ನಾಗಪುರ[ಸೆ.23]: ಇಲ್ಲಿನ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಅ.8 ರಂದು ನಡೆಯುವ ವಿಜಯದಶಮಿ ಕಾರ್ಯಕ್ರಮದಲ್ಲಿ ಎಚ್‌ಸಿಎಲ್‌ ಸಂಸ್ಥಾಪಕ ಮುಖ್ಯಸ್ಥ, ಪದ್ಮಭೂಷಣ ಗೌರವಾನ್ವಿತ ಶಿವ ನಾಡಾರ್‌ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ನಾಗಪುರ ಮಹಾನಗರ ಸಂಚಾಲಕ ರಾಜೇಶ್‌ ಲೊಯಾ ಭಾನುವಾರ ತಿಳಿಸಿದ್ದಾರೆ.

ಪ್ರತಿವರ್ಷ ನಡೆಯವ ಮತ್ತು ರಾಜಕೀಯವಾಗಿ ವಿಶೇಷವಾಗಿರುವ ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ಮುಖ್ಯಸ್ಥರು ಮಾಡುವ ಭಾಷಣವು ಸಂಘಟನೆ ಮತ್ತು ಇತರ ಅಂಗಸಂಸ್ಥೆಗಳ ಮುಂದಿನ ವರ್ಷದ ಕಾರ್ಯಸೂಚಿಯನ್ನು ಪ್ರತಿಬಿಂಬಿಸುತ್ತದೆ.

ದೇಶದ ಎಲ್ಲ ನಾಗರಿಕರು ಕಾರ್ಯಕ್ರಮದ ಮೇಲೆ ಗಮನ ಹರಿಸುತ್ತಾರೆ.