ನವದೆಹಲಿ(ಆ.25): ಭಾರತದ ಟೆಲಿಕಾಂ ಕಂಪನಿಗಳು ಕಡಿಮೆ ದರದಲ್ಲಿ ಡಾಟಾ ನೀಡುತ್ತಿದೆ. ಆದರೆ ಇನ್ನು ಮುಂದೆ ಇದು ಸಾಧ್ಯವಿಲ್ಲ. ಕಡಿಮೆ ದರವನ್ನೇ ಮುಂದುವರಿಸಿದರ ಭಾರತದಲ್ಲಿ ಟೆಲಿಕಾಂ ಕಂಪನಿಗಳ ಸಂಖ್ಯೆ ಕೇವಲ 2ಕ್ಕೆ ಕುಸಿಯಲಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನಿಲ್ ಮಿತ್ತಲ್ ಎಚ್ಚರಿಸಿದ್ದಾರೆ.

BSNL‌ ಇಂಟರ್‌ನೆಟ್‌ ಅಯೋಮಯ! ಡಾಟಾ ಸ್ಪೀಡ್ ಇಲ್ಲದೆ, ನೆಟ್‌ವರ್ಕ್‌ ಬದಲು

ಭಾರತದಲ್ಲಿ 160 ರೂಪಾಯಿಗೆ 16 ಜಿಬಿ ಡಾಟಾ ಸೇವೆ ಅನುಭವಿಸುತ್ತಿರುವುದು ದುರಂತ. ಭಾರತದಲ್ಲಿ ಏರ್‌ಟೆಲ್ ಪ್ರತಿ ಗ್ರಾಹಕರಿಂದ ಕಂಪನಿಗೆ ಬರುವ ಸರಾಸರಿ ಆದಾಯ 160  ರೂಪಾಯಿ. ಈ ಸರಾಸರಿ ಆದಾಯ ಶೀಘ್ರದಲ್ಲೇ 200 ದಾಟಲಿದೆ ಎಂದು ಸುನಿಲ್ ಮಿತ್ತಲ್ ಹೇಳಿದ್ದಾರೆ. ಪ್ರತಿ ತಿಂಗಳಿಗೆ 2 ಡಾಲರ್ ಮೊತ್ತ ನೀಡಿ 16 ಜಿಬಿ ಬಳಸುವುದು ಸರಿಯಲ್ಲ. ಇದು ಹೆಚ್ಚಳವಾಗಬೇಕು ಎಂದಿದ್ದಾರೆ.

ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!.

50 ರಿಂದ 60 ಅಮೆರಿಕನ್ ಡಾಲರ್ ಕೇಳುತ್ತಿಲ್ಲ. ಪ್ರತಿ ಗ್ರಾಹಕನಿಂದ ಬರುವ ಸರಾಸರಿ ಆದಾಯ 300 ರೂಪಾಯಿ ಆದರೆ ಕಂಪನಿ ಯಾವುದೇ ಸಮಸ್ಯೆ ಇಲ್ಲದೆ ನಡೆಯಲಿದೆ. ಆದರೆ ಸದ್ಯ ಭಾರ್ತಿ ಎರ್‌ಟೆಲ್ ಗರಿಷ್ಠ ಸರಾಸರಿ ಆದಾಯ ಹೊಂದಿದೆ. ಏರ್‌ಟೆಲ್ ಸದ್ಯ ಪ್ರತಿ ಗ್ರಾಹಕನಿಂದ ಬರುವ ಸರಾಸರಿ ಆದಾಯ 160 ರೂಪಾಯಿ. ಏರ್‌ಟೆಲ್‌ಗೆ ಪೈಪೋಟಿ ನೀಡಿರುವ ಜಿಯೋ ಸರಾಸರಿ ಆದಾಯ 140 ರೂಪಾಯಿ.  ಇತ್ತೀಚೆಗೆ ಆರಂಭಗೊಂಡ ಜಿಯೋ ಶೀಘ್ರದಲ್ಲೇ 140 ರೂಪಾಯಿಗೆ ತಲುಪಿದೆ.