ದುಬೈ(ಏ.18): ಇದು ಕೊರೋನಾ ವೈರಸ್‌ ಸೃಷ್ಟಿಸಿರುವ ಕರುಣಾಜನಕ ಕಥೆ. ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದ ತಮ್ಮ ಪುತ್ರನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಾಗದ ತಂದೆ-ತಾಯಿ, ಫೇಸ್‌ಬುಕ್‌ ಲೈವ್‌ ಮೂಲಕ ತಮ್ಮ ಪುತ್ರನ ಅಂತ್ಯಕ್ರಿಯೆ ನೋಡಿ ಕಣ್ಣೀರಿಟ್ಟವ್ಯಥೆ.

ಹೌದು. ಕೇರಳದ ಪಟ್ಟಣಂತಿಟ್ಟಮೂಲದ ಬಾಲಕ ಜುಯೆಲ್‌ ಜೋಮೇ ಗುಡ್‌ಫ್ರೈಡೇ ದಿನ ಮೃತನಾಗಿದ್ದಾನೆ. 2004ರ ಈಸ್ಟರ್‌ ಹಬ್ಬದಂದು ಜನಿಸಿದ್ದ ಈತನಿಗೆ ಏಪ್ರಿಲ್‌ 11ರಂದು 16 ತುಂಬಬೇಕಿತ್ತು. ಆದರೆ ಅದಕ್ಕಿಂತ ಮೊದಲೇ ಆತ ಕ್ಯಾನ್ಸರ್‌ ಕಾರಣ ದುಬೈನಲ್ಲಿ ಅಸುನೀಗಿದ.

ಅಂತ್ಯಕ್ರಿಯೆಯಿಂದ 2 ಕುಟುಂಬದ 17 ಮಂದಿಗೆ ಕೊರೋನಾ ಸೋಂಕು? ಆತಂಕದಲ್ಲಿ ಜನತೆ..!

ಈತನ ತಂದೆ ತಾಯಿ ಕೇರಳದಲ್ಲೇ ಈತನ ಅಂತ್ಯಕ್ರಿಯೆ ಮಾಡಬೇಕೆಂದು ನಿಶ್ಚಯಿಸಿದರು. ಆದರೆ ಕೊರೋನಾ ವೈರಸ್‌ ಕಾರಣ ಭಾರತ ನಾಗರಿಕ ವಿಮಾನ ಸಂಚಾರಕ್ಕೆ ನಿಷೇಧ ಹೇರಿರುವ ಕಾರಣ ಸರ್ಕಾರದ ವಿಶೇಷ ಅನುಮತಿ ಪಡೆದು ಕಳೇಬರವನ್ನು ಭಾರತಕ್ಕೆ ಸರಕು ವಿಮಾದಲ್ಲಿ ಕಳಿಸಲಾಯಿತು.

ಇಷ್ಟೆಲ್ಲ ಸಾಧ್ಯವಾದರೂ ಜುಯೆಲ್‌ನ ತಂದೆ ತಾಯಿಗೆ ವಿಮಾನದಲ್ಲಿ ತೆರಳಲು ಅನುಮತಿ ಸಿಗಲಿಲ್ಲ. ಹೀಗಾಗಿ ಫೇಸ್‌ಬುಕ್‌ ಮೂಲಕವೇ ಮಗನ ಅಂತ್ಯಕ್ರಿಯೆಯನ್ನು ದುಬೈನಲ್ಲೇ ನೋಡಿ ತಂದೆ ತಾಯಿ ಅಂತಿಮ ವಿದಾಯ ಹೇಳಿದ್ದಾರೆ.