾಡರ್ ಪುತ್ರಿ, 38 ವರ್ಷದ ರೋಶನಿ ನಾಡರ್ ಮಲ್ಹೋತ್ರ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಕುರಿತು HCL ಟೆಕ್ ಕಂಪನಿ ಅಧೀಕೃತ ಪ್ರಕಟಣೆ ಹೊರಡಿಸಿದೆ.

ಭಾರತೀಯ ದಾನಿಗಳಲ್ಲಿ ಶಿವನಾಡರ್ ನಂ 1!.

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಶಿವ್ ನಾಡರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಚೀಫ್ ಸ್ಟ್ರಾಟರ್ಜಿ ಆಫೀಸರ್ ಆಗಿ ಮುಂದುವರಿಯಲಿದ್ದಾರೆ. ಆದರೆ ಹೊಸ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ರೋಶನಿ ಭಾರತದ ಶ್ರೀಮಂತ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2019ರಲ್ಲಿ IIFL ವೆಲ್ತ್ ಹುರನ್  ಬಿಡುಗಡೆ ಮಾಡಿದ ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ರೋಶನಿ ಮೊದಲ ಸ್ಥಾನ ಪಡೆದಿದ್ದರು. ಇವರ ಒಟ್ಟು ಆಸ್ತಿ 38,000 ಕೋಟಿ ರೂಪಾಯಿ.

HCL ಮುಖ್ಯಸ್ಥ ಈ ವರ್ಷದ RSS ವಿಜಯದಶಮಿ ಅತಿಥಿ!

2013ರಲ್ಲಿ HCL ಕಂಪನಿ ರೋಶನಿ ನಾಡರ್ ಅವರನ್ನು ಕಂಪನಿಯ ಹೆಚ್ಚುವರಿ ನಿರ್ದೇಶಕನ್ನಾಗಿ ಆಯ್ಕೆ ಮಾಡಿತ್ತು. 2017ರಲ್ಲಿ HCL ಕಾರ್ಪ್ ಕಂಪನಿಯ ಬೋರ್ಡ್‌ಗೂ ಆಯ್ಕೆ ಮಾಡಲಾಗಿದೆ. HCL ಕಾರ್ಪ್ ಕಂಪನಿ,  HCL ಟೆಕ್ ಹಾಗೂ HCL ಇನ್ಫೋಟೈನ್ಮೆಂಟ್ ಕಂಪನಿ ಒಡೆತನ ಹೊಂದಿದೆ.

ದೆಹಲಿಯಲ್ಲಿ ಹುಟ್ಟಿ ಬೆಳೆದ ರೋಶನಿ ನಾಡರ್, ಲಂಡನ್‌ನ ಆಕ್ಸ್‌ಫರ್ಡ್ ಯನಿವರ್ಸಿಟಿಯ ಕೆಲ್ಲಾಗ್ ವಿದ್ಯಾಲಯದಲ್ಲಿ ಮಾಸ್ಟರ್ ಇನ್ ಬ್ಯುಸಿನೆಸ್ ಅಡ್ಮಿನಿಸ್ಚ್ರೇಶನ್ ಓದಿದ್ದಾರೆ. ಶಿವ್ ನಾಡರ್ ಟ್ರಸ್ಟ್ ಸದಸ್ಯೆಯಾಗಿರುವ ರೋಶನಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ವಿದ್ಯಾಘ್ಯಾನ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕೊರೋನಾ ವೈರಸ್‌ನಿಂದ ವಿಶ್ವವೇ ಸವಾಲಿನ ಮೇಲೆ ಸವಾಲು ಎದುರಿಸುತ್ತಿದೆ. ಕಂಪನಿ ಕೂಡ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇಷ್ಟೇ ಅಲ್ಲ ಪ್ರತಿ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ. ಈ ಸಂದರ್ಭದಲ್ಲಿ ರೋಶನಿ ನಾಡರ್ HCL ಕಂಪನಿ ಅಡೆ ತಡೆಗಳನ್ನು ನಿವಾರಿಸಿ ಮುನ್ನಗ್ಗಲಿದೆ ಎಂದು ಶಿವ್ ನಾಡರ್ ಹೇಳಿದ್ದಾರೆ.

Follow Us:
Download App:
  • android
  • ios