ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಬಿಂದ್ರನ್‌ವಾಲೆ ಸಂಬಂಧಿ ಲಕ್ಬೀರ್ ಸಿಂಗ್ ಪಾಕಿಸ್ತಾನದಲ್ಲಿ ಮೃತ!
ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ವಿದೇಶಿ ನೆಲದಲ್ಲಿ ಅಪರಿಚಿತರ ದಾಳಿಗೆ ಬಲಿಯಾಗುತ್ತಿರುವ ಬೆನ್ನಲ್ಲೇ ಇದೀಗ ಖಲಿಸ್ತಾನ ಉಗ್ರ ಸಂಘಟನೆ ಮೂಲಕ ಭಾರತದ ನಿದ್ದೆಗಿಡಿಸಿದ ಬಿಂದ್ರನ್‌ವಾಲೆ ಸಂಬಂಧಿ, ಉಗ್ರ ಲಕ್ಬೀರ್ ಸಿಂಗ್ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ.
ನವದೆಹಲಿ(ಡಿ.05) ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ಹೆಸರು ಭಾರತದ ಭಯೋತ್ಪಾದನೆ ದಾಳಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿರುವ ಹೆಸರು. ಸ್ವರ್ಣ ಮಂದಿರದ ವಶಪಡಿಸಿಕೊಂಡು ಭಕ್ತರನ್ನು ಒತ್ತೆಯಾಳಾಗಿಟ್ಟುಕೊಂಡು ಭಾರತದ ವಿರುದ್ಧವೇ ದಾಳಿ ನಡೆಸಿದ ಖಲಿಸ್ತಾನ್ ಉಗ್ರ ಆಂದೋಲನ ಆರಂಭಿಸಿದ ಬಿಂದ್ರನ್‌ವಾಲೆ ಸಂಬಂಧಿ ಹಾಗೂ ಖಲಿಸ್ತಾನಿ ಉಗ್ರ ಲಕ್ಬೀರ್ ಸಿಂಗ್ ರೋಡ್ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರರು ವಿದೇಶದಲ್ಲಿ ಹತ್ಯೆಯಾಗುತ್ತಿರುವ ಬೆನ್ನಲ್ಲೇ ಇದೀಗ ಖಲಿಸ್ತಾನಿ ಉಗ್ರ, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಲಕ್ಬೀರ್ ಸಿಂಗ್ ನಿಧನ ಮತ್ತೆ ಚರ್ಚೆ ಹೆಚ್ಚಿಸಿದೆ.
ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಲಕ್ಬೀರ್ ಸಿಂಗ್ ರೋಡ್, ಖಲಿಸ್ತಾನಿ ಆಂದೋಲನಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಭಾರತದಲ್ಲಿ ಉಗ್ರ ಚಟುವಟಿಕೆಯನ್ನು ಜೀವಂತವಗಾರಿಸಿದ್ದ. ಇದೀಗ ಲಕ್ಬೀರ್ ಸಿಂಗ್ ರೋಡ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಭಾರತಕ್ಕೆ ಬೇಕಾಗಿದ್ದ ಲಕ್ಬೀರ್ ಸಿಂಗ್ ರೋಡ್ ಅಂತ್ಯಸಂಸ್ಕಾರವನ್ನು ಸಿಖ್ ಸಂಪ್ರದಾಯದಂತೆ ಪಾಕಿಸ್ತಾನದಲ್ಲಿ ಮಾಡಲಾಗಿದೆ. ಆದರೆ ರಹಸ್ಯವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಪನ್ನೂನ್ ಹತ್ಯೆ ಮಾಡಿದರೆ ಗುಜರಾತ್ ಕೇಸಿಂದ ಮುಕ್ತಿ : ಆರೋಪಿಗೆ ಭಾರತದ ಆಮಿಷ: ಅಮೆರಿಕಾ ಆರೋಪ
ಪಾಕಿಸ್ತಾನ ಸೇನೆಯ ಸೀಕ್ರೆಟ್ ಎಜೆಂಟ್ ಐಎಸ್ಐ ಸೂಚನೆಯಂತೆ ಲಕ್ಬೀರ್ ಸಿಂಗ್ ರೋಡ್ ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಿದ್ದ. ಭಾರತದಲ್ಲಿನ ಖಲಿಸ್ತಾನ ಆಂದೋಲನಕ್ಕೆ ತುಪ್ಪ ಸುರಿದಿದ್ದ. ಕೆಲ ದಾಳಿಗಳಲ್ಲಿ ಆರ್ಥಿಕ ನೆರವು, ಭಾರತದೊಳಗೆ ಬೌಗೊಳಿಕ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ನೀಡಿದ್ದ. ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಲಕ್ಬೀರ್, ಬಿಂದ್ರನ್‌ವಾಲೆ ಹತ್ಯೆ ಬಳಿಕ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ.
2021-23ರಲ್ಲಿ ಲಕ್ಬೀರ್ ಸಿಂಗ್ ವಿರುದ್ದ ಭಾರತದಲ್ಲಿ 6 ಪ್ರಕರಣಗಳು ದಾಖಲಾಗಿದೆ. ರಾಷ್ಟ್ರೀಯ ತನಿಖಾ ದಳ(ಎನ್ಐಎ) ಈ ಪ್ರಕರಣದ ತನಿಖೆ ನಡೆಸುತ್ತಿದೆ . ಲಕ್ಬೀರ್ ಸಿಂಗ್ ನಿಷೇದಿತ ಅಂತಾರಾಷ್ಟ್ರೀಯ ಸಿಖ್ ಯೂಥ್ ಫೆಡರೇಷನ್ (ISYF) ಸಂಘಟನೆಯ ಮುಖ್ಯಸ್ಥನಾಗಿದ್ದ.
ನಿಜ್ಜರ್ ಹತ್ಯೆ ಸಾಕ್ಷ್ಯ ಎಲ್ಲಿ? ಮತ್ತೆ ಕೆನಡಾಕ್ಕೆ ಭಾರತ ಪ್ರಶ್ನೆ
ಖಲಿಸ್ತಾನಿ ಉಗ್ರ ಗುಪತ್ವಂತ್ ಸಿಂಗ್ ಪನ್ನೂನ್‌ನನ್ನು ಹತ್ಯೆ ಮಾಡಲು ಭಾರತ ಸಂಚು ರೂಪಿಸಿತ್ತು ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ನಿರ್ದೇಶಕರಾದ ವಿಲಿಯಂಬರ್ನ್ಸ್ ಅವರನ್ನು ಭಾರತಕ್ಕೆ ಕಳುಹಿಸಿದ್ದರು ಎಂಬುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ಜುಲೈನಲ್ಲಿ ಪನ್ನೂನ್ ಹತ್ಯೆ ಸಂಚಿನ ವಿಷಯ ಬೆಳಕಿಗೆ ಬಂದ ಕೂಡಲೇ ಸಿಐಎ ಮುಖ್ಯಸ್ಥ ವಿಲಿಯಂ ಬರ್ನ್ಸ್ ಭಾರತಕ್ಕೆ ಆಗಮಿಸಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ‘ರಾ’ ಮುಖ್ಯಸ್ಥರ ಭೇಟಿಯಾಗಿ ಘಟನೆ ಕುರಿತು ತನಿಖೆಗೆ ಆಗ್ರಹಿಸಿದ್ದರು. ಅಲ್ಲದೆ ಜೋ ಬೈಡೆನ್ ಜಿ20 ಶೃಂಗಕ್ಕೆ ಭಾರತಕ್ಕೆ ಬಂದಾಗಲೂ ಮೋದಿ ಜೊತೆಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಈ ವಿಷಯ ಚರ್ಚಿಸಿದ್ದರು’ ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.