ಚೀನಾದ ವುಹಾನ್'ನಿಂದ ತಾಯ್ನಾಡಿಗೆ ಮರಳಿದ 647 ಭಾರತೀಯರು| ನವದೆಹಲಿ ಬಳಿಯ ಮನೆಸರ್ ಆರೋಗ್ಯ ಶಿಬಿರದಲ್ಲಿ ಭಾರತೀಯರು| 14 ದಿನಗಳ ಕಾಲ ಭಾರತೀಯರ ಆರೋಗ್ಯ ತಪಾಸಣೆ| ಶಿಬಿರದಲ್ಲಿ ನೃತ್ಯ ಮಾಡಿ ಗಮನ ಸೆಳೆದ ಭಾರತೀಯರು| ಶಿಬಿರದಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್|

ನವದೆಹಲಿ(ಫೆ.02): ಕೊರೋನಾ ವೈರಸ್’ಗೆ ತುತ್ತಾಗಿರುವ ಚೀನಾದ ವುಹಾನ್'ನಿಂದ ಬಂದಿರುವ ಭಾರತೀಯರು, ನವದೆಹಲಿಯಲ್ಲಿ ತಾವು ತಂಗಿರುವ ಆರೋಗ್ಯ ಶಿಬಿರದಲ್ಲಿ ನೃತ್ಯ ಮಾಡಿದ್ದಾರೆ.

ಮನೆಸರ್’ನ ಆರೋಗ್ಯ ಶಿಬಿರದಲ್ಲಿ ವುಹಾನ್’ನಿಂದ ಬಂದ ಭಾರೀಯರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಇನ್ನೂ 14 ದಿನಗಳ ಕಾಲ ಅವರು ಈ ಶಿಬಿರದಲ್ಲೇ ಇರಬೇಕಾಗುತ್ತದೆ.

ಚೀನಾದಿಂದ ವಾಪಸ್ಸಾದವರಿಗೆ 14 ದಿನ ಆಸ್ಪತ್ರೆ ವಾಸ ಕಡ್ಡಾಯ!

ಈ ಮಧ್ಯೆ ಮುಖಕ್ಕೆ ಮಾಸ್ಕ್ ಹಾಕಿಕೊಂಡೇ ಶಿಬಿರದಲ್ಲಿ ನೃತ್ಯ ಮಾಡಿರುವ ಭಾರತೀಯರು, ಅದಮ್ಯ ಆತ್ಮಸ್ಥೈರ್ಯ ಪ್ರದರ್ಶಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Scroll to load tweet…

ಮರಳಿ ತಾಯ್ನಾಡಿಗೆ ಬಂದಿರುವುದು ಖುಷಿ ತಂದಿದ್ದು, ಕೊರೋನಾ ಭೀತಿಯಲ್ಲಿ ದಿನದೂಡುವ ಬದಲು ಎಲ್ಲರೊಂದಿಗೆ ಬೆರೆತು ಕಾಲ ಕಳೆಯವುದಾಗಿ ಶಿಬಿರದಲ್ಲಿರುವ ಭಾರತೀಯರು ಹೇಳಿದ್ದಾರೆ.

ಕೊರೋನಾ ಭೀತಿ: ಸುವರ್ಣ ನ್ಯೂಸ್‌ ಜೊತೆ ಚೀನಾ ಅನುಭವ ಬಿಚ್ಚಿಟ್ಟ ಯೋಗ ಶಿಕ್ಷಕ!

ಮುಖಕ್ಕೆ ಮೂರು ಪದರಗಳ ಮಾಸ್ಕ್ ಹಾಕಿಕೊಂಡಿರುವ ಕೆಲವು ಯುವಕರು ಶಿಬಿರದಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.