ಮುಂಬೈ(ಜು.09): ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ವಿಶ್ವದ ಇತರ ದೇಶಕ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಇದೀಗ ಭಾರತ ಫಾರ್ಮಸಿ ಕಂಪನಿ ಸಿಪ್ಲ ಕೊರೋನಾ ವೈರಸ್‌ಗೆ ಔಷಧ ಬಿಡುಗಡೆ ಮಾಡಿದೆ. ಇದು ಆ್ಯಂಟಿ ವೈರಲ್ ಡ್ರಗ್ ರೆಮೆಡೆಸಿವಿರ್(ಸಿಪ್ರೆಮಿ) ಆಗಿದ್ದು,  ಕೊರೋನಾ ವೈರಸ್‌ನಿಂದ ತೀವ್ರ ಹದಗೆಟ್ಟಿರುವ ಚಿಕಿತ್ಸೆಗಾಗಿ ಈ ಲಸಿಕೆ ಕಂಡು ಹಿಡಿಯಲಾಗಿದೆ ಎಂದು ಸಿಪ್ಲ ಹೇಳಿದೆ.

ಗಾಳಿಯಲ್ಲಿ ಕೊರೋನಾ..! ಮನೆಯಲ್ಲೇ ಇದ್ರೂ ಹರಡುತ್ತಾ ಸೋಂಕು..? ವಿಶ್ವಸಂಸ್ಥೆ ಹೇಳಿದ್ದಿಷ್ಟು..!...

ಸದ್ಯ ಸಿಪ್ಲ ಕಂಪನಿ ನೂತನ ಸಿಪ್ರೆಮಿ ಔಷಧಿಯ ಬೆಲೆ ಬಹಿರಂಗ ಪಡಿಸಿಲ್ಲ. ಇದರ ಬೆಲೆ  100mg ವೈಯಲ್‌ಗೆ 4,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಬಿಡುಗಡೆಗೂ ಮುನ್ನ ಸಿಪ್ಲ ಕಂಪನಿ ಔಷಧಿಯ ಬೆಲೆ 5,000 ರೂಪಾಯಿ ಒಳಗಿರಲಿದೆ ಎಂದು ಹೇಳಿತ್ತು. ಸಂಕಷ್ಟದ  ಸಮಯದಲ್ಲಿ ಸೋಂಕಿನಿಂದ ಕಾಪಾಡಲು ಸಿಪ್ಲ ಔಷಧಿ ಬಿಡುಗಡೆ ಮಾಡಿದೆ. ಇದು ಸಂತಸದ ವಿಚಾರ. ವಿಶೇಷ ಅಂದರೆ ಇದರ ಬೆಲೆ ಇತರ ಕೊರೋನಾ ಔಷಧಿಕ್ಕಿಂತ ಕಡಿಮೆ ಇದೆ ಎಂದು ಕಂಪನಿ ಉಪಾಧ್ಯಕ್ಷ ಹಾಗೂ ಸಿಇಓ ನಿಖಿಲ್ ಚೋಪ್ರ ಹೇಳಿದ್ದಾರೆ.

2021ಕ್ಕೆ ಭಾರತದಲ್ಲಿ ನಿತ್ಯ 2.8 ಲಕ್ಷ ಕೇಸ್‌? ಔಷಧ ಸಿದ್ಧವಾದ್ರೆ ಮಾತ್ರ ಬಚಾವ್

ಮೊದಲ ತಿಂಗಳಲ್ಲಿ 80,000 ವೈಯಲ್ಸ್ ಪೂರೈಕೆ ಮಾಡಲಾಗುತ್ತದೆ. ಬಳಿ ಹಂತ ಹಂತವಾಗಿ ಏರಿಕೆಯಾಗಲಿದೆ. ಇನ್ನು ಕೆಲ ಸಮುದಾಯಕ್ಕೆ ಸಿಪ್ಲ ಕೊರೋನಾ ವೈರಸ್ ಔಷದ ಸಿಪ್ರೆಮಿಯನ್ನು ಉಚಿತವಾಗಿ ನೀಡಲಿದೆ ಎಂದಿದೆ. ಸಿಪ್ರೆಮಿ ಔಷಧಿ, ಸರ್ಕಾರಿ ಆಸ್ಪತ್ರೆ, ಕೊರೋನಾ ವೈರಸ್ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ನಿಖಿಲ್ ಚೋಪ್ರ ಹೇಳಿದ್ದಾರೆ.