Asianet Suvarna News Asianet Suvarna News

ಅಯೋಧ್ಯೆಯಲ್ಲಿ ರಾಮ ಮಂದಿರ ರೀತಿಯ ರೈಲು ನಿಲ್ದಾಣ; 104 ಕೋಟಿ ರೂ. ಯೋಜನೆ!

ದಶರಥ ಮಹಾರಾಜನ ಅಯೋಧ್ಯೆಗೆ ಮರುಜೀವ ಬಂದಿದೆ. ಶ್ರೀ ರಾಮ ಆಳಿದ ಆಯೋಧ್ಯೆ ಮತ್ತೆ ಅದೇ ಗತಕಾಲದ ವೈಭವಕ್ಕೆ ಸಾಕ್ಷಿಯಾಗುವ ಕಾಲ ಸನ್ನಿಹಿತವಾಗಿದೆ. ವಿವಾದಗಳೆಲ್ಲಾ ಬಗೆಹರಿದು ಇದೇ ಆಗಸ್ಟ್ 5 ರಂದು ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯ ನಡೆಯಲಿದೆ. ಈ ಸಂತಸ, ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಇಲಾಖೆ ಮತ್ತೊಂದು ಸಿಹಿ ಸುದ್ದಿ ನೀಡಿದೆ.

Ayodhya railway station is getting a makeover and will be a replica of the Ram Mandir
Author
Bengaluru, First Published Aug 3, 2020, 10:23 PM IST

ಅಯೋಧ್ಯೆ(ಆ.03): ಶ್ರೀ ರಾಮ ಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಕಲ ತಯಾರಿ ನಡೆಯುತ್ತಿದೆ. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಿದ್ದಾರೆ. ಪ್ರಮುಖ ಗಣ್ಯರು ಕಾರ್ಯಕ್ರಮಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀ ರಾಮ ಮಂದಿರ ನಿರ್ಮಾಣ ದೇಶದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದೆ. ಈ ಸಂಭ್ರಮ ಇದೀಗ ಡಬಲ್ ಆಗಿದೆ. ಕಾರಣ ಭಾರತೀಯ ರೈಲ್ವೇ ಇಲಾಖೆ ಇದೀಗ ಆಯೋಧ್ಯೆಯಲ್ಲಿ ರಾಮ ಮಂದಿರ ಹೋಲುವ ರೀತಿಯಲ್ಲೇ ರೈಲು ನಿಲ್ದಾಣ ನಿರ್ಮಿಸುತ್ತಿದೆ.

ರಾಮ ಮಂದಿರ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ವೈರಲ್: ಮೋದಿ ಜೊತೆ ಮೂವರ ಹೆಸರು!

ಬರೋಬ್ಬರಿ 104 ಕೋಟಿ ರೂಪಾಯಿ ವೆಚ್ಚದಲ್ಲಿ ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣವಾಗಲಿದೆ. ಈ ರೈಲ ನಿಲ್ದಾಣ ಶ್ರೀ ರಾಮ ಮಂದಿರ ರೀತಿಯಲ್ಲೇ ಇರಲಿದೆ. ಶ್ರೀ ರಾಮ ಜನ್ಮ ಭೂಮಿಯಾದ ಕಾರಣ, ಇಲ್ಲಿಗೆ ಆಗಮಿಸುವ ಭಕ್ತರಿಗೆ ವಿಶೇಷ ಸೌಲಭ್ಯ, ಶುಚಿತ್ವ ಹಾಗೂ ಶ್ರೇಷ್ಠ ಮಟ್ಟದ ಸೌಲಭ್ಯ ಸಿಗುವಂತಾಗಬೇಕು. ಇದಕ್ಕಾಗಿ ಸುಸಜ್ಜಿತ ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣ ಮಾಡಲಿದ್ದೇವೆ ಎಂದು ರೈಲ್ವೇ ಇಲಾಖೆ ಹೇಳಿದೆ.

ಸದ್ಯ ಅಯೋಧ್ಯೆಯಲ್ಲಿರವ ಸಣ್ಣ ರೈಲು ನಿಲ್ದಾಣದ ಸಂಪೂರ್ಣ ಸ್ವರೂಪವೇ ಬದಲಾಗಲಿದೆ. ಎರಡು ಹಂತದಲ್ಲಿ ಕಾಮಾಗಾರಿ ನಡೆಯಲಿದೆ. ಮೊದಲ ಹಂತದ ಕಾಮಾಗಾರಿ 2021ರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 2ನೇ ಹಂತದ ಕಾಮಗಾರಿ 2024ರಲ್ಲಿ ಪೂರ್ಣಗೊಳ್ಳಲಿದೆ. ಆರಂಭದಲ್ಲಿ 3 ಪ್ಲಾಟ್ ಫಾರ್ಮ್ ಕಾರ್ಯಗಳು ಆರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ ಕಟ್ಟಡ ನಿರ್ಮಾಣ, ರಾಮ ಮಂದಿರ ಗೋಪುರದ ರೀತಿಯಲ್ಲಿನ ಕಟ್ಟಡ, ಇತರ ಸೌಲಭ್ಯಗಳ ನಿರ್ಮಾಣ ಕಾರ್ಯಗಳು ನಡೆಯಲಿದೆ.

ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣ ಕುರಿತು ರೈಲ್ವೇ ಸಚಿವ ಪಿಯೂಷ್ ಗೊಯೆಲ್ ಟ್ವೀಟ್ ಮಾಡಿದ್ದಾರೆ. ಶ್ರೀ ರಾಮನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗಾಗಿ ಆಯೋಧ್ಯೆ ರೈಲು ನಿಲ್ದಾಣವನ್ನು ಮೇಲ್ದದರ್ಜೆ ಏರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೂತನ ಅಯೋಧ್ಯೆ ರೈಲು ನಿಲ್ದಾಣ ನಿರ್ಮಾಣವಾಗಲಿದೆ ಎಂದು ಗೊಯೆಲ್ ಟ್ವೀಟ್ ಮಾಡಿದ್ದಾರೆ.

 

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ಬೆನ್ನಲ್ಲೇ ರೈಲು ಇಲಾಖೆ ಕೂಡ ಶ್ರೀ ರಾಮ ಭಕ್ತರಿಗೆ ಸಿಹಿ ಸುದ್ದಿ ನೀಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯದ ಜೊತೆಗೆ ರೈಲು ನಿಲ್ದಾಣ ಕೂಡ ನಿರ್ಮಾಣವಾಗಲಿದೆ.

Follow Us:
Download App:
  • android
  • ios