ನೋಡಿದ್ರೆ ಮೈ ಜುಂ ಅನ್ನುತ್ತೆ..ಬೃಹತ್ ಹೆಬ್ಬಾವಿನ ಜೊತೆ ಮಗುವಿನ ಜಾರುಬಂಡಿ ಆಟ!
ಹಾವು ಅಂದ್ರೆ ಸಾಕು ನಾವೆಲ್ಲಾ ಮಾರು ದೂರ ಓಡ್ತೇವೆ. ಆದ್ರೆ ಇಲ್ಲೊಂದು ಅಂಬೆಗಾಲಿಡುವ ಬಾಲೆ ಮಾತ್ರ ಹೆಬ್ಬಾವಿನೊಂದಿಗೇ ಸರಸವಾಡ್ತಿದೆ. ಅಷ್ಟೇ ಅಲ್ಲ ಹಾವಿನ ಬಾಯಿ ಹಿಟ್ಕೊಂಡು, ಮೈ ಮೇಲೆ ಬಿದ್ದು ಜಾರುಬಂಡಿ ಆಡ್ತಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಹಾವು ಎಂದರೆ ನಾವು ಮಾರುದ್ದ ಓಡುತ್ತೇವೆ. ಇನ್ನು ಅದರ ಜೊತೆ ಆಟವಾಡುವುದು, ಹತ್ತಿರ ಹೋಗುವುದು ದೂರದ ಮಾತು. ಆದರೆ ಇಲ್ಲೊಂದು ಮಗು ಯಾವುದೇ ಭಯವಿಲ್ಲದೆ ಹಾವಿನ ಜೊತೆ ಸರಸವಾಡ್ತಿದೆ. ಬೃಹತ್ ಗಾತ್ರದ ಹೆಬ್ಬಾವಿನ ಮೇಲೆ ಉರುಳಾಡಿ ಖುಷಿ ಪಡ್ತಿದೆ. ಈ ದೃಶ್ಯವನ್ನು ನೋಡಿದರೆ ಮೈ ಜುಂ ಎನಿಸದೇ ಇರದು. ಆದರೆ ಮಗು ಮಾತ್ರ ಸ್ವಲ್ಪವೂ ಭಯವಿಲ್ಲದೇ ಸಲೀಸಾಗಿ ಹೆಬ್ಬಾವಿನ ಸುತ್ತ ಓಡಾಡುತ್ತದೆ. ಮಕ್ಕಳು ಆಟವಾಡುವುದು ಮತ್ತು ಸಾಕುಪ್ರಾಣಿಗಳೊಂದಿಗೆ ಮೋಜು ಮಾಡುವುದು ಹೊಸದೇನಲ್ಲ. ಆದರೂ, ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಅಪಾಯಕಾರಿ ಪ್ರಾಣಿ ಅಥವಾ ಯಾವುದೇ ಇತರ ಜೀವಿಗಳೊಂದಿಗೆ ಆಟವಾಡಲು ಬಿಡುವುದಿಲ್ಲ. ಆದರೆ ಇಲ್ಲಿ ಪುಟ್ಟ ಮಗು ಆಟಿಕೆಗಳನ್ನೆಲ್ಲಾ ಬಿಟ್ಟು ಹೆಬ್ಬಾವಿನೊಂದಿಗೇ ಆಟವಾಡ್ತಿದೆ.
ವೀಡಿಯೊದಲ್ಲಿ ಮೊದಲಿಗೆ ಮಗು ಬೃಹತ್ ಹೆಬ್ಬಾವಿನ (Huge python) ಕುತ್ತಿಗೆಯನ್ನು ಹಿಡಿದಿರುವುದು ಕಂಡುಬರುತ್ತದೆ. ನಂತರ ಹೆಬ್ಬಾವು ಚಲಿಸಲು ಆರಂಭಿಸಿದಾಗ ಬಂದು ಅದರ ಮೈ ಮೇಲೆ ಒರಗಿಕೊಳ್ಳುತ್ತದೆ. ಹೆಬ್ಬಾವು ಚಲಿಸುವಾಗ ಮಗು (Toddler) ಜೊತೆಯಲ್ಲೇ ಜಾರುತ್ತಾ ಜಾರುಬಂಡಿ ಆಟದಂತೆ ನಗುತ್ತಾ ಖುಷಿ (Happy) ಪಡುವುದನ್ನು ನೋಡಬಹುದು. ಹೆಬ್ಬಾವು ಮುಂದೆ ತೆವಳುತ್ತಿರುವಾಗ, ತಕ್ಷಣವೇ ಮುಂಭಾಗಕ್ಕೆ ಓಡಿ ಅದನ್ನು ಎತ್ತುತ್ತದೆ. ವೀಡಿಯೋ ಹಳೆಯದಾದರೂ ಸಾಮಾಜಿಕ ಜಾಲತಾಣಗಳಲ್ಲಿ (Social media) ಮತ್ತೆ ಕಾಣಿಸಿಕೊಂಡಿದೆ. ದಿ ಫಿಗೆನ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ವಿಷಕಾರಿ ಹಾವು ಸಾಕಣೆ ಮೂಲಕವೇ 100 ಕೋಟಿ ಸಂಪಾದಿಸುತ್ತೆ ಈ ಗ್ರಾಮ!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಮಗುವನ್ನು ಹೆಬ್ಬಾವಿನ ಹತ್ತಿರ ಬಿಟ್ಟಿರೋ ಪೋಷಕರ (Parents) ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ವೀಡಿಯೋ ನೋಡಿ ಶಾಕ್ ಆದೆ. ಏನು ಹೇಳಬೇಕೆಂದು ತಿಳಿಯುತ್ತಿಲ್ಲ' ಎಂದು ತಿಳಿಸಿದ್ದಾರೆ. ಮತ್ತೊಬ್ಬರು 'ಮಗು ಹೆಬ್ಬಾವಿನ ಬಳಿ ಸುರಕ್ಷಿತವಾಗಿದೆ. ದೇವರಿಗೆ ಧನ್ಯವಾದಗಳು' ಎಂದಿದ್ದಾರೆ. ಅದೇನೆ ಇರ್ಲಿ ಅಂಬೆಗಾಲಿಡುವ ಮಗು ಮತ್ತು ಹೆಬ್ಬಾವಿನ ಒಡನಾಟ ಜನರನ್ನು ಬೆಚ್ಚಿಬೀಳಿಸಿರೋದಂತೂ ನಿಜ.
ಹಾವಿನೊಂದಿಗೆ ಸಹೋದರಿಯರ ಸರಸ: ಟೇಬಲ್ ಮೇಲಿರಿಸಿಕೊಂಡು ಊಟ
ಕೆಲ ದಿನಗಳ ಹಿಂದೆ ಸಹೋದರಿಯರಿಬ್ಬರು ಹಾವೊಂದನ್ನು ಡೈನಿಂಗ್ ಟೇಬಲ್ ಮೇಲೆ ಕೂರಿಸಿಕೊಂಡು ಅದರೊಂದಿಗೆ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಭಯಭೀತರಾಗಿದ್ದರು. ilhan atalay ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು.
ಹೆಬ್ಬಾವಿನಿಂದ ಸಾಕುನಾಯಿ ರಕ್ಷಿಸಿದ ಬಾಲಕರು: ನೋಡಿ ಬಾಲಕರ ಶೌರ್ಯದ ವಿಡಿಯೋ
ಈ ವಿಡಿಯೋವನ್ನು ರೆಸ್ಟೋರೆಂಟ್ (restaurant) ಒಂದರಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ ಇದೊಂದು ಕಂಪ್ಯೂಟರ್ ಆನಿಮೇಷನ್ ಆಗಿದೆ. ಏಕೆಂದರೆ ಅಷ್ಟೊಂದು ಭಾರಿ ತೂಕದ ಹಾವು ಸೂಕ್ಷ್ಮವಾಗಿ ಗಮನಿಸಿದರೆ ಬೆಲೂನಿಗೆ ಗಾಳಿ ತುಂಬಿಸಿದಂತೆ ಗಾಳಿಯಲ್ಲಿ ತೇಲುವಂತೆ ಕಾಣಿಸುತ್ತಿದೆ. ಜೊತೆಗೆ ಅಷ್ಟು ಬೃಹತ್ ಗಾತ್ರದ ಹಾವು (Snake) ಟೇಬಲ್ ಮೇಲೆ ಇರುವ ಪ್ಲೇಟ್‌ಗಳ ಮೇಲೆ ಸುರುಳಿ ಸುತ್ತಿದ್ದಂತೆ ಕಾಣಿಸುತ್ತಿದ್ದೆ. ಆದರೆ ಭಾರ ಬಿದ್ದಾಗ ಪ್ಲೇಟ್‌ಗಳು ಮಗುಚಿ ಬೀಳುವುದು ಅಲುಗಾಡುವುದೋ ಆಗಬೇಕು. ಆದರೆ ಇಲ್ಲಿ ಅದ್ಯಾವುದು ಆಗುತ್ತಿಲ್ಲ. ಅಲ್ಲದೇ ಹಾವಿನ ಮೇಲ್ಮೈಯೂ ಇಲ್ಲಿ ಬಲೂನ್‌ನಂತೆ ಕಾಣಿಸುತ್ತಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಆಪ್‌ಗಳಲ್ಲಿರುವ ಕೆಲವು ಫಿಲ್ಟರ್‌ಗಳನ್ನು ಬಳಸಿ ಈ ಆನಿಮೇಷನ್ (Animation)ಹಾವನ್ನು ನಿರ್ಮಿಸಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯಬಹುದಾಗಿದೆ.