ಬಾಸ್‌ಗೆ ಮಹಿಳಾ ಉದ್ಯೋಗಿ ಮೇಲೆ ಪ್ರೀತಿ ಶುರುವಾಗಿದೆ. ಆದರೆ ಮಹಿಳಾ ಟೆಕ್ಕಿ ಬಾಸ್ ಪ್ರೀತಿ ನಿರಾಕರಿಸಿದ್ದಾರೆ. ಆಫೀಸ್ ರೊಮ್ಯಾನ್ಸ್ ತಿರಸ್ಕರಿಸಿದ ಮಹಿಳಾ ಟೆಕ್ಕಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡಿದಿದೆ.

ನವೆದೆಹಲಿ (ಜು.19) ಭಾರತೀಯ ಮಹಿಳಾ ಟೆಕ್ಕಿ ಇದೀಗ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಕಚೇರಿಯ ಬಾಸ್‌ಗೆ ಮಹಿಳಾ ಟೆಕ್ಕಿ ಮೇಲೆ ಪ್ರೀತಿ ಶುರುವಾಗಿದೆ. ಈಗಾಗಲೇ ಮದುವೆಯಾಗಿರುವ ಬಾಸ್ ಕಚೇರಿಯಲ್ಲೊಂದು ಸೆಟ್ಅಪ್ ಬಯಸಿದ್ದಾರೆ. ಕೆಲಸದ ಜೊತೆ ಟಚಿಂಗ್, ಟಚಿಂಗ್, ಕಾಫಿ ಬೈಟ್ ಸೇರಿದಂತೆ ಹಲವು ಪ್ಲಾನ್ ಹಾಕಿಕೊಂಡಿದ್ದ ಬಾಸ್‌ನ ಆಫೀಸ್ ರೊಮ್ಯಾನ್ಸ್‌ಗೆ ಮಹಿಳಾ ಟೆಕ್ಕಿ ನೋ ಎಂದಿದ್ದಾರೆ. ಇಷ್ಟೇ ನೋಡಿ ಮಹಿಳಾ ಟೆಕ್ಕಿಯ ಸಂಕಷ್ಟ ಶುರುವಾಗಿದೆ. ಬಾಸ್ ಕಿರುಕುಳ, ಅಸಾಧ್ಯವಾದ ಟಾರ್ಗೆಟ್, ಮಾತ್ರವಲ್ಲ ಸಂಬಳವನ್ನೇ ನೀಡದೆ ಸತಾಯಿಸುತ್ತಿರುವ ಘಟನೆ ನಡೆದಿದೆ. ಈ ಕುರಿತು ಮಹಿಳಾ ಉದ್ಯೋಗಿ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಕಚೇರಿಯಲ್ಲಿ ಬಾಸ್ ನಡೆದುಕೊಂಡ ರೀತಿ ವಿವರಿಸಿದ ಟೆಕ್ಕಿ

ಮಹಿಳಾ ಟೆಕ್ಕಿ ಹೇಳಿಕೊಂಡಂತೆ ಈಕೆ ಸಣ್ಣ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ವರ್ಕ್ ಫ್ರಮ್ ಹೋಮ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಾಳೆ. ಆಫೀಸ್ ಮೀಟಿಂಗ್, ಪ್ರತ್ಯೇಕ ಮೀಟಿಂಗ್ ಸೇರಿದಂತೆ ಹಲವು ಮೀಟಿಂಗ್ ಮೂಲಕ ಕಚೇರಿಯ ಒಟ್ಟು 10 ಉದ್ಯೋಗಿಗಳು ಹಾಗೂ ಬಾಸ್ ಪ್ರತಿ ದಿನ ಕಚೇರಿ ಕುರಿತು ಚರ್ಚೆ ನಡೆಸುತ್ತಾರೆ.ಇನ್ನು ಬಾಸ್ ಪದೇ ಪದೇ ಪ್ರತ್ಯೇಕವಾಗಿ ಕರೆ ಮಾಡಿ ವಿಶೇಷ ಕಾಳಜಿ ತೋರುತ್ತಿದ್ದರು. ಇನ್ನು ಹಲವು ಬಾರಿ ರೊಮ್ಯಾಟಿಂಕ್ ಮೆಸೇಜ್‌ಗೆ ಅಡಿಪಾಯಗಳನ್ನು ಹಾಕುತ್ತಿದ್ದರು. ಇದರ ನಡುವೆ ಕರೆ ಮಾಡಿ ಪ್ರೀತಿಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು ಎಂದು ಮಹಿಳಾ ಟೆಕ್ಕಿ ರೆಡ್ಡಿಟ್ ಮೂಲಕ ಹೇಳಿದ್ದಾರೆ.

ಬೇರೆ ಪುರುಷ ಉದ್ಯೋಗಿಳ ಜೊತೆ ಮಾತನಾಡಿದರೆ ಬಾಸ್‌ಗೆ ಕೋಪ

ಮೀಟಿಂಗ್ ವೇಳೆ, ಕರೆ ಮೂಲಕ ಬೇರೆ ಉದ್ಯೋಗಿಗಳ ಜೊತೆ ಮಾತನಾಡಿದರೆ ಬಾಸ್‌ಗೆ ಕೆಂಡದಂತೆ ಕೋಪ ಬರುತ್ತಿತ್ತು. ಈ ವೇಳೆ ನನಗೆ ಮತ್ತಷ್ಟು ಕೆಲಸ ಕೊಡುತ್ತಿದ್ದರು. ಬೇರೆ ಬೇರೆ ಪ್ರಾಜೆಕ್ಟ್ ನೀಡುತ್ತಿದ್ದರು. ವರ್ಕ್ ಫ್ರಮ್ ಹೋಮ್ ಕಾರಣದಿಂದ ಸುಮ್ಮನಾಗಿದ್ದೆ. ಇತ್ತ ಬಾಸ್ ಪರೋಕ್ಷ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಬಳಿಕ ನನ್ನ ಮೇಲೆ ವಿಪರೀತ ಸಿಟ್ಟು, ಆಕ್ರೋಶ ಹೆಚ್ಚಾಗಿತ್ತು. ನನ್ನ ಪ್ರತಿ ಕೆಲಸದಲ್ಲಿ ಮೂಗು ತೂರಿಸುತ್ತಿದ್ದರು. ರಜೆ ಕೇಳಿದರೂ ತಿರಸ್ಕರಿಸುತ್ತಿದ್ದರು. ವಾರದ ರಜಾ ದಿನದಲ್ಲೂ ಕೆಲಸ ಮಾಡಲು ಸೂಚಿಸುತ್ತಿದ್ದರು. ತಕ್ಷಣವೇ ಪ್ರಾಜೆಕ್ಟ್ ಮುಗಿಸಿ ನೀಜುವಂತೆ ಸೂಚಿಸಲು ಆರಂಭಿಸಿದರು. ಇವೆಲ್ಲವನ್ನು ಸಹಿಸಿಕೊಂಡಾಗ ಕೊನೆಗೆ ಬಾಸ್ ತಿಂಗಳ ವೇತವನ್ನೇ ವಿಳಂಬ ಮಾಡುತ್ತಿದ್ದಾರೆ.

ಎಲ್ಲರಿಗೂ ಸಂಬಳವಾದರೂ ನನ್ನ ವೇತನ ವಿಳಂಬ

ಬಾಸ್ ಪ್ರೀತಿ ತಿರಸ್ಕರಿಸಿದ ಕಾರಣ ನನ್ನ ವೇತನ ಕೂಡ ವಿಳಂಬವಾಗಲು ಆರಂಭಿಸಿತು. ಎಲ್ಲರಿಗೂ ಒಂದೇ ದಿನ ವೇತನವಾದರೆ ನನ್ನ ವೇತನ ವಿಳಂಬವಾಗುತ್ತಿತ್ತು. ಹೆಚ್ಆರ್ ಸಂಪರ್ಕಿಸಿ ವೇತನ ವಿಳಂಬಕ್ಕೆ ಕಾರಣ ಕೇಳಿದರೆ, ಕ್ಲೀಯರೆನ್ಸ್ ಬಂದಿಲ್ಲ, ಹೋಲ್ಡ್ ಮಾಡಲು ಹೇಳಿದ್ದಾರೆ ಎಂದೆಲ್ಲಾ ಉತ್ತರ ಬರುತ್ತಿತ್ತು.

ಬಾಸ್ ಟಾರ್ಚರ್ ನಡುವೆ ಕೆಲಸ ಬಿಡಿದಿರಲು ಕಾರಣ ಹೇಳಿದ ಟೆಕ್ಕಿ

ಬಾಸ್‌ಗೆ ಈಗಾಗಲೇ ಮದುವೆಯಾಗಿದೆ. ಆದರೂ ಕಚೇರಿಯಲ್ಲೊಂದು ರೊಮ್ಯಾನ್ಸ್ ಬಯಸಿದ್ದಾರೆ. ಆದರೆ ಅವರ ತಾಳಕ್ಕೆ ಕುಣಿಯದ ಕಾರಣ ಹಿಂಸೆ ನೀಡುತ್ತಿದ್ದಾರೆ. ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸುತ್ತಿದ್ದೇನೆ. ಕೆಲಸ ಬಿಡುವುದು ಸುಲಭ. ಆದರೆ ವರ್ಕ್ ಫ್ರಮ್ ಹೋಮ್ ಕಾರಣದಿಂದ ನಾನು ಕೆಲಸ ಬಿಟ್ಟಿಲ್ಲ. ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಪೋಷಕರ ಆರೋಗ್ಯ ಸೇರಿದಂತೆ ಇತರ ಕಾರಣಗಳಿಂದ ಮನೆಯಿಂದಲೇ ಕೆಲಸ ಬೇಕಿದೆ. ಸದ್ಯ ಜಾಬ್ ಮಾರ್ಕೆಟ್ ಉತ್ತಮವಾಗಿಲ್ಲ. ಕೆಲಸ ಗಿಟ್ಟಿಸಿಕೊಳ್ಳುವುದು ಸವಾಲಾಗಿದೆ. ಹೀಗಾಗಿ ಪರಿಸ್ಥಿತಿಯೂ ವಿರುದ್ಧವಾಗಿದೆ. ಈ ಕಾರಣದಿಂದ ಕೆಲಸ ಬದಲಾಯಿಸುವ ಸಾಹಸ ಮಾಡುತ್ತಿಲ್ಲ ಎಂದು ಮಹಿಳಾ ಟೆಕ್ಕಿ ಹೇಳಿದ್ದಾರೆ.