ಬೆಂಗಳೂರು-ಕಾಮಾಕ್ಯ ಸೇರಿ 300ಕ್ಕೂ ಹೆಚ್ಚು ರೈಲು ರದ್ದು, ಭಾರತೀಯ ರೈಲ್ವೇ ಹೈ ಅಲರ್ಟ್!
ಯಶವಂತಪುರ-ಕಾಮಾಕ್ಯ, ಬೆಂಗಳೂರು ಗುವ್ಹಾಟಿ ಸೇರಿದಂತೆ 300ಕ್ಕೂ ಹೆಚ್ಚು ರೈಲು ಸಂಚಾರ ರದ್ದಾಗಿದೆ. ಭಾರತೀಯ ರೈಲ್ವೇ ಇಲಾಖೆ ರದ್ದಾಗಿರುವ ರೈಲು ಸಂಚಾರ ಮಾಹಿತಿ ಹಂಚಿಕೊಂಡಿದೆ.
ನವದೆಹಲಿ(ಅ.24) ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ರೈಲು ಸೇವೆ ಆರಂಭಿಸಿರುವ ಭಾರತೀಯ ರೈಲ್ವೇ ಇದೀಗ ದಿಢೀರ್ 300ಕ್ಕೂ ಹೆಚ್ಚು ರೈಲು ರದ್ದುಪಡಿಸಿದೆ. ಇದಕ್ಕೆ ಕಾರಣ ದಾನಾ ಚಂಡಮಾರುತ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಲಿರುವ ದಾನಾ ಚಂಡಮಾರುತ ಪರಿಣಾಮ ಭಾರತೀಯ ರೈಲ್ವೇ ಸುರಕ್ಷತಾ ದೃಷ್ಟಿಯಿಂದ 300ಕ್ಕೂ ಹೆಚ್ಚುರೈಲು ಸೇವೆ ರದ್ದು ಮಾಡಿದೆ. ಯಶವಂತಪುರ-ಕಾಮಾನ್ಯ ಎಕ್ಸ್‌ಪ್ರೆಸ್, ಬೆಂಗಳೂರು-ಗುವ್ಹಾಟಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ರದ್ದಾಗಿದೆ.
ಪಶ್ಚಿಮ ಬಂಗಾಳ ಹಾಗೂ ಒಡಿಳಾ ಕರಾವಳಿ ತೀರ ಪ್ರದೇಶಕ್ಕೆ ದಾನಾ ಚಂಡಮಾರುತ ಅಪ್ಪಳಿಸಿರುವ ಹಿನ್ನಲೆಯಲ್ಲಿ ಎರಡು ರಾಜ್ಯಗಳಿಂದ ಸುಮಾರು 10 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಭಾರತೀಯ ರೈಲ್ವೇ ಕೂಡ ಇದೀಗ ರೈಲು ರದ್ದು ಮಾಡಿ ಸರಕ್ಷತಾ ಕ್ರಮಗಳನ್ನು ಕೈಗೊಂಡಿದೆ. 300 ರೈಲುಗಳ ಪಿಕ 150ಕ್ಕೂ ಹೆಚ್ಚು ರೈಲುಗಳನ್ನು ಸೌತ್ ಈಸ್ಟರ್ನ್ ರೈಲ್ವೇ ವಿಭಾಗ ರದ್ದು ಮಾಡಿದೆ.
ವರ್ಷದ 15 ದಿನ ಮಾತ್ರ ಸಂಚರಿಸುತ್ತೆ ಭಾರತದ ಈ ರೈಲು, 23 ದೇಶದಿಂದ ಆಗಮಿಸುತ್ತಾರೆ ಪ್ರಯಾಣಿಕರು!
ಹೌರ-ಯಶವಂಪುರ ಎಕ್ಸ್‌ಪ್ರೆಸ್, ಕಾಮಾಕ್ಯ-.ಯಶವಂತಪುರ, ಬೆಂಗಳೂರು-ಗುವ್ಹಾಟಿ ಎಕ್ಸ್‌ಪ್ರೆಸ್, ಹೌರ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್, ಹೌರ-ಸಿಕಂದರಾಬಾದ್, ಹೌರ-ಭುವನೇಶ್ವರ್, ಪಾಟ್ನಾ ಎರ್ನಾಕುಲಂ, ಕನ್ಯಾಕುಮಾರಿ-ದಿಬ್ರುಗಢ, ಪುರಿ-ಜಯನಗರ ಎಕ್ಸ್‌ಪ್ರೆಸ್ ಸೇರಿದಂತೆ 300ಕ್ಕೂ ಹೆಚ್ಚು ರೈಲು ರದ್ದಾಗಿದೆ. ಈಸ್ಟ್ ಕೋಸ್ಟ್ ರೈಲ್ವೇ ವಿಭಾಗದ ಶಾಲಿಮಾರ್-ಪುರಿ, ನವದೆಹಲಿ-ಭುವನೇಶ್ವರ್, ಖರಗಪುರ-ವಿಲ್ಲುಪುರಂ, ಶಾಲಿಮಾರ್-ಹೈದರಾಬಾದ್ ರೈಲುಗಳನ್ನು ರದ್ದು ಮಾಡಲಾಗಿದೆ. ಪಶ್ಚಿಮ ಬಂಗಾಳದ ಹಸನಾಬಾದ್ ರೈಲು ನಿಲ್ದಾಣ ಇಂದು(ಅ.24) ರಾತ್ರಿ 8 ಗಂಟೆಯಿಂದ ಶುಕ್ರವಾರದ ವರೆಗೆ ಸಂಪೂರ್ಣ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪುಗೊಂಡಿದೆ. ಇಂದು ರಾತ್ರಿ ಒಡಿಳಾ ಹಾಗೂ ಪಶ್ಚಿಮ ಬಂಗಾಳ ಕರಾವಳಿ ಭಾಗಕ್ಕೆ ಅಪ್ಪಳಿಸು ಸಾಧ್ಯತೆ ಇದೆ. ಹೀಗಾಗಿ ಎರಡು ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿ ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಚಂಡಮಾರುತದ ಪರಿಣಾಮ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ.
ಈ ಚಂಡಮಾರುತ ಗಂಟೆಗೆ 100-110 ಕಿಮೀ ತೀವ್ರತೆಯಲ್ಲಿ ಗಾಳಿ ಬೀಸಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ನವಜಾತ ಮಗುವನ್ನು ರೈಲಿನಲ್ಲಿಟ್ಟು ತಾಯಿ ಪರಾರಿ, ರೈಲ್ವೇ ಪೇದೆಯಿಂದ ಬದುಕಿತು ಕಂದಮ್ಮ!