ಭಾರತೀಯ ನೌಕಾದಳ ಆ್ಯಂಟಿ ಶಿಪ್ ಮಿಸೈಲ್ ಲಾಂಚ್ ಮಾಡಿದೆ.  ಮಿಸೈಲ್ ಕರ್ವೆಟ್ ಐಎನ್‌ಎಸ್ ಪ್ರಬಲ್ ಮೂಲಕ ಕ್ಷಿಪಣಿ ಲಾಂಚ್ ಮಾಡಲಾಗಿದೆ. ಗರಿಷ್ಠ ರೇಂಜ್ ಇರುವ ಈ ಮಿಸೈಲ್ ಶತ್ರು ಹಡಗನ್ನು ಹೊಡೆದು ಮುಳುಗಿಸುವ ಸಾಮರ್ಥ್ಯ ಹೊಂದಿದೆ.

ಇಂಡಿಯನ್ ನೇವಿ ವಕ್ತಾರ ಟ್ವಿಟರ್ ಎಕೌಂಟ್‌ನಿಂದ ಮಿಸೈಲ್ ಲಾಂಚಿಂಗ್ ವಿಡಿಯೋ ಪೋಸ್ಟ್ ಮಾಡಲಾಗಿದೆ. ಹಳೆಯ ಶಿಪ್ ಇಟ್ಟು ಅರೆಬಿಯನ್ ಸಮುದ್ರದಲ್ಲಿ ಮಿಸೈಲ್ ಲಾಂಚ್ ಮಾಡಲಾಗಿದ್ದು, ಅತ್ಯಂತ ನಿಖರವಾಗಿ ಗುರಿ ತಲುಪಿದೆ ಮಿಸೈಲ್.

ನಾಗ್ ಮಿಸೈಲ್ ಪರೀಕ್ಷೆ ಯಶಸ್ವಿ : ಇಲ್ಲಿವೆ ಫೋಟೋಸ್

ಏತನ್ಮಧ್ಯೆ, ಸೇನಾ ಮುಖ್ಯಸ್ಥ ಜನರಲ್ ಎಂ. ಎಂ.ಪ್ರಾಜೆಕ್ಟ್ 28 (ಕಮೋರ್ಟಾ ವರ್ಗ) ಅಡಿಯಲ್ಲಿ ದೇಶೀಯ ನಿರ್ಮಿತ 4 ASW ಸ್ಟೆಲ್ತ್ ಕಾರ್ವೆಟ್ಗಳಲ್ಲಿ ಐಎನ್ಎಸ್ ಕವರಟ್ಟಿ ಕೊನೆಯದಾಗಿದೆ. ಇದನ್ನು ಭಾರತೀಯ ನೌಕಾಪಡೆಯ ಆಂತರಿಕ ವಿಭಾಗದ ನೌಕಾ ವಿನ್ಯಾಸ ನಿರ್ದೇಶನಾಲಯ ವಿನ್ಯಾಸಗೊಳಿಸಿದೆ.

ಎಲ್ಲಾ ಸಮುದ್ರ ಪ್ರಯೋಗಗಳನ್ನು ಹಡಗು ಪೂರ್ಣಗೊಳಿಸಿದ್ದರಿಂದ ಇದನ್ನು ಯುದ್ಧ-ಸಿದ್ಧ ಎಂದು ನೌಕಾಪಡೆಗೆ ಸೇರಿಸಲಾಗಿದೆ. ಐಎನ್ಎಸ್ ಕವರಟ್ಟಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವೇದಕ ಸೂಟ್ ಅನ್ನು ಹೊಂದಿದೆ. ಇದು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.