Asianet Suvarna News Asianet Suvarna News

3.5 ಕಿ.ಮೀ ಉದ್ದದ ರೈಲು ಓಡಿಸಿ ರೈಲ್ವೆ ದಾಖಲೆ!

3.5 ಕಿ.ಮೀ ಉದ್ದದ ರೈಲು ಓಡಿಸಿ ರೈಲ್ವೆ ದಾಖಲೆ| ಹಿಂದೆ ಸೂಪರ್‌ ಆನಕೊಂಡ, ಶೇಷ ನಾಗ ರೈಲು ಓಡಿಸಿದ್ದ ರೈಲ್ವೆ

Indian Railways longest freight train Vasuki creates new record in SECR zone pod
Author
Bangalore, First Published Jan 25, 2021, 8:39 AM IST

ನವದೆಹಲಿ(ಜ.25): ಐದು ರೈಲುಗಳನ್ನು ಜೋಡಣೆಯೊಂದಿಗೆ ಅತ್ಯಂತ ಉದ್ದದ ಸರಕು ಸಾಗಣೆಯ ರೈಲು ಓಡಿಸುವ ಮೂಲಕ ಭಾರತೀಯ ರೈಲ್ವೆ ಸಾಧನೆ ಮೆರೆದಿದೆ. ಭಾರತೀಯ ರೈಲ್ವೆಯ ಆಗ್ನೇಯ ಮಧ್ಯದ ರೈಲ್ವೆ ವಿಭಾಗವು ಐದು ರೈಲುಗಳನ್ನೊಳಗೊಂಡ ಈ ರೈಲಿಗೆ ‘ವಾಸುಕಿ’ ಎಂದು ನಾಮಕರಣ ಮಾಡಲಾಗಿದೆ.

ಜನವರಿ 22ರಂದು ಛತ್ತೀಸ್‌ಗಢದ ಭಿಲಾಯ್‌ ಡಿ ಕ್ಯಾಬಿನ್‌ನಿಂದ ಹೊರಟಿದ್ದ 3.5 ಕಿ.ಮೀ ಉದ್ದದ ಈ ರೈಲು ಕೇವಲ 7 ಗಂಟೆಯಲ್ಲಿ 224 ಕಿ.ಮೀ ಕ್ರಮಿಸಿ ಕೊರ್ಬಾದ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದೆ. ಓರ್ವ ಲೋಕೋ ಪೈಲಟ್‌, ಓರ್ವ ಸಹಾಯಕ ಲೋಕೋ ಪೈಲಟ್‌ ಮತ್ತು ಒಬ್ಬ ಗಾರ್ಡ್‌ ಅವರು ಮಾತ್ರವೇ ಈ ಅತಿ ಉದ್ದದ ರೈಲನ್ನು ನಿರ್ವಹಿಸಿದ್ದಾರೆ. ಸೋಮವಾರ ಈ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯೆಲ್‌ ಅವರು ಹಂಚಿಕೊಂಡಿದ್ದು, ಇದು ಅತ್ಯಂತ ಉದ್ದದ ರೈಲು ಎಂದು ಹರ್ಷಿಸಿದ್ದಾರೆ.

ಈ ಹಿಂದೆ ಆಗ್ನೇಯ ಮಧ್ಯ ರೈಲ್ವೆ ವಲಯವು, 3 ರೈಲುಗಳನ್ನು ಒಳಗೊಂಡ ‘’ಸೂಪರ್‌ ಆನಕೊಂಡ’ ಮತ್ತು 2.8 ಕಿ.ಮೀ ಉದ್ದದ ‘ಶೇಷ ನಾಗ’ ಎಂಬ ಉದ್ದದ ರೈಲುಗಳನ್ನು ಓಡಿಸಿತ್ತು.

Follow Us:
Download App:
  • android
  • ios