Asianet Suvarna News Asianet Suvarna News

ಭಾರತದ ಮಾನವಸಹಿತ ಗಗನಯಾತ್ರೆ: ಮಹಿಳೆಯರಿಗೆ ಏಕಿಲ್ಲ ಉಡ್ಡಯನ ಅವಕಾಶ?

ಅಮೆರಿಕ ಗಗನಯಾನಕ್ಕೆ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಕಲ್ಪನಾ ಚಾವ್ಲಾ ಆಯ್ಕೆ ಆಗಿದ್ದರು. ಆದರೆ ಭಾರತದ ಗಗನಯಾನಕ್ಕೆ ಒಬ್ಬ ಮಹಿಳೆ ಕೂಡ ಆಯ್ಕೆ ಆಗಿಲ್ಲ. ಇದಕ್ಕೇನು ಕಾರಣ ಇಲ್ಲಿದೆ ಡಿಟೇಲ್‌

Indias manned spaceflight why no woman get chance in India s Gaganyaan akb
Author
First Published Feb 28, 2024, 8:18 AM IST

ನವದೆಹಲಿ: ಅಮೆರಿಕ ಗಗನಯಾನಕ್ಕೆ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಕಲ್ಪನಾ ಚಾವ್ಲಾ ಆಯ್ಕೆ ಆಗಿದ್ದರು. ಆದರೆ ಭಾರತದ ಗಗನಯಾನಕ್ಕೆ ಒಬ್ಬ ಮಹಿಳೆ ಕೂಡ ಆಯ್ಕೆ ಆಗಿಲ್ಲ. ಇದಕ್ಕೆ ಕಾರಣವಿದೆ. ಗಗನಯಾನ ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಬಯಸುತ್ತದೆ. ಜೊತೆಗೆ ವಿಮಾನ ಉಡ್ಡಯನದಲ್ಲಿ ಸಾಕಷ್ಟು ಅನುಭವದ ಅಗತ್ಯವೂ ಇರುತ್ತದೆ. ಆದರೆ ತಕ್ಷಣಕ್ಕೆ ಭಾರತೀಯ ಸೇನೆಯಲ್ಲಿ ಅಂಥ ಸಾಮರ್ಥ್ಯ ಹೊಂದಿರುವ ಮಹಿಳಾ ಟೆಸ್ಟ್‌ ಪೈಲಟ್‌ಗಳು ಇಲ್ಲದ ಕಾರಣ ಯಾರನ್ನೂ ಈ ಯೋಜನೆಗೆ ಆಯ್ಕೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ನಾಲ್ವರು ಗಗನಯಾತ್ರಿಗಳ ಯಾರು?

ಗ್ರೂಪ್‌ ಕ್ಯಾಪ್ಟನ್‌ ಪ್ರಶಾಂತ್‌ ಬಾಲಕೃಷ್ಣನ್‌ ನಾಯರ್‌

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಏರ್‌ಪೋರ್ಸ್‌ ಅಕಾಡೆಮಿಯಿಂದ ಸ್ವೋರ್ಡ್‌ ಆಫ್‌ ಆನರ್‌ ಗೌರವಕ್ಕೆ ಪಾತ್ರರಾಗಿದ್ದಾರೆ. 1998ರಲ್ಲಿ ವಾಯುಪಡೆಯ ಯುದ್ಧಪಡೆಗೆ ಸೇರ್ಪಡೆ. ಇವರು ವಾಯುಪಡೆಯಲ್ಲಿ ತರಬೇತಿ ವಿಷಯದಲ್ಲಿ ಬೋಧನೆ ಮಾಡುವ ಜೊತೆಗೆ 3000 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ. ಸುಖೋಯ್‌- 30 ಎಂಕೆಐ, ಮಿಗ್‌ 21, ಮಿಗ್‌ 29, ಹಾಕ್‌, ಡೋರ್ನಿಯರ್‌, ಎಎನ್‌ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.

ಭಾರತದ ಮಾನವಸಹಿತ ಗಗನಯಾತ್ರೆಗೆ ನಾಲ್ವರ ಆಯ್ಕೆ ಆಗಿದ್ದು ಹೇಗೆ? ತರಬೇತಿ ಎಲ್ಲಿ?

ಗ್ರೂಪ್‌ ಕ್ಯಾಪ್ಟನ್‌ ಅಜಿತ್‌ ಕೃಷ್ಣನ್‌

ಚೆನ್ನೈ ಮೂಲದವರು. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. ರಾಷ್ಟ್ರಪತಿಗಳ ಚಿನ್ನದ ಪದಕ ಮತ್ತು ಏರ್‌ಪೋರ್ಸ್‌ ಅಕಾಡೆಮಿಯಿಂದ ಸ್ವೋರ್ಡ್‌ ಆಫ್‌ ಆನರ್‌ ಗೌರವಕ್ಕೆ ಪಾತ್ರರಾಗಿದ್ದಾರೆ. 2003ರಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನ ವಿಭಾಗಕ್ಕೆ ಸೇರ್ಪಡೆ. ಇವರು ವಾಯುಪಡೆಯಲ್ಲಿ ತರಬೇತಿ ವಿಷಯದಲ್ಲಿ ಬೋಧನೆ ಮಾಡುವ ಜೊತೆಗೆ 2900 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ. ಸುಖೋಯ್‌- 30 ಎಂಕೆಐ, ಮಿಗ್‌ 21, ಮಿಗ್‌ 29, ಜಾಗ್ವಾರ್‌, ಡೋರ್ನಿಯರ್‌, ಎಎನ್‌ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.

ಗ್ರೂಪ್‌ ಕ್ಯಾಪ್ಟನ್‌ ಅಂಗದ್‌ ಪ್ರತಾಪ್‌

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನವರು. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. 2004ರಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ. ಇವರು ವಾಯುಪಡೆಯಲ್ಲಿ ತರಬೇತಿ ವಿಷಯದಲ್ಲಿ ಬೋಧನೆ ಮಾಡುವ ಜೊತೆಗೆ 2000 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ. ಸುಖೋಯ್‌- 30 ಎಂಕೆಐ, ಮಿಗ್‌ 21, ಮಿಗ್‌ 29, ಜಾಗ್ವಾರ್‌, ಹಾಕ್‌, ಡೋರ್ನಿಯರ್‌, ಎಎನ್‌ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.

ವಿಂಗ್‌ ಕಮಾಂಡರ್‌ ಸುಭಾನ್ಷು ಶುಕ್ಲಾ

ಉತ್ತರಪ್ರದೇಶದ ಲಖನೌ ಮೂಲದವರು. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದಾರೆ. 2006ಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ಸೇರ್ಪಡೆಯಾಗಿದ್ದಾರೆ. ಇವರು ವಾಯುಪಡೆಯಲ್ಲಿ ಯುದ್ಧಪಡೆಯ ನಾಯಕರಾಗಿ, ಟೆಸ್ಟ್‌ ಪೈಲಟ್‌ ಆಗಿರುವ ಹಿರಿಮೆ ಹೊಂದಿದ್ದಾರೆ. 2000 ಗಂಟೆಗಳ ಕಾಲ ವಿಮಾನ ಉಡ್ಡಯನದ ಅಪಾರ ಅನುಭವ ಹೊಂದಿದ್ದಾರೆ. ಸುಖೋಯ್‌- 30 ಎಂಕೆಐ, ಮಿಗ್‌ 21, ಮಿಗ್‌ 29, ಜಾಗ್ವಾರ್‌, ಹಾಕ್‌, ಡೋರ್ನಿಯರ್‌, ಎಎನ್‌ 32 ಸೇರಿ ವಿವಿಧ ಮಾದರಿ ವಿಮಾನ ಉಡ್ಡಯನ ಮಾಡಿದ ಅನುಭವ ಹೊಂದಿದ್ದಾರೆ.
 

Follow Us:
Download App:
  • android
  • ios