Asianet Suvarna News Asianet Suvarna News

ಲಷ್ಕರ್‌ ಉಗ್ರನಾಗಿ ಬದಲಾದ ಯೋಧ ರಿಯಾಜ್‌ ಅಹ್ಮದ್‌: ದೆಹಲಿಯಲ್ಲಿ ಬಂಧನ

ಲಷ್ಕರ್‌ ಭಯೋತ್ಪಾದಕ ಸಂಘಟನೆಗೆ ಸೇರಿದ ಉಗ್ರ ರಿಯಾಜ್‌ ಅಹ್ಮದ್‌ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಿಯಾಜ್‌, ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಿಂದ ಕಾರ್ಯನಿರ್ವಹಿಸುತ್ತಿದ್ದ.

Indian Soldier turned Lashkar militant Riyaz Ahmed Arrested in Delhi akb
Author
First Published Feb 7, 2024, 8:27 AM IST

ನವದೆಹಲಿ: ಲಷ್ಕರ್‌ ಭಯೋತ್ಪಾದಕ ಸಂಘಟನೆಗೆ ಸೇರಿದ ಉಗ್ರ ರಿಯಾಜ್‌ ಅಹ್ಮದ್‌ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರಿಯಾಜ್‌, ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಿಂದ ಕಾರ್ಯನಿರ್ವಹಿಸುತ್ತಿದ್ದ. ಆಘಾತಕಾರಿ ಸಂಘತಿಯೆಂದರೆ ಈತ ಈ ಹಿಂದೆ ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯನಿರ್ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಿಯಾಜ್‌ ದೆಹಲಿಗೆ ಆಗಮಿಸುತ್ತಿದ್ದಾನೆ ಎಂದು ಕಾಶ್ಮೀರ ಪೊಲೀಸರು ನೀಡಿದ ಖಚಿತ ಸುಳಿವು ಆಧರಿಸಿ ದೆಹಲಿ ಪೊಲೀಸರು ಕಳೆದ ಭಾನುವಾರ ಆತನನ್ನು ಬಂಧಿಸಿದ್ದಾರೆ. ಈಗ ಪಾಕಿಸ್ತಾನದಿಂದ ಕಾಶ್ಮೀರಕ್ಕೆ ರವಾನಿಸುತ್ತಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸ್ವೀಕರಿಸಿ ಅದನ್ನು ಸ್ಥಳೀಯ ಉಗ್ರರಿಗೆ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 5 ಉಗ್ರರನ್ನು ಬಂಧಿಸಲಾಗಿದೆ.

ಪ್ರಧಾನಿ ಸಿಂಗ್ ಕೈಕುಲುಕಿ ಆತಿಥ್ಯ ಸ್ವೀಕರಿಸಿದ ಉಗ್ರ ಯಾಸಿನ್ ಮಲಿಕ್‌ಗೆ ಸಂಕಷ್ಟ, 1990ರ ಹತ್ಯೆ ಸಾಕ್ಷಿ ಲಭ್ಯ!

ಯುಪಿಎ ಸರ್ಕಾರದ ಆರ್ಥಿಕ ಅವ್ಯವಸ್ಥೆ ಬಗ್ಗೆ ಶ್ವೇತಪತ್ರ!

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿರುವ ಆರ್ಥಿಕ ಅವ್ಯವಸ್ಥೆಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿಯೇ ಸಂಸತ್‌ ಕಲಾಪವನ್ನು ಒಂದು ದಿನ ವಿಸ್ತರಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮಂಗಳವಾರವಷ್ಟೇ ಕೇಂದ್ರ ಸರ್ಕಾರ ಬಜೆಟ್‌ ಅಧಿವೇಶನವನ್ನು ಶುಕ್ರವಾರದ ಬದಲಾಗಿ ಶನಿವಾರ ಅಂತ್ಯಗೊಳಿಸುವುದಾಗಿ ಪ್ರಕಟಿಸಿತ್ತು.

2004ರಿಂದ 2014ರವರೆಗೆ ಆಡಳಿತ ನಡೆಸಿದ ಯುಪಿಎ ಸರ್ಕಾರದ ಅವಧಿಯಲ್ಲಾದ ಆರ್ಥಿಕ ಅವ್ಯವಸ್ಥೆ ಮತ್ತು ಆರ್ಥಿಕತೆಯ ಮೇಲೆ ಇದರ ಪರಿಣಾಮದ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಈ ಶ್ವೇತಪತ್ರ ಒಳಗೊಂಡಿರಲಿದೆ. ಅಲ್ಲದೇ ಇದನ್ನು ಸರಿಮಾಡಲು ಎನ್‌ಡಿಎ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಇದು ಒಳಗೊಂಡಿರಲಿದೆ ಎಂದು ವರದಿ ತಿಳಿಸಿದೆ. ಯುಪಿಎ ಆರ್ಥಿಕ ಅವ್ಯವಸ್ಥೆಯ ಬಗ್ಗೆ ಶೀಘ್ರ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದಲ್ಲಿ ಹೇಳಿದ್ದರು.

ಮೂರು ನಾಗರೀಕರ ಸಾವಿನ ಬಳಿಕ ಪಿರ್‌ ಟೋಪಾ ಹಳ್ಳಿ ದತ್ತು ತೆಗೆದುಕೊಂಡ ಭಾರತೀಯ ಸೇನೆ!

Follow Us:
Download App:
  • android
  • ios