ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ರಾಜಕೀಯ ಸಾಧನೆಗಳು ಮತ್ತು ವಿಕಸಿತ ಭಾರತದ ಗುರಿಯನ್ನು ಸ್ಮರಿಸಲಾಗಿದೆ. ಖ್ಯಾತ ಜ್ಯೋತಿಷಿಯೊಬ್ಬರು ಮೋದಿಯವರ ಹಿಂದಿನ ಜನ್ಮದ ಬಗ್ಗೆ ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ನಾಳೆ ಅರ್ಥಾತ್ ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸಂಭ್ರಮ (PM Modi Celebrating Birthday). ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಹಲವಾರು ಯೋಜನೆಗಳಿಗೆ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡಿದ್ದು ಇದೆ. ಅದೆಷ್ಟೋ ದಶಕಗಳಿಂದ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದೇ ಬರೆದುಕೊಂಡು ಬರಲಾಗಿದೆ. ಆದರೆ ಭಾರತ ಅಭಿವೃದ್ಧಿ ಶೀಲ ರಾಷ್ಟ್ರ ಎಂದು ಎನ್ನಿಸಿಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟವರು ನರೇಂದ್ರ ಮೋದಿ. ಕರೋನಾದಂಥ ಸಂಕಷ್ಟದ ಸಮಯದಲ್ಲಿಯೂ ಇಡೀ ವಿಶ್ವದ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗಿದ್ದಾಗಲೂ ಭಾರತದ ಅರ್ಥವ್ಯವಸ್ಥೆಯನ್ನು ಏರುಗತಿಯಲ್ಲಿ ಕೊಂಡೊಯ್ದು ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಅರ್ಥವ್ಯವಸ್ಥೆಯ ದೇಶ ಎನ್ನಿಸಿಕೊಂಡಿದೆ ಭಾರತ.
ಮೂರನೆಯ ಬಾರಿ ಪ್ರಧಾನಿ
2047ರಲ್ಲಿ ವಿಕಸಿತ ಭಾರತವನ್ನಾಗಿ ಮಾಡುವುದಾಗಿ ಪಣತೊಟ್ಟಿರುವ ನರೇಂದ್ರ ಮೋದಿ ಅವರು ಆ ಗುರಿಯನ್ನು ಸಾಧಿಸುವತ್ತ ದಾಪುಗಾಲು ಇಟ್ಟಿದ್ದಾರೆ. ದಿನಕ್ಕೆ ಕೇವಲ 3-4 ಗಂಟೆ ಮಾತ್ರ ವಿಶ್ರಮಿಸುತ್ತ, ಒಂದು ದಿನವೂ ರೆಸ್ಟ್ ತೆಗೆದುಕೊಳ್ಳದೇ ಈ 75ರ ಹರೆಯದಲ್ಲಿಯೂ ಇಷ್ಟೊಂದು ಚಟುವಟಿಕೆಯಿಂದ ಇರುವ ಬಗ್ಗೆ ಬಹುತೇಕ ಮಂದಿ ನಿಬ್ಬೆರಗಾಗಿ ನೋಡುವುದು ಇದೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ಕುಟುಂಬ ರಾಜಕಾರಣವನ್ನು ಹಿಮ್ಮೆಟ್ಟಿ, ಪ್ರಧಾನಿ ಹುದ್ದೆಗೆ ಮೂರನೆಯ ಬಾರಿಯೂ ಏರುವಂಥ ಛಾತಿ ಇದೆ ಎಂದರೆ ಅದು ಅವರ ಪೂರ್ವಜನ್ಮದ ಪುಣ್ಯ ಎಂದೇ ಹೇಳುತ್ತಾರೆ ದಾರ್ಶನಿಕರು.
ಇದನ್ನೂ ಓದಿ; Narendra Modi ರಾಜಕೀಯ ಸನ್ಯಾಸ ? ಮುಂದಿನ ಪ್ರಧಾನಿ ಯಾರು? ದೇಶಕ್ಕೇನಾಗಲಿದೆ? ಈ ಭವಿಷ್ಯವಾಣಿ ಕೇಳಿ...
ಖ್ಯಾತ ಜ್ಯೋತಿಷಿ ಹೇಳಿದ್ದೇನು?
ಹಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎನ್ನುವ ಬಗ್ಗೆ ಇದೀಗ ಖ್ಯಾತ ಜ್ಯೋತಿಷಿ ಇದರ ಬಗ್ಗೆ ರಿವೀಲ್ ಮಾಡಿದ್ದಾರೆ. ಕಳೆದ ಜನ್ಮದಲ್ಲಿ ನರೇಂದ್ರ ಮೋದಿ ಅವರು ಆಶ್ರಮದ ವಾಸಿಯಾಗಿದ್ದರು. ಅಲ್ಲಿ ಬರುವವರ ಸೇವೆಯಲ್ಲಿಯೇ ಜೀವನಪೂರ್ತಿ ಕಳೆದಿದ್ದರು. ಅಲ್ಲಿಯ ಗುರುಗಳ ಸೇವೆಯನ್ನು ಮಾಡುತ್ತಿದ್ದರು. ಕಸ ಗುಡಿಸುವುದರಿಂದ ಹಿಡಿದು ಎಲ್ಲಾ ಕಾರ್ಯಗಳನ್ನೂ ಅವರೇ ಮಾಡುತ್ತಿದ್ದರು. ಗುರುಗಳ ಸೇವೆ ಮಾಡುತ್ತಿದ್ದರಿಂದ, ಗುರುಗಳ ಆಶೀರ್ವಾದ ಅವರ ಮೇಲೆ ಇದೆ. ಇದೇ ಕಾರಣಕ್ಕೆ ಇಂದು ದೇಶದ ಅತ್ಯುನ್ನತ ಸ್ಥಾನ ಏರಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ.
ಹಲವು ದಾಖಲೆ ಮುರಿದ ಮೋದಿ
ಇನ್ನು, ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅದು ಸತತ ಮೂರು ಚುನಾವಣೆಗಳನ್ನು ಗೆದ್ದಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನಿರಂತರ ಆಡಳಿತದ ದಾಖಲೆಯನ್ನು ಅದು ಮುರಿದಿದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 17 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಆ ದಾಖಲೆಯನ್ನು ಮುರಿಯಬೇಕಿದೆ. 2014ರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಸರ್ಕಾರ ಮತ್ತು ಬಿಜೆಪಿಯಲ್ಲಿ ತಮ್ಮ ಹುಟ್ಟುಹಬ್ಬದಂದು ಯಾವುದೇ ಆಚರಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಂದಿನಿಂದ, ಬಿಜೆಪಿ ಇಡೀ ವಾರವನ್ನು ಸೇವಾ ಸಪ್ತಾಹವಾಗಿ ಆಚರಿಸಲು ನಿರ್ಧರಿಸಿದೆ. ಇದು ದೇಶಾದ್ಯಂತ ಕಾರ್ಯಕ್ರಮಗಳನ್ನು ನಡೆಸುತ್ತದೆ.
ಇದನ್ನೂ ಓದಿ: ಮತಗಳ್ಳತನ ಪಿತೂರಿಯ ಹಿಂದೆಯೂ ವಿದೇಶಿ ಕೈವಾಡ? ಸಿಕ್ಕೇ ಬಿಟ್ಟಿತು ಸಾಕ್ಷ್ಯ- ಸಂಕಷ್ಟದಲ್ಲಿ Rahul Gandhi, ಕಾಂಗ್ರೆಸ್!

