Asianet Suvarna News Asianet Suvarna News

ಭಾರತೀಯ ಸಮುದ್ರ ಗಡಿ ಪ್ರವೇಶಿಸಿದ್ದ ಚೀನಿ ಹಡಗು ಓಡಿಸಿದ ನೌಕಾಸೇನೆ!

ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೀನಾದ ಹಡಗು| ಪೋರ್ಟ್ ಬ್ಲೇರ್ ಬಳಿ ಸಮುದ್ರದಲ್ಲಿ ನೌಕಾಸೇನೆ ಕಾರ್ಯಾಚರಣೆ| ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಚೀನಾದ ಸಂಶೋಧನಾ ಹಡಗು| ಶಿ-ಯಾನ್1 ಹಡಗನ್ನು ಮರಳಿ ಚೀನಿ ಸಮುದ್ರ ಗಡಿ ಸೇರುವಂತೆ ಮಾಡಿದ ನೌಕಾಪಡೆ| ಭಾರತದ  ಚಟುವಟಿಕೆಗಳ ಮೇಲೆ ನಿಗಾ ಇಡಲು ಶಿ-ಯಾನ್1 ಹಡಗು ಬಳಕೆ|

Indian Navy drives away Chinese Vessel From Indian Water Border
Author
Bengaluru, First Published Dec 3, 2019, 2:43 PM IST

ಪೋರ್ಟ್ ಬ್ಲೇರ್(ಡಿ.03): ಪೋರ್ಟ್ ಬ್ಲೇರ್ ಬಳಿ ಸಮುದ್ರದಲ್ಲಿ ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೀನಾದ ಹಡಗೊಂದನ್ನು ಭಾರತೀಯ ನೌಕಾ ಪಡೆ ಓಡಿಸಿದ ಘಟನೆ ನಡೆದಿದೆ.

ಚೀನಾದ ಸಂಶೋಧನಾ ಹಡಗು ಶಿ- ಯಾನ್ 1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ಭಾರತೀಯ ಸಮುದ್ರ ಗಡಿಯಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿತ್ತು ಎನ್ನಲಾಗಿದೆ.

ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ!

ಶಿ-ಯಾನ್1 ಹಡಗನ್ನು ಕಡಲು ಕಣ್ಗಾವಲು ವಿಮಾನದಿಂದ ಪತ್ತೆ ಹಚ್ಚಿದ ನೌಕಾಸೇನೆ, ಅದನ್ನು ಮರಳಿ ಚೀನಿ ಸಮುದ್ರ ಗಡಿ ಸೇರುವಂತೆ ಮಾಡಿದೆ.

ಪಾಕ್‌ನಿಂದ ಸಮುಂದರಿ ಜಿಹಾದ್‌?: ಯಾವುದೇ ದಾಳಿ ಎದುರಿಸಲು ನೌಕಾ ಪಡೆ ಸಜ್ಜು

ಆಗ್ನೇಯ ಏಷ್ಯಾ ವಲಯದಲ್ಲಿ ಕಣ್ಗಾವಲು ಇಟ್ಟಿರುವಂತೆ, ಈ ಭಾಗದಲ್ಲೂ ಭಾರತದ  ಚಟುವಟಿಕೆಗಳ ಮೇಲೆ ನಿಗಾ ಇಡಲು ಶಿ-ಯಾನ್1 ಹಡಗನ್ನು ಚೀನಾ ಬಳಸುತ್ತಿತ್ತು ಎನ್ನಲಾಗಿದೆ.

Follow Us:
Download App:
  • android
  • ios