Asianet Suvarna News Asianet Suvarna News

ಪಂಜಾಬ್‌ ಗೌರ್ನರ್‌ಗೆ ಸುಪ್ರೀಂ ಚಾಟಿ: ಮಸೂದೆಗೆ ಸಹಿ ಹಾಕದ್ದಕ್ಕೆ ರಾಜ್ಯಪಾಲರಿಗೆ ತೀವ್ರ ತರಾಟೆ

ಜೂನ್‌ ತಿಂಗಳಿನಲ್ಲಿ ಪಂಜಾಬ್‌ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ತಾನು ನೀಡಿದ ಶುಕ್ರವಾರದ ಗಡುವಿನೊಳಗೂ ಸಹಿ ಹಾಕದ ಅಲ್ಲಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರನ್ನು ಸುಪ್ರೀಂಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

Supreme Court slaps Punjab Governor severely criticized for not signing the bill akb
Author
First Published Nov 11, 2023, 11:17 AM IST

ನವದೆಹಲಿ: ಜೂನ್‌ ತಿಂಗಳಿನಲ್ಲಿ ಪಂಜಾಬ್‌ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ತಾನು ನೀಡಿದ ಶುಕ್ರವಾರದ ಗಡುವಿನೊಳಗೂ ಸಹಿ ಹಾಕದ ಅಲ್ಲಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರನ್ನು ಸುಪ್ರೀಂಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, 'ನೀವು ಬೆಂಕಿ ಜೊತೆ ಆಟವಾಡುತ್ತಿದ್ದೀರಿ' ಎಂದು ತೀಕ್ಷ್ಣವಾಗಿ ಹೇಳಿದೆ. ರಾಜ್ಯಪಾಲರು ಹೀಗೆ ಹೇಳಲು ಹೇಗೆ ಸಾಧ್ಯ? ಚುನಾಯಿತ ಸರ್ಕಾರದ ಸದಸ್ಯರು ಪಾಸು ಮಾಡಿರುವ ಮಸೂದೆಗಳು ಇವು. ನಾವಿನ್ನೂ ಪ್ರಜಾಪ್ರಭುತ್ವದಲ್ಲೇ ಇದ್ದೇವಾ? ಇದು ಗಂಭೀರ ವಿಚಾರ. ನೀವು ಬೆಂಕಿಯ ಜೊತೆ ಆಟವಾಡುತ್ತಿದ್ದೀರಿ ಎಂದು ನ್ಯಾಯಪೀಠ ಶುಕ್ರವಾರ ತರಾಟೆ ತೆಗೆದುಕೊಂಡಿದೆ.

ಮೂರು ಹಣಕಾಸು ಮಸೂದೆಗಳೂ (finance bills) ಸೇರಿದಂತೆ ಐದು ಮಸೂದೆಗಳನ್ನು ಪಂಜಾಬ್‌ ಸರ್ಕಾರ (Punjab Government) ಜೂನ್‌ ತಿಂಗಳಿನಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಿ ರಾಜ್ಯಪಾಲರ ಸಹಿಗೆ ರವಾನಿಸಿತ್ತು. ಆದರೆ ರಾಜ್ಯಪಾಲರು ಅವುಗಳಿಗೆ ಸಹಿಯನ್ನೂ ಹಾಕಿರಲಿಲ್ಲ, ಸ್ಪಷ್ಟನೆ ಕೇಳಿ ಮರಳಿ ಸರ್ಕಾರಕ್ಕೂ ಕಳಿಸಿರಲಿಲ್ಲ. ಹೀಗಾಗಿ ಅವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಭಗವಂತ ಮಾನ್‌ (Bhagwant Mann) ಅವರ ಆಮ್‌ ಆದ್ಮಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ನ.1ರಂದು ಎರಡು ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಿದ್ದರು. ಇನ್ನು ಮೂರು ಮಸೂದೆಗಳ ಕುರಿತು ಪಂಜಾಬ್‌ ಸರ್ಕಾರಕ್ಕೆ ಪತ್ರ ಬರೆದು, ‘ನೀವು ನಡೆಸಿದ ವಿಧಾನಮಂಡಲದ ಅಧಿವೇಶನವೇ ಅಕ್ರಮವಾಗಿದೆ. ಹೀಗಾಗಿ ಅಲ್ಲಿ ನಡೆಸಿದ ಯಾವುದೇ ಕಾರ್ಯಕಲಾಪಕ್ಕೆ ಮಾನ್ಯತೆಯಿಲ್ಲ’ ಎಂದು ಹೇಳಿದ್ದರು.

ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ

ಈ ನಡುವೆ, ಪಂಜಾಬ್‌ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ (Supreme Court), ಶುಕ್ರವಾರದೊಳಗೆ ಮಸೂದೆಗಳನ್ನು ಇತ್ಯರ್ಥಪಡಿಸಬೇಕೆಂದು ರಾಜ್ಯಪಾಲರಿಗೆ ಸೂಚಿಸಿತ್ತು. ಆದರೂ ಅವರು ಕ್ರಮ ಕೈಗೊಳ್ಳದ ಕಾರಣ ಶುಕ್ರವಾರ ಮತ್ತೊಮ್ಮೆ ರಾಜ್ಯಪಾಲರ ಕ್ರಮವನ್ನು ಕಟು ಮಾತುಗಳಲ್ಲಿ ಟೀಕಿಸಿದೆ.

2 ವರ್ಷದಿಂದ ಬಳಕೆಯಲ್ಲಿಲ್ಲದ Gmail ಖಾತೆ ಡಿಲೀಟ್: ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ 

ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ

Follow Us:
Download App:
  • android
  • ios