ನವದೆಹಲಿ(ನ.27): ಭಾರತೀಯ ನೌಕಾಸೇನೆಯ ಮಿಗ್ 29K ತರಬೇತಿ ವಿಮಾನ ಗುರುವಾರದಂದು ಅರಬ್ಬೀ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಪತನಗೊಂಡಿದೆ. ಲಭ್ಯವಾದ ಮಾಹಿತಿ ಅನ್ವಯ ಓರ್ವ ಪೈಲಟ್‌ರನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.

ಬಾಹ್ಯಾಕಾಶ ಬಳಿಕ ಬಳಿಕ ಸಮುದ್ರ ಶೋಧಕ್ಕೆ ಭಾರತ ಸಜ್ಜು!

ಭಾರತೀಯ ವಾಯುಸೇನಾ ಅಧಿಕಾರಿಗಳು ಈ ಮಾಹಿತಿಯನ್ನು ಶುಕ್ರವಾರ ದೃಢಪಡಿಸಿದ್ದು, ಗುರುವಾರ ಸಂಜೆ 5 ಗಂಟೆಗೆ ಈ ದುರಂತ ಸಂಭವಿಸಿರುವುದಾಗಿ ತಿಳಿಸಿದ್ದಾರೆ.

ವಿಮಾನ ಹಾರಾಟ ನಡೆಸುತ್ತಿದ್ದ ಓರ್ವ ಪೈಲಟ್‌ನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ