ಕೊರೋನಾ ನಿಯಂತ್ರಣಕ್ಕೆ ಹೊಸ ಯಂತ್ರ ಅಳವಡಿಕೆ; ಬೆಂಗಳೂರು ರೈಲು ನಿಲ್ದಾಣಕ್ಕೆ ಎಲ್ಲರ ಮೆಚ್ಚುಗೆ!
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲೇಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧಾರಣೆ ಸೇರಿದಂತೆ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲಿಸಬೇಕು. ಇದೀಗ ಬೆಂಗಳೂರು ರೈಲು ನಿಲ್ದಾಣದಲ್ಲಿ ಹೊಸ ಯಂತ್ರ ಅಳವಡಿಸಲಾಗಿದ್ದು. ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನೂತನ ಯಂತ್ರದ ವಿಶೇಷತೆ ಏನು?
ಬೆಂಗಳೂರು(ಆ.14): ಕೊರೋನಾ ವೈರಸ್ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೆಲ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಇದರಲ್ಲಿ ಪ್ರಮುಖವಾಗಿ, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕಣ್ಣು, ಮೂಗು, ಬಾಯಿ ಮುಟ್ಟದಂತೆ ಎಚ್ಚರವಹಿಸುವುದು ಸೇರಿದಂತೆ ಹಲವು ನಿಯಮ ಪಾಲಿಸಬೇಕು. ಹಲವರು ಒಟ್ಟು ಸೇರುವ ಬಳಿ, ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಹೀಗಾಗಿ ಬೆಂಗಳೂರು ರೈಲು ನಿಲ್ದಾಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವ ಸಲುವಾಗಿ ಹಾಗೂ ಕೊರೋನ ವೈರಸ್ ಹರಡದಂತೆ ಎಚ್ಚರ ವಹಿಸಲು ಕೈತೊಳೆಯುವ ಯಂತ್ರ ಅಳವಡಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ರೀತಿಯ ರೈಲು ನಿಲ್ದಾಣ; 104 ಕೋಟಿ ರೂ. ಯೋಜನೆ!.
ಬಹುತೇಕ ಎಲ್ಲಾ ಕಡೆ ಸ್ಯಾನಿಟೈಸರ್ ಅಥವಾ ಕೈತೊಳೆಯಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಯಂತ್ರದ ವಿಶೇಷತೆ ಏನು ಅಂತೀರಾ? ಹೌದು, ಇದರಲ್ಲಿ ವಿಶೇಷತೆ ಇದೆ. ಟ್ಯಾಪ್ ಅಥವಾ ನೀರು ಬಿಡಲು ಹಾಗೂ ನಿಲ್ಲಿಸಲು ಕೈಗಳನ್ನು ಉಪಯೋಗಿಬೇಕಿಲ್ಲ. ಕಾಲಿನಿಂದ ಒತ್ತಿದ್ದರೆ ನೀರುಬರಲಿದೆ. ಇನ್ನು ಸಾಬೂನು ಮಿಶ್ರಿತ ನೀರಿನ ಮೂಲಕ ಕೈತೊಳೆದು ಬಳಿಕ ಸ್ವಚ್ಚ ನೀರಿನಿಂದ ಕೈಗಳನ್ನು ತೊಳೆಯುವ ಅವಕಾಶವಿದೆ.
ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ
ಕೈ ತೊಳೆದ ಬಳಿಕ ಕಾಲಿನಿಂದಲೇ ನೀರು ನಿಲ್ಲಿಸಬಹುದು. ಇದರಿಂದ ಕೈಗಳಿಂದ ನಲ್ಲಿ ಮುಟ್ಟುವುದು, ಟ್ಯಾಪ್ ಮುಟ್ಟವ ಅನಿವಾರ್ಯತೆ ತಪ್ಪಲಿದೆ. ಇಷ್ಟೇ ಅಲ್ಲ ನಲ್ಲಿ ಅಥವಾ ಟ್ಯಾಬ್ನಿಂದ ಕೊರೋನಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಲಿದೆ.
ನೂತನ ಯಂತ್ರದ ಕುರಿತು ರೈಲ್ವೈ ಇಲಾಖೆ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿನೂತನ ಯೋಜನೆ ಮೂಲಕ ಕೊರೋನಾ ನಿಯಂತ್ರಣಕ್ಕೆ ಮುಂದಾಗಿರುವ ರೈಲ್ವೈ ಇಲಾಖೆ ಕಾರ್ಯವನ್ನು ಶ್ಲಾಘಿಸಿದ್ದಾರೆ.