Asianet Suvarna News Asianet Suvarna News

ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ!

ಹಿಂದು ಮಹಾಸಾಗರದಲ್ಲಿ 7 ಚೀನಿ ಯುದ್ಧ ನೌಕೆ ಪತ್ತೆ| ಭಾರತದ ಬೇಹುಗಾರಿಕಾ ವಿಮಾನಗಳ ಕಣ್ಣಿಗೆ ಬಿದ್ದ ನೌಕೆಗಳು

Navy Spy Plane Tracking 7 Chinese Warships In Indian Ocean Region
Author
Bangalore, First Published Sep 17, 2019, 9:49 AM IST

ನವದೆಹಲಿ[ಸೆ.17]: 370ನೇ ವಿಧಿ ರದ್ದು ಸಂಬಂಧ ಭಾರತದ ವಿರುದ್ಧ ಪಾಕಿಸ್ತಾನ ಕೆಂಡಕಾರುತ್ತಿರುವಾಗಲೇ, ಅದರ ಮಿತ್ರ ದೇಶವಾಗಿರುವ ಚೀನಾದ 7 ಯುದ್ಧ ನೌಕೆಗಳು ಹಿಂದು ಮಹಾಸಾಗರದಲ್ಲಿ ಕಂಡುಬಂದಿವೆ. ಪಿ-8ಐ ಎಂಬ ಬೇಹುಗಾರಿಕಾ ವಿಮಾನ ಹಾಗೂ ಇನ್ನಿತರೆ ಸರ್ವೇಕ್ಷಣಾ ಸಾಧನಗಳನ್ನು ಬಳಸಿಕೊಂಡು ಭಾರತೀಯ ನೌಕಾ ಪಡೆ ಚೀನಿ ಯುದ್ಧ ನೌಕೆಗಳನ್ನು ಸಮುದ್ರದಲ್ಲಿ ಪತ್ತೆ ಮಾಡಿದೆ.

ಚೀನಾದ ಕ್ಸಿಯಾನ್‌-32 ಎಂಬ ಯುದ್ಧ ನೌಕೆ ದಕ್ಷಿಣ ಹಿಂದು ಮಹಾಸಾಗರ ಮೂಲಕ ಹಾದು ಹೋಗಿ, ಶ್ರೀಲಂಕಾ ಜಲಸೀಮೆಯನ್ನು ಈ ಮಾಸಾರಂಭದಲ್ಲಿ ಪ್ರವೇಶಿಸಿರುವ ದೃಶ್ಯ ಸುದ್ದಿಸಂಸ್ಥೆಯೊಂದಕ್ಕೆ ಲಭ್ಯವಾಗಿದೆ. ಇತರೆ ಯುದ್ಧ ನೌಕೆಗಳ ಬಗ್ಗೆಯೂ ಭಾರತದ ಬೇಹುಗಾರಿಕಾ ವಿಮಾನಗಳು ಕಣ್ಣಿಟ್ಟಿವೆ.

ಯಾವುದೇ ಸಂದರ್ಭದಲ್ಲೂ ಹಿಂದು ಮಹಾಸಾಗರದಲ್ಲಿ ಚೀನಾ 6ರಿಂದ 7 ಯುದ್ಧ ನೌಕೆಗಳು ಇರುವಂತೆ ನೋಡಿಕೊಳ್ಳುತ್ತಿದೆ. ಆ ದೇಶದ ಉದ್ದೇಶ ಹಿಂದು ಮಹಾಸಾಗರ ವಲಯದಲ್ಲಿ ತನ್ನ ಅಧಿಪತ್ಯ ಸ್ಥಾಪಿಸುವುದಾಗಿದೆ ಎಂದು ಹೇಳಲಾಗಿದೆ.

ಸದ್ಯ ಭಾರತದ ಬಳಿ ಒಂದು ಯುದ್ಧ ನೌಕೆ ಮಾತ್ರವೇ ಇದ್ದು, ವಿಕ್ರಮಾದಿತ್ಯ ಈಗಾಗಲೇ ಸೇವೆ ಸಲ್ಲಿಸುತ್ತಿದೆ. ಮತ್ತೊಂದು ಯುದ್ಧ ನೌಕೆ ನಿರ್ಮಾಣ ಹಂತದಲ್ಲಿದೆ. ಮೂರನೆಯ ಯುದ್ಧ ನೌಕೆಯನ್ನು ಹೊಂದಲು ಭಾರತ ಬಯಸುತ್ತಿದೆ. ವರ್ಷದ ಯಾವುದೇ ಸಂದರ್ಭದಲ್ಲಿ ಎರಡು ನೌಕೆಗಳು ಸೇವೆಗೆ ಲಭ್ಯವಿರುವಂತಾಗಬೇಕಾದರೆ ಭಾರತ ಮೂರು ನೌಕೆಗಳನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios