Asianet Suvarna News Asianet Suvarna News

ರೈಲು ಸಂಚಾರಕ್ಕೆ ಲಾಕ್‌ ಓಪನ್: ಟಿಕೆಟ್ ಬುಕ್ ಮಾಡುವುದೇಗೆ..?

ಲಾಕ್‌ಡೌನ್ ಮಧ್ಯೆ ಕೆಲವು ಟ್ರೈನ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಬುಕೆ ಮಾಡ್ಬೇಕು. ಹಾಗಾದ್ರೆ ಟಿಕೆಟ್ ಬುಕ್ ಮಾಡುವುದೇಗೆ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

indian railways restart Trains how to book tickets In Online
Author
Bengaluru, First Published May 11, 2020, 4:29 PM IST
  • Facebook
  • Twitter
  • Whatsapp

ನವದೆಹಲಿ, (ಮೇ.11): ಲಾಕ್‌ಡೌನ್‌ ಮಧ್ಯೆಯೇ ನಾಳೆ (ಮೇ 12) ರಿಂದ 15 ಪ್ಯಾಸೆಂಜರ್ ರೈಲುಗಳ ಓಡಾಟಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನವದೆಹಲಿಯಿಂದ ವಿವಿಧ ರಾಜ್ಯಗಳಿಗೆ ಈ ರೈಲುಗಳು ಸಂಚರಿಸಲಿವೆ.

ಈ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದ್ರೆ ನೀವು ಕೇವಲ ಆನ್‌ಲೈನ್‌ ಮೂಲಕ ಮಾತ್ರ ಟಿಕೆಟ್‌ ಪಡೆದುಕೊಳ್ಳವುದಕ್ಕೆ ಅವಕಾಶ ನೀಡಲಾಗಿದೆ.

ರೈಲಿನಲ್ಲಿ ಪ್ರಯಾಣಿಸುವವರಿಗೆ ಹೊಸ ಮಾರ್ಗಸೂಚಿ: ಸಚಿವ ಸುರೇಶ್ ಅಂಗಡಿ ಹೇಳಿದ್ರು ಬಿಡಿಸಿ-ಬಿಡಿಸಿ

ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ (IRCTC) ವೆಬ್‌ಸೈಟ್‌ನಲ್ಲಿ ಮಾತ್ರ ಟಿಕೆಟ್‌ ಬುಕ್ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, IRCTC ಖಾತೆಯನ್ನು ಹೊಂದಿರುವ ಟಿಕೆಟ್ ಬುಕ್ ಸಾಧ್ಯವಾಗುತ್ತದೆ. 

ಅಂದ ಹಾಗೇ IRCTCಯಲ್ಲಿ ಖಾತೆ ರಚಿಸಿ ಟಿಕೆಟ್ ಬುಕ್ ಮಾಡುವುದೇಗೆ? ಟಿಕೆಟ್ ಬುಕ್ ರದ್ದು ಮಾಡುವುದೇಗೆ..? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

* ಐಆರ್‌ಸಿಟಿಸಿ ವೆಬ್‌ಸೈಟ್( www.irctc.co.in) ಗೆ ಭೇಟಿ ನಿಮ್ಮ ಖಾತೆ ಇದ್ದರೆ ಲಾಗಿನ್ ಆಗಿ

* ಹೊಸ ಖಾತೆ ರಚಿಸಬೇಕಾದರೆ ಸೈನ್ ಅಪ್ ಕ್ಲಿಕ್ ಮಾಡಿ ಹೊಸ ಖಾತೆ ರಚಿಸಿ.

* ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ

. * ಆಧಾರ್ ಹಾಗೂ ಐಆರ್ ಸಿಟಿಸಿ ಖಾತೆ ಲಿಂಕ್ ಆಗಿರುವುದನ್ನು ದೃಢಪಡಿಸಿ.

* ನಿಮ್ಮ ಪ್ರಯಾಣದ ವಿವರ ದಾಖಲಿಸಿ ಎಲ್ಲಿಂದ ಎಲ್ಲಿಗೆ ಎಂದು ಹಾಕಿ, ಟ್ರೈನ್ ಪತ್ತೆ ಹಚ್ಚಿ, ಟಿಕೆಟ್ ಬುಕ್ ಮಾಡಿ

* ನಿಮ್ಮ ಇಮೇಲ್, ಮೊಬೈಲ್ ಫೋನ್ ಲಿಂಕ್ ಆಗಿದ್ದರೆ ಒಟಿಪಿ ಮೂಲಕ ನಿಮ್ಮ ಟಿಕೆಟ್ ಸುರಕ್ಷಿತವಾಗಲಿದೆ.

Follow Us:
Download App:
  • android
  • ios