Asianet Suvarna News Asianet Suvarna News

ಡ್ರಗ್ಸ್‌ ಸಾಗಾಟ, ಕಳೆದ 20 ವರ್ಷದಲ್ಲಿ ಮೊದಲ ಬಾರಿಗೆ ಮಹಿಳೆಯನ್ನು ಗಲ್ಲಿಗೇರಿಸಲಿರುವ ಸಿಂಗಾಪುರ

ವಿಚಾರಣೆಯ ವೇಳೆ ರಂಜಾನ್‌ ಉಪವಾಸದ ಸಮಯದಲ್ಲಿ ವೈಯಕ್ತಿಕ ಬಳಕೆಗಾಗಿ ಹೆರಾಯಿನ್‌ ಸಂಗ್ರಹ ಮಾಡಿಟ್ಟುಕೊಂಡಿದ್ದೆ ಎಂದು ಸರಿದೇವಿ ಹೇಳಿದ್ದರು. ಅದರೊಂದಿಗೆ ಹೆರಾಯಿನ್ ಮತ್ತು ಮೆಥಾಂಫೆಟಮೈನ್‌ನಂತಹ ಮಾದಕ ದ್ರವ್ಯಗಳನ್ನು ಮಾರಾಟ ಮಾಡಿದನ್ನು ಕೂಡ ಆಕೆ ನಿರಾಕರಿಸಿರಲಿಲ್ಲ.
 

Report says  Singapore To Execute Woman For Drug Trafficking First Time In 20 Years san
Author
First Published Jul 27, 2023, 6:52 PM IST

ಸಿಂಗಾಪುರ (ಜು.27): ಇಡೀ ವಿಶ್ವದಲ್ಲಿ ಅಕ್ರಮ ಡ್ರಗ್ಸ್‌ ವಿಚಾರವಾಗಿ ಸಿಂಗಾಪುರದಲ್ಲಿ ಇದ್ದಷ್ಟು ಕಠಿಣ ಕಾನೂನು ಬೇರೆ ಯಾವ ದೇಶದಲ್ಲೂ ಇಲ್ಲ. 15 ಗ್ರಾಮ್‌ಗಿಂತ ಹೆಚ್ಚಿನ ಡ್ರಗ್ಸ್‌ಅನ್ನು ಅಕ್ರಮವಾಗಿ ತೆಗೆದುಕೊಂಡು ಹೋದರೂ ಅಲ್ಲಿ ಗಲ್ಲುಶಿಕ್ಷೆಯೇ ಗತಿ. ಇದರ ನಡುವೆ  ಮಾದಕವಸ್ತು ಕಳ್ಳಸಾಗಣೆ ಆರೋಪದ ಮೇಲೆ ಸಿಂಗಾಪುರವು ಕಳೆದ 20 ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಈ ತಿಂಗಳು ಗಲ್ಲಿಗೇರಿಸಲು ಸಜ್ಜಾಗಿದೆ. ಸಮಾಜವನ್ನು ರಕ್ಷಿಸಲು ಇಂಥ ಕಠಿಣ ಕಾನೂನು ಅಗತ್ಯ ಎಂದು ಹೇಳುವ ಸಿಂಗಾಪುರ ಇದಕ್ಕಾಗಿ ಸ್ಥಳೀಯ ಜನರಿಂದಲೂ ದೊಡ್ಡ ಮಟ್ಟದ ಬೆಂಬಲವನ್ನು ಪಡೆದುಕೊಂಡಿದೆ. ಸರಿದೇವಿ ಜಮಾನಿ ಅವರ ಗಲ್ಲು ಶಿಕ್ಷೆ ಪ್ರಕರಣ 2022ರ ಮಾರ್ಚ್ 15ರ ಬಳಿಕ ಸಿಂಗಾಪುರದಲ್ಲಿ 15ನೇ ಗಲ್ಲು ಶಿಕ್ಷೆಯಾಗಿದೆ. 2018ರಲ್ಲಿ ಕೇವಲ 30 ಗ್ರಾಮ್‌ ಹೆರಾಯಿನ್‌ ಕಳ್ಳಸಾಗನೆ ಮಾಡಿದ್ದ ಕಾರಣಕ್ಕೆ ಸರಿದೇವಿ ಜಮಾನಿ ಬಂಧಿತರಾಗಿ ವಿಚಾರಣೆಗೆ ಒಳಪಟ್ಟಿದ್ದರು ಎಂದು ಬಿಬಿಸಿ ವರದಿ ಮಾಡಿದೆ.  ಸಿಂಗಾಪುರದ ಕಾನೂನಿನ ಪ್ರಕಾರ, 15 ಗ್ರಾಂಗಿಂತ ಹೆಚ್ಚು ಹೆರಾಯಿನ್ ಮತ್ತು 500 ಗ್ರಾಂ ಗಾಂಜಾ ಸಾಗಣೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ವಿಚಾರಣೆಯ ಸಮಯದಲ್ಲಿ, ರಂಜಾನ್‌ ಉಪವಾಸದ ತಿಂಗಳಲ್ಲಿ ವೈಯಕ್ತಿಕ ಬಳಕೆಗಾಗಿ ಹೆರಾಯಿನ್ ಅನ್ನು ಸಂಗ್ರಹಿಸುತ್ತಿದ್ದೆ ಎಂದು ಎಂದು ಸರಿದೇವಿ ಸಾಕ್ಷ್ಯ ಹೇಳಿದ್ದರು. ತನ್ನ ಫ್ಲಾಟ್‌ನಿಂದ ಹೆರಾಯಿನ್ ಮತ್ತು ಮೆಥಾಂಫೆಟಮೈನ್‌ನಂತಹ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿರುವುದನ್ನೂ ಆಕೆ ನಿರಾಕರಣೆ ಮಾಡಿರಲಿಲ್ಲ. ಆದರೆ ಆ ಚಟುವಟಿಕೆಗಳ ಪ್ರಮಾಣವನ್ನು ಭಾರೀ ಕಡಿಮೆ ಇತ್ತು ಎಂದು ನ್ಯಾಯಾಧೀಶ ಸೀ ಕೀ ಊನ್ ಎದುರು ಹೇಳಿದ್ದರು.

ಸಿಂಗಾಪುರ ಮೂಲದ ಮಾನವ ಹಕ್ಕುಗಳ ಗುಂಪಿನ ಟ್ರಾನ್ಸ್‌ಫಾರ್ಮೇಟಿವ್ ಜಸ್ಟೀಸ್ ಕಲೆಕ್ಟಿವ್ ಪ್ರಕಾರ, ಸಿಂಗಾಪುರದಲ್ಲಿ ಮರಣದಂಡನೆಗೆ ಗುರಿಯಾಗಿರುವ ಇಬ್ಬರು ಮಹಿಳೆಯರಲ್ಲಿ ಸರಿದೇವಿ ಒಬ್ಬರು. 2004 ರಲ್ಲಿ ಕೇಶ ವಿನ್ಯಾಸಕಿ ಯೆನ್ ಮೇ ವೋನ್ ಅವರನ್ನು ಮಾದಕವಸ್ತು ಕಳ್ಳಸಾಗಣೆಗಾಗಿ ಗಲ್ಲಿಗೇರಿಸಿದ ನಂತರ, ನಂತರ ಮೊದಲ ಬಾರಿಗೆ ಮರಣದಂಡನೆಗೆ ಒಳಗಾದ ಮೊದಲ ಮಹಿಳೆ ಸರಿದೇವಿ ಆಗಿದ್ದಾರೆ. ಬ್ರಿಟೀಷ್ ಬಿಲಿಯನೇರ್ ಸರ್ ರಿಚರ್ಡ್ ಬ್ರಾನ್ಸನ್ ಸಿಂಗಾಪುರದ ಮರಣದಂಡನೆ ಕಾನೂನಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧ ನಿಯಂತ್ರಿಸಲು ಮರಣದಂಡನೆ ಒಂದೇ ಪರಿಹಾರವಲ್ಲ ಎಂದಿದ್ದಾರೆ.

ಒಂದೇ ಒಂದು ಕೆಜಿ ಡ್ರಗ್ಸ್‌ : ವ್ಯಕ್ತಿಯ ಗಲ್ಲಿಗೇರಿಸಿಯೇ ಬಿಟ್ಟ ಸಿಂಗಾಪುರ ಸರ್ಕಾರ

"ಸಣ್ಣ-ಪ್ರಮಾಣದ ಮಾದಕವಸ್ತು ಕಳ್ಳಸಾಗಣೆದಾರರಿಗೆ ಸಹಾಯದ ಅಗತ್ಯವಿದೆ, ಏಕೆಂದರೆ ಹೆಚ್ಚಿನವರು ಅವರ ಜೀವನ ಪರಿಸ್ಥಿತಿಗಳ ಕಾರಣಕ್ಕಾಗಿ ಈ ರೀತಿ ಮಾಡಿರುತ್ತಾರೆ' ಎಂದು ಬ್ರಾನ್ಸನರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಸರಿದೇವಿ ಜಮಾನಿ ಅವರ ಗಲ್ಲು ಶಿಕ್ಷೆಯನ್ನು ತಡೆಯಲು ಇನ್ನೂ ತಡವಾಗಿಲ್ಲ ಎಂದೂ ಹೇಳಿದ್ದಾರೆ. ಅಧಿಕಾರಿಗಳು ಸಿಂಗಾಪುರದ ಡ್ರಗ್ ವಿರೋಧಿ ಕಾನೂನುಗಳನ್ನು ಪ್ರತಿಪಾದಿಸಿದರೆ, ಮರಣದಂಡನೆ ವಿರೋಧಿ ಕಾರ್ಯಕರ್ತರು ಅದನ್ನು ನಿರಾಕರಿಸಿದ್ದಾರೆ.

3 ತಿಂಗಳಲ್ಲಿ ಭಾರತೀಯ ಮೂಲದ 2ನೇ ಡ್ರಗ್ ಪೆಡ್ಲರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಸಿಂಗಾಪುರ!

"ಮರಣದಂಡನೆಯು ಡ್ರಗ್ಸ್‌ ಕಳ್ಳಸಾಗಣೆ ಮೇಲೆ ನಿಯಂತ್ರಣದ ಪರಿಣಾಮವನ್ನು ಹೊಂದಿದೆ ಅಥವಾ ಇದು ಔಷಧಿಗಳ ಬಳಕೆ ಮತ್ತು ಲಭ್ಯತೆಯ ಮೇಲೆ ಯಾವುದೇ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಚಿಯಾರಾ ಸಂಜಿಯೋರ್ಜಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮರಣದಂಡನೆಗಳು ಕಳುಹಿಸುವ ಏಕೈಕ ಸಂದೇಶವೆಂದರೆ ಸಿಂಗಾಪುರದ ಸರ್ಕಾರವು ಮತ್ತೊಮ್ಮೆ ಮರಣದಂಡನೆಯ ಬಳಕೆಯ ಮೇಲಿನ ಅಂತರಾಷ್ಟ್ರೀಯ ಸುರಕ್ಷತೆಗಳನ್ನು ನಿರಾಕರಿಸಲು ಸಿದ್ಧವಾಗಿದೆ ಎನ್ನುವುದಷ್ಟೇ ಎಂದು ಎನ್‌ಜಿಓ ಹೇಳಿದೆ.

 

Follow Us:
Download App:
  • android
  • ios