ಸಿಂಗಾಪುರದ 9ನೇ ಅಧ್ಯಕ್ಷರಾಗಿ ನೇಮಕವಾದ ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಸಿಂಗಾಪುರದ 9ನೇ ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ನವದೆಹಲಿ (ಸೆ.14): ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಅವರು ಸಿಂಗಾಪುರದ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಶೇಕಡಾ 70.4ಕ್ಕಿಂತ ಅಧಿಕ ಮತಗಳನ್ನು ಗಳಿಸಿದ್ದಾರೆ. ಗುರುವಾರ ಅವರು ಸಿಂಗಾಪುರದ 9ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದರೊಂದಿಗೆ ಮುಂದಿನ ಆರು ವರ್ಷಗಳ ಕಾಲ ಜಗತ್ತಿನ ಶ್ರೀಮಂತ ನಗರ ರಾಜ್ಯವನ್ನು ಮುನ್ನಡೆಸಲಿರುವ ಭಾರತೀಯ ಮೂಲದ ಮೂರನೇ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಶ್ರೀಮಂತ ನಗರ-ರಾಜ್ಯವನ್ನು ಮುನ್ನಡೆಸುವ ಮೂರನೇ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ. ಹಾಲಿ ಅಧ್ಯಕ್ಷ ಹಲಿಮಾ ಯಾಕೋಬ್ ಅವರ ಆರು ವರ್ಷಗಳ ಅವಧಿ ಸೆಪ್ಟೆಂಬರ್ 13 ರಂದು ಕೊನೆಗೊಳ್ಳುವುದರೊಂದಿಗೆ ಷಣ್ಮುಗರತ್ನಂ ಅವರು ದೇಶದ ಒಂಬತ್ತನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನವಾಗಿ ಸಿಂಗಾಪುರದ ಚೀನೀ ಸಮಾಜವು ಷಣ್ಮುಗರತ್ನಂ ಅವರನ್ನು ಅಗಾಧವಾಗಿ ಬೆಂಬಲಿಸಿದೆ. ತಮ್ಮ ಜೀವಮಾನಪೂರ್ತಿ ಅವರು ಸಿಂಗಾಪುರದ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗುವ ಮೊದಲು, ಅವರು ಮೇ 2011 ರಿಂದ ಮೇ 2019 ರವರೆಗೆ ಹಿರಿಯ ಸಚಿವರು ಮತ್ತು ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ವಿಶ್ವ ಆರ್ಥಿಕ ವೇದಿಕೆಯ ಟ್ರಸ್ಟಿಗಳ ಮಂಡಳಿಯ ಸದಸ್ಯರೂ ಆಗಿದ್ದಾರೆ. ಸೆಪ್ಟೆಂಬರ್ 1 ರಂದು ನಡೆದ ಚುನಾವಣೆಯಲ್ಲಿ 2.48 ಮಿಲಿಯನ್ ಮತಗಳಲ್ಲಿ 66 ವರ್ಷದ ಷಣ್ಮುಗರತ್ನಂ ಶೇ. 70.4ರಷ್ಟು ಮತಗಳನ್ನು ಪಡೆದಿದ್ದರು.
ತಮಿಳು ಮೂಲದ ಥರ್ಮನ್ ಷಣ್ಮುಗರತ್ನಂ ಕಳೆದ 50 ವರ್ಷಗಳಿಂದ ಸಂಪನ್ಮೂಲಗಳ ಕೊರತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕಿರುವ ಸಿಂಗಾಪುರದ ಅಭಿವೃದ್ಧಿಯ ಹಂತಗಳಿಗೆ ಸಾಕ್ಷಿಯಾಗಿದ್ದಾರೆ.
ಭಾರತೀಯ ಮೂಲದ ವ್ಯಕ್ತಿಗಳಾದ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗಿದ್ದರೆ, ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆ ಎನಿಸಿಕೊಂಡಿದ್ದಾರೆ. ಅವರ ಸಾಲಿಗೆ ಈಗ ಥರ್ಮನ್ ಷಣ್ಮುಗರತ್ನಂ ಕೂಡ ಸೇರಿಕೊಂಡಿದ್ದಾರೆ.
ಥರ್ಮನ್ ಷಣ್ಮುಗರತ್ನಂ ಅವರ ಮೂಲ ತಮಿಳುನಾಡು. ಅವರ ಪೂರ್ವಜರು ತಮಿಳುನಾಡಿನಿಂದ ಸಿಂಗಾಪುರಕ್ಕೆ ವಲಸೆ ಹೋಗಿದ್ದರು. ಸಿಂಗಾಪುರದ ಒಟ್ಟಾರೆ ವೋಟರ್‌ಗಳ ಪೈಕಿ ಶೇ. 9ರಷ್ಟು ಭಾರತೀಯ ಮೂಲದವರಿದ್ದಾರೆ. ಮೂರು ಮಕ್ಕಳಲ್ಲಿ ಒಬ್ಬರಾದ ಥರ್ಮನ್ ಅವರು ಸಿಂಗಾಪುರ್ ಕ್ಯಾನ್ಸರ್ ರಿಜಿಸ್ಟ್ರಿಯನ್ನು ಸ್ಥಾಪಿಸಿದ ಮತ್ತು ಕ್ಯಾನ್ಸರ್ ಸಂಶೋಧನೆ ಮತ್ತು ರೋಗಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಮುನ್ನಡೆಸುವ "ಸಿಂಗಾಪೂರ್‌ನಲ್ಲಿ ರೋಗಶಾಸ್ತ್ರದ ಪಿತಾಮಹ" ಎಂದು ಕರೆಯಲ್ಪಡುವ ವೈದ್ಯಕೀಯ ವಿಜ್ಞಾನಿ ಎಮೆರಿಟಸ್ ಪ್ರೊಫೆಸರ್ ಕೆ. ಷಣ್ಮುಗರತ್ನಂ ಅವರ ಮಗ.
ಚೈನೀಸ್-ಜಪಾನೀಸ್ ಮೂಲದವರಾದ ವಕೀಲೆ ಜೇನ್ ಯುಮಿಕೊ ಇಟ್ಟೋಗಿ, ಥರ್ಮನ್ ಷಣ್ಮುಗರತ್ನಂ ಅವರ ಪತ್ನಿ. ಅವರು ಸಿಂಗಾಪುರದಲ್ಲಿ ಸಾಮಾಜಿಕ ಉದ್ಯಮ ಮತ್ತು ಲಾಭರಹಿತ ಕಲಾ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದಂಪತಿಗೆ ಒಬ್ಬ ಪುತ್ರಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ.
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಸಿಂಗಾಪುರದ 7 ಉಪಗ್ರಹ ಉಡಾವಣೆ ಮಾಡಿದ ಇಸ್ರೋ!
ಥರ್ಮನ್ ಅವರು ಆಂಗ್ಲೋ-ಚೈನೀಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ. ಎಲ್‌ಎಸ್‌ಇ 2011 ರಲ್ಲಿ ಇವರಿಗೆ ಗೌರವ ಫೆಲೋಶಿಪ್ ಕೂಡ ನೀಡಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವುಲ್ಫ್ಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ ಇವರು, ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಪೂರ್ಣ ಮಾಡಿದ್ದಾರೆ. ನಂತರ, ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ವಿದ್ಯಾರ್ಥಿಯಾದರು, ಅಲ್ಲಿ ಅವರು ಮಾಸ್ಟರ್ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (MPA) ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಲೂಸಿಯಸ್ N. ಲಿಟ್ಟೌರ್ ಫೆಲೋಸ್ ಪ್ರಶಸ್ತಿಯನ್ನು (ಶೈಕ್ಷಣಿಕ ಶ್ರೇಷ್ಠತೆ ಮತ್ತು ನಾಯಕತ್ವವನ್ನು ಪ್ರದರ್ಶಿಸುವ MPA ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ) ಪಡೆದುಕೊಂಡರು.
ಡ್ರಗ್ಸ್ ಸಾಗಾಟ, ಕಳೆದ 20 ವರ್ಷದಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಗಲ್ಲಿಗೇರಿಸಲಿರುವ ಸಿಂಗಾಪುರ
ಥರ್ಮನ್ ಅವರು ವೃತ್ತಿಯಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದಾರೆ ಮತ್ತು ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಸೇವಾ ಪಾತ್ರಗಳಲ್ಲಿ ತಮ್ಮ ಕೆಲಸದ ಜೀವನವನ್ನು ಕಳೆದಿದ್ದಾರೆ. ಅವರು ವಿವಿಧ ಉನ್ನತ ಮಟ್ಟದ ಅಂತರರಾಷ್ಟ್ರೀಯ ಮಂಡಳಿಗಳು ಮತ್ತು ಪ್ಯಾನೆಲ್‌ಗಳನ್ನು ಸಹ ಮುನ್ನಡೆಸಿದ್ದಾರೆ. ಅವರು 2011 ಮತ್ತು 2023 ರ ನಡುವೆ ಕೇಂದ್ರ ಬ್ಯಾಂಕ್, ಸಿಂಗಾಪುರದ ಹಣಕಾಸು ಪ್ರಾಧಿಕಾರದ ಅಧ್ಯಕ್ಷರಾಗಿದ್ದರು ಮತ್ತು 2019 ಮತ್ತು 2023 ರ ನಡುವೆ ಸಿಂಗಾಪುರ್ ಹೂಡಿಕೆ ನಿಗಮದ (ಜಿಐಸಿ) ಉಪಾಧ್ಯಕ್ಷರಾಗಿದ್ದರು.