Asianet Suvarna News Asianet Suvarna News

ಚೀನಾ ಮೇಲೆ ಹದ್ದಿನ ಕಣ್ಣು: ಗಡಿಯಲ್ಲಿ2 ಪಿನಾಕ ರೆಜಿಮೆಂಟ್ ನಿಯೋಜನೆಗೆ ಮುಂದಾದ ಸೇನೆ

ಭಾರತದ ನೆರೆಯ ದೇಶಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿರುವ ಚೀನಾದ ಚಟುವಟಿಕೆಗಳ ಮೇಲೆ ಸಂಪೂರ್ಣ ಹದ್ದಿನ ಕಣ್ಣಿಡಲು ಭಾರತೀಯ ಸೇನೆ ಸಜ್ಜಾಗಿದೆ. ಇದಕ್ಕಾಗಿ ಭಾರತ ಚೀನಾ ಗಡಿ ಭಾಗದಲ್ಲಿ ಸ್ವದೇಶಿ ನಿರ್ಮಿತವಾದ ಪಿನಾಕಾ ರಾಕೆಟ್ ಲಾಂಚರ್‌ನ ಇನ್ನೆರಡು ರೆಜಿಮೆಂಟ್‌ಗಳನ್ನು ನಿಯೋಜಿಸಲು ಭಾರತೀಯ ಸೇನೆ ಸಜ್ಜಾಗಿದೆ.

Indias Eagle eye on China Indian Army to deploy two Pinaka Regiment on Indo China border akb
Author
First Published Mar 9, 2024, 12:13 PM IST

ನವದೆಹಲಿ: ನೆರೆಯ ದೇಶಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿರುವ ಚೀನಾದ ಚಟುವಟಿಕೆಗಳ ಮೇಲೆ ಸಂಪೂರ್ಣ ಹದ್ದಿನ ಕಣ್ಣಿಡಲು ಭಾರತೀಯ ಸೇನೆ ಸಜ್ಜಾಗಿದೆ. ಇದಕ್ಕಾಗಿ ಭಾರತ ಚೀನಾ ಗಡಿ ಭಾಗದಲ್ಲಿ ಸ್ವದೇಶಿ ನಿರ್ಮಿತವಾದ ಪಿನಾಕಾ ರಾಕೆಟ್ ಲಾಂಚರ್‌ನ ಇನ್ನೆರಡು ರೆಜಿಮೆಂಟ್‌ಗಳನ್ನು ನಿಯೋಜಿಸಲು ಭಾರತೀಯ ಸೇನೆ ಸಜ್ಜಾಗಿದೆ. ಭಾರತ ಉತ್ತರದಲ್ಲಿ ಚೀನಾಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಫಿರಂಗಿ ಪವರ್‌ ಸಾಮರ್ಥ್ಯವನ್ನು ಹೆಚ್ಚಿಸಲು ಸ್ವದೇಶಿಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್‌ನ ಎರಡು ಹೊಸ ರೆಜಿಮೆಂಟ್‌ಗಳನ್ನು ನಿಯೋಜಿಸಲು ಸೇನೆ ಸಿದ್ಧತೆ ನಡೆಸಿದೆ.  ಪೂರ್ವ ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯುತ್ತಿರುವ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈಗ ಆರು ಪಿನಾಕಾ ರೆಜಿಮೆಂಟ್‌ಗಳ ಭಾಗವಾಗಿರುವ 214 ಎಂಎಂ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಇಲ್ಲಿ ನಿಯೋಜಿಸಲಾಗುತ್ತಿದೆ. 

ಇದಕ್ಕಾಗಿ ರೆಜಿಮೆಂಟ್‌ಗಳಲ್ಲಿ ಸಿಬ್ಬಂದಿಗೆ ತರಬೇತಿ ನಡೆಯುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಭಾರತೀಯ ರಕ್ಷಣಾ ಇಲಾಖೆ ಮೂಲಗಳು ಹೇಳಿವೆ. ಪ್ರಸ್ತುತ ಭಾರತೀಯ ಸೇನೆಯೂ  ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಮತ್ತು ಚೀನಾದ ಉತ್ತರದ ಗಡಿಯಲ್ಲಿ ನಾಲ್ಕು ಪಿನಾಕಾ ರೆಜಿಮೆಂಟ್‌ಗಳನ್ನು ಹೊಂದಿದೆ. 

ರಕ್ಷಣಾ ಸಚಿವಾಲಯದ ಅತ್ಯುನ್ನತವಾದ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ರಕ್ಷಣಾ ಸ್ವಾಧೀನ ಮಂಡಳಿ (DAC)ಯೂ 2018ರಲ್ಲಿ  ಆರು  ಹೆಚ್ಚುವರಿ ಪಿನಾಕಾ ರೆಜಿಮೆಂಟ್‌ಗಳಿಗೆ ಅನುಮತಿ ನೀಡಿತು.  ಹಾಗೆಯೇ 2010ರಲ್ಲಿ ಸಚಿವಾಲಯವೂ ಈ ಯೋಜನೆಗಾಗಿ ಭಾರತ್ ಅರ್ಥ್  ಮೂವರ್ಸ್‌ ಲಿಮಿಟೆಡ್ (BEML), ಟಾಟಾ ಪವರ್ ಕಂಪನಿ ಲಿಮಿಟೆಡ್ ಹಾಗೂ  ಲಾರ್ಸೆನ್ ಮತ್ತು ಟೂಬ್ರೊ ಜೊತೆ ಅಂದಾಜು 2580 ಕೋಟಿ ರೂ ವೆಚ್ಚದ ಒಪ್ಪಂದಗಳಿಗೆ ಸಹಿ ಹಾಕಿತ್ತು.   

ಈ ಎಲ್ಲಾ ಆರು ರೆಜಿಮೆಂಟ್‌ಗಳು 2024ರ ವೇಳೆಗೆ ಕಾರ್ಯಗತಗೊಳ್ಳಬೇಕಿತ್ತು. ಆದರೆ ಈಗ ಎರಡನ್ನು ಮಾತ್ರ ಕಾರ್ಯಗತಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನುಳಿದ 4 ರೆಜೆಮೆಂಟ್‌ಗಳು ಪೂರ್ಣಗೊಳ್ಳಲಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.  ಈ ಆರು ಪಿನಾಕಾ ರೆಜಿಮೆಂಟ್‌ಗಳು ಸ್ವಯಂಚಾಲಿತ ಗನ್ ಗುರಿ ಮತ್ತು ಸ್ಥಾನೀಕರಣ ವ್ಯವಸ್ಥೆ (AGAPS)ಹೊಂದಿರುವ 114 ಲಾಂಚರ್‌ಗಳು 45 ಕಮಾಂಡ್ ಪೋಸ್ಟ್‌ಗಳು 330 ವಾಹನಗಳನ್ನು ಹೊಂದಿರಲಿವೆ.  ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್‌ಗಳನ್ನು ಟಾಟಾ ಗ್ರೂಪ್ ಮತ್ತು ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ) ಸೇರಿದಂತೆ ಎರಡು ಪ್ರಮುಖ ಖಾಸಗಿ ವಲಯದ ಘಟಕಗಳು ತಯಾರಿಸುತ್ತವೆ.

ಏನಿದು ಪಿನಾಕಾ?

ಪ್ರತಿ ರೆಜಿಮೆಂಟ್ ಆರು ಪಿನಾಕಾ ಲಾಂಚರ್‌ಗಳ ಮೂರು ಬ್ಯಾಟರಿಗಳನ್ನು ಹೊಂದಿದ್ದು, ಪ್ರತಿಯೊಂದೂ 44 ಸೆಕೆಂಡುಗಳ ಅಂತರದಲ್ಲಿ 40 ಕಿಮೀ ವ್ಯಾಪ್ತಿಯೊಂದಿಗೆ 12 ರಾಕೆಟ್‌ಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

Follow Us:
Download App:
  • android
  • ios