ಸಮುದ್ರ ಸೇತು; ಕುವೈತ್‌ನಿಂದ ಮಂಗಳೂರಿಗೆ ಬಂದಿಳಿದಿದ 100 MT ಆಕ್ಸಿಜನ್

* ಮಂಗಳೂರಿಗೆ  ಬಂದು ಸೇರಿದ ಮತ್ತೆರಡು ಆಕ್ಸಿಜನ್ ಹಡಗುಗಳು
* ಸಮುದ್ರ ಸೇತು  II ಮೂಲಕ ಎರಡು ಭಾರತೀಯ ನೌಕಾ ಹಡಗುಗಳಲ್ಲಿ ಸಾಮಗ್ರಿಗಳು
* 100  ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್  ಬಂದಿದೆ
* ಎರಡೂ ಹಡಗುಗಳು  ಮೇ  6  ರಂದು ಕುವೈತ್ ಬಿಟ್ಟಿದ್ದು ಭಾರತ ತಲುಪಿವೆ

Indian Naval Ships Kochi Tabar arrive at New Mangaluru Port carrying Critical Medical Stores mah

ಮಂಗಳೂರು (ಮೇ 11)   ಬಹರೇನ್ ನಿಂದ ಮಂಗಳೂರು ಬಂದರಿಗೆ ಆಕ್ಸಿಜನ್ ಬಂದಿಳಿದಿದ್ದು ನಮಗೆ ಶಕ್ತಿ ತುಂಬಿತ್ತು.  ತುರ್ತು ವೈದ್ಯಕೀಯ ಉಪಕರಣಗಳನ್ನು ಹೊತ್ತ ಇನ್ನೆರಡು ಹಡಗುಗಳು ಮಂಗಳೂರಿಗೆ ಬಂದಿಳಿದಿವೆ. 

ಸಮುದ್ರ ಸೇತು  II ಮೂಲಕ ಎರಡು ಭಾರತೀಯ ನೌಕಾ ಹಡಗುಗಳಲ್ಲಿ ಸಾಮಗ್ರಿಗಳು ಬಂದಿವೆ. ಕೊಚ್ಚಿ ಮತ್ತು ತಬರ್ ಹಡಗುಗಳು  ಮಂಗಳವಾರ ಮಂಗಳೂರು ತಲುಪಿವೆ.

ಬಹ್ರೇನ್ ನಿಂದ ಬಂದಿಳಿಯಿತು ಉಸಿರು ಉಳಿಸುವ ಆಮ್ಲಜನಕ

100  ಮೆಟ್ರಿಕ್ ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಮತ್ತು 1200 ಆಕ್ಸಿಜನ್ ಸಿಲಿಂಡರ್‌ಗಳನ್ನು ಹೊತ್ತುಕೊಂಡು ಬಂದಿವೆ.  ಎರಡೂ ಹಡಗುಗಳು  ಮೇ  6  ರಂದು ಕುವೈತ್ ಬಿಟ್ಟಿದ್ದು ಭಾರತ ತಲುಪಿವೆ. 

ಭಾರತಕ್ಕೆ ಬಂದ ತಕ್ಷಣ ಎಲ್ಲ ಸಾಮಗ್ರಿ ಮತ್ತು ಆಕ್ಸಿಜನ್ ನ್ನುಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್  ಗೆ ನೀಡಲಾಗಿದೆ.. ಅಲ್ಲಿಂದ ಹಂಚಿಕೆ ಮಾಡಲಾಗುತ್ತದೆ. ಆಮ್ಲಜನಕದ ಅಗತ್ಯ ಎದುರಾದ ಕಾರಣ ಹಡಗು ಮತ್ತು ರೈಲಿನ ಮೂಲಕ ಸರ್ಕಾರಗಳು ತರಿಸಿಕೊಳ್ಳುತ್ತಿವೆ.

Latest Videos
Follow Us:
Download App:
  • android
  • ios