ಕೇಂದ್ರ ಸರ್ಕಾರ ದೇಶದ ಮೂಲಸೌಕರ್ಯ ಅದರಲ್ಲೂ ಹೆದ್ದಾರಿಗಳ ಅಭಿವೃದ್ಧಿ ವಿಚಾರದಲ್ಲಿ ಗಂಭೀರವಾಗಿ ಕೆಲಸ ಮಾಡಿದೆ. ನಿತಿನ್‌ ಗಡ್ಕರಿ ನೇತೃತ್ವದಲ್ಲಿ ದೇಶದ ಹೆದ್ದಾರಿಗಳ ನಿರ್ಮಾಣ ಸಮರೋಪಾದಿಯಲ್ಲಿ ಸಾಗುತ್ತಿದೆ. 

ನವದೆಹಲಿ (ಜ.5): ದೇಶದ ಹೆದ್ದಾರಿಗಳ ವಿಚಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಟ್ಟಷ್‌ಟು ಮಹತ್ವ ಹಿಂದೆ ಯಾವುದೇ ಸರ್ಕಾರಗಳು ನೀಡಿಲ್ಲ. ಹೊಸ ಹೊಸ ಸಂಪರ್ಕಗಳು, ಸಮುದ್ರ ಸೇತುವೆಗಳು ದೇಶದ ಹೆದ್ದಾರಿ ಜಾಲದ ವಿಸ್ತರಣೆಯ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿದೆ. ಅದರ ಫಲಿತಾಂಶ ಈಗಾಗಲೇ ಕಂಡಿದ್ದು, ಹೊಸ ಎಕ್ಸ್‌ಪ್ರೆಸ್‌ವೇಗಳ ಶಂಕು ಸ್ಥಾಪನೆ, ಲೋಕಾರ್ಪಣೆ ನಡೆಯುತ್ತಿದೆ. ಇದರ ನಡುವೆ ವಿದೇಶಿ ಪ್ರವಾಸಿಗರೊಬ್ಬರು ದೇಶದ ರಸ್ತೆಗಳನ್ನು ನೋಡಿ ಖುಷಿ ಪಟ್ಟು ಮಾಡಿರುವ ವಿಡಿಯೋವನ್ನು ಕೇಂದ್ರ ಸರ್ಕಾರದ ಸಾರ್ವಜನಿಕ ಎಂಗೇಜ್‌ಮೆಂಟ್‌ ವೇದಿಕೆ ಮೈಗವ್‌ ಇಂಡಿಯಾ ಪೋಸ್ಟ್‌ ಮಾಡಿದೆ. ಇದರಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರೊಬ್ಬರು ದೇಶದ ರಸ್ತೆಗಳ ಬಗ್ಗೆ ಮಾತನಾಡಿದ್ದಾರೆ.

'ಇಲ್ಲಿಯವರೆಗೂ ಈತ 2500 ಕಿಲೋಮೀಟರ್‌ ಪ್ರಯಾಣ ಮಾಡಿದ್ದಾರೆ. ದೇಶದ ಅಪೂರ್ವ ರಸ್ತೆಗಳ ಬಗ್ಗೆ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಈ ವ್ಯಕ್ತಿ, 2500 ಕಿಲೋಮೀಟರ್‌ ಪ್ರಯಾಣದಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ ಹಾಗೂ ರಾಜಸ್ಥಾನ ರಾಜ್ಯಗಳನ್ನು ಕ್ರಮಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳೂ ಬಂದಿದ್ದು, 2500 ಕಿಲೋಮೀಟರ್‌ ಪ್ರಯಾಣಕ್ಕಾಗಿ ತಾವು ಎಷ್ಟು ಟೋಲ್‌ ಕಟ್ಟಿದ್ದಾರೆ ಎನ್ನುವುದನ್ನೂ ಆತ ತಿಳಿಸಬೇಕಿತ್ತು. ನನ್ನ ಪ್ರಕಾರ ಆತ ಕನಿಷ್ಠ 44 ಟೋಲ್‌ ದಾಟಿರುವ ಸಾಧ್ಯತೆ ಇದೆ ಎಂದಿದ್ದಾರೆ. ಬಹುಶಃ ಥ ವಾಪಿಯಿಂದ ಮುಂಬೈವರೆಗಿನ ಎನ್‌ಎಚ್‌ 48 ಅಲ್ಲಿ ಪ್ರಯಾಣಿಸಿರುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

Scroll to load tweet…

ಚಾರ್ಮಾಡಿ ಘಾಟ್ ರಸ್ತೆಗೆ 343 ಕೋಟಿ ರೂ. ಕೊಟ್ಟ ಕೇಂದ್ರ ಸರ್ಕಾರ

'ಕಳೆದ ದಶಕದಲ್ಲಿ, ಭಾರತದ ರಸ್ತೆ ಮೂಲಸೌಕರ್ಯ ಮತ್ತು ಸಾರಿಗೆ ಇಲಾಖೆಯು ನಿರಂತರ ಅಭಿವೃದ್ಧಿ ಪ್ರಯತ್ನಗಳಿಗೆ ಒಳಗಾಗಿದೆ. ಅಸ್ತಿತ್ವದಲ್ಲಿರುವ ರಸ್ತೆಗಳ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವತ್ತ ಗಮನ ಹರಿಸಲಾಗಿದೆ. ನಮ್ಮ ಪ್ರಸ್ತುತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಗರದ ರಸ್ತೆಗಳು, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಒಟ್ಟಾರೆ ಮೂಲಸೌಕರ್ಯದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಈ ಸುಧಾರಣೆಯು ಗುಣಮಟ್ಟ, ಸುರಕ್ಷತೆ ಮತ್ತು ಮಾನದಂಡಗಳಲ್ಲಿನ ಪ್ರಗತಿಯಿಂದ ಗುರುತಿಸಲ್ಪಟ್ಟಿದೆ, ಇದು ದೇಶದ ಸಾರಿಗೆ ಜಾಲವನ್ನು ಹೆಚ್ಚಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಡಾ.ಜೆಎಸ್‌ ರಾಜಕುಮಾರ್‌ ಎನ್ನುವವರು ಬರೆದಿದ್ದಾರೆ.

ಕಾಂಗ್ರೆಸ್‌ ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ! ರಸ್ತೆ ನಿರ್ಮಿಸಿದ ಗುತ್ತಿಗೆದಾರರೇ 5 ವರ್ಷ ನಿರ್ವಹಣೆ ಮಾಡಬೇಕು

'ನಿಸ್ಸಂದೇಹವಾಗಿ ರಸ್ತೆಗಳ ವೇಗ ಮತ್ತು ಕೆಲಸದ ಗುಣಮಟ್ಟ ಉತ್ತಮವಾಗಿದೆ. ಆದರೆ ಮುಂಬೈ ಹಾಗೂ ವಾಪಿ ನಡುವಿನ ಹೆದ್ದಾರಿ ಕಳೆದ 3 ವರ್ಷಗಳಿಂದ ಪ್ರಯಾಣಿಸಲು ದುಃಸ್ವಪ್ನವಾಗಿದೆ. ಮೊದಲು ಕಿಲ್ಲರ್ ಪಾತ್ ಹೋಲ್‌ಗಳು, ಈಗ RCC ರಸ್ತೆ ನಿರ್ಮಾಣವು ಯಾವುದೇ ಯೋಜನೆ/ನಿಯಂತ್ರಣ/ಕೆಲಸದ ಹೊಣೆಗಾರಿಕೆ ಇಲ್ಲದಂತಿದೆ' ಎಂದು ಇನ್ನೊಬ್ಬರು ಬರೆದಿದ್ದಾರೆ.