English ಬಿಡಿ ಹಿಂದಿ, ಪ್ರಾದೇಶಿಕ ಭಾಷೆಯ ಮಾಧ್ಯಮಗಳಿಗೆ ಆದ್ಯತೆ ಕೊಡಿ: Amit Shah ಸಮಿತಿ ಶಿಫಾರಸು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ತನ್ನ 11ನೇ ವರದಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಯ ಸಂಸತ್ತಿನ ಸಮಿತಿಯು ಎಲ್ಲಾ ರಾಜ್ಯಗಳಲ್ಲಿ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ.

indian languages mandatory in all institutions amit shah led panel ash

ನವದೆಹಲಿ (ಅಕ್ಟೋಬರ್ 10): ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಹಿಂದಿ ಮತ್ತು ಭಾರತದ ಇತರ ಭಾಗಗಳಲ್ಲಿ ಆಯಾ ಸ್ಥಳೀಯ ಭಾಷೆಯಾಗಿರಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದಾಗಿರಬೇಕು ಎಂದೂ ಶಿಫಾರಸು ಮಾಡಿದೆ. ಕಳೆದ ತಿಂಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ತನ್ನ 11ನೇ ವರದಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಯ ಸಂಸತ್ತಿನ ಸಮಿತಿಯು ಎಲ್ಲಾ ರಾಜ್ಯಗಳಲ್ಲಿ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಿದೆ.

ದೇಶದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಂಸ್ಥೆಗಳಲ್ಲಿ ಹಿಂದಿ ಅಥವಾ ಸ್ಥಳೀಯ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು ಮತ್ತು ಇಂಗ್ಲಿಷ್ ಬಳಕೆಯನ್ನು ಐಚ್ಛಿಕವಾಗಿಸಬೇಕು ಎಂದು ಸಮಿತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಬೋಧನಾ ಮಾಧ್ಯಮವು ಅಧಿಕೃತ ಅಥವಾ ಪ್ರಾದೇಶಿಕ ಭಾಷೆಗಳಾಗಿರಬೇಕು ಎಂದು ಸೂಚಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಸಮಿತಿಯು ಶಿಫಾರಸುಗಳನ್ನು ರೂಪಿಸಿದೆ ಎಂದು ಸಮಿತಿಯ ಉಪಾಧ್ಯಕ್ಷರಾದ ಬಿಜೆಡಿ ನಾಯಕ ಭರ್ತೃಹರಿ ಮಹತಾಬ್ ತಿಳಿಸಿದ್ದಾರೆ.

ಇದನ್ನು ಓದಿ: Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ

‘ಎ’ ವರ್ಗದ ರಾಜ್ಯಗಳಲ್ಲಿ ಹಿಂದಿಗೆ ಗೌರವಾನ್ವಿತ ಸ್ಥಾನ ನೀಡಬೇಕು ಮತ್ತು ಅದನ್ನು ಶೇ 100ರಷ್ಟು ಬಳಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಬೋಧನಾ ಮಾಧ್ಯಮವು ಹಿಂದಿ ಮತ್ತು ಭಾರತದ ಇತರ ಭಾಗಗಳಲ್ಲಿ ಆಯಾ ಸ್ಥಳೀಯ ಭಾಷೆಯಾಗಿರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಕೇವಲ ಶೇ. 20-30 ರಷ್ಟು ಬಳಸಲಾಗುತ್ತಿದೆ. ಆದರೆ ಅದನ್ನು ಶೇ. 100 ರಷ್ಟು ಬಳಸಬೇಕು ಎಂದು ಮಹತಾಬ್ ಹೇಳಿದರು. "ಇಂಗ್ಲಿಷ್ ವಿದೇಶಿ ಭಾಷೆಯಾಗಿದ್ದು, ಈ ವಸಾಹತುಶಾಹಿ ಪದ್ಧತಿಯನ್ನು ನಾವು ತೊಡೆದುಹಾಕಬೇಕು" ಎಂದು ಅವರು ಹೇಳಿದರು.

ಎರಡನೇ ಉಪಸಮಿತಿಯ ಸಂಚಾಲಕರಾಗಿರುವ ಬಿಜೆಪಿ ಸದಸ್ಯೆ ರೀಟಾ ಬಹುಗುಣ ಜೋಶಿ ಕೂಡ ಇದೇ ರೀತಿಅ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲಿಷ್ ಅನ್ಯ ಭಾಷೆಯಾಗಿದೆ ಮತ್ತು ಅದನ್ನು ತೊಡೆದುಹಾಕಲು ನಾವು ಬಯಸುತ್ತೇವೆ ಮತ್ತು ಅದನ್ನು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಿಂದ ಬದಲಾಯಿಸಬೇಕು ಎಂದು ಅವರು ಹೇಳಿದರು. ಪ್ರಾದೇಶಿಕ ಮತ್ತು ಹಿಂದಿ ಭಾಷೆಗಳಲ್ಲಿ ಸಮಾನವಾಗಿ ಶಿಕ್ಷಣವನ್ನು ನೀಡಲು ಒತ್ತು ನೀಡಿರುವ ಹೊಸ ಶಿಕ್ಷಣ ನೀತಿಯ ಪ್ರಕಾರ ಶಿಫಾರಸುಗಳು ಎಂದು ಅವರು ತಿಳಿಸಿದರು. 

ಇದನ್ನೂ ಓದಿ: ಬ್ಯಾಂಕ್‌ಗಳು ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಿಸಬೇಕು: Nirmala Sitharaman

ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ, ಜಾರ್ಖಂಡ್, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 'ಎ' ವರ್ಗದಲ್ಲಿವೆ; ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಚಂಡೀಗಢ, ದಮನ್ ಮತ್ತು ದಿಯು ಹಾಗೂ ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳು 'ಬಿ' ವರ್ಗದಲ್ಲಿವೆ; ಮತ್ತು ಭಾರತದ ಉಳಿದ ಭಾಗವನ್ನು 'C' ಎಂದು ವರ್ಗೀಕರಿಸಲಾಗಿದೆ.

ಸಮಿತಿಯು ತನ್ನ ವರದಿಯಲ್ಲಿ ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಬೇಕು ಎಂದು ಶಿಫಾರಸು ಮಾಡಿದೆ. "ಒಟ್ಟು 193 ದೇಶಗಳು ವಿಶ್ವಸಂಸ್ಥೆಯ ಸದಸ್ಯರಾಗಿದ್ದಾರೆ ಆದರೆ ಎಷ್ಟು ದೇಶಗಳು ವಿದೇಶಿ ಭಾಷೆಗಳನ್ನು ಅಧಿಕೃತ ಭಾಷೆಯಾಗಿ ಬಳಸುತ್ತವೆ ಎಂದು ಮಹತಾಬ್ ಕೇಳಿದರು. ಇಸ್ರೋ ಅಥವಾ ಡಿಆರ್‌ಡಿಒ ಮತ್ತು ಗೃಹ ಸಚಿವಾಲಯದಂತಹ ತಾಂತ್ರಿಕ ಸಂಸ್ಥೆಗಳಲ್ಲಿ ಹಿಂದಿ ಬಳಕೆ ಶೇಕಡಾ 100 ರಷ್ಟಿದೆ ಎಂದು ಬಿಜೆಡಿ ನಾಯಕ ಹೇಳಿದರು.

ಇದನ್ನೂ ಓದಿ: Hindi ರಾಷ್ಟ್ರಭಾಷೆ ಅನ್ನೋದರಲ್ಲಿ ಅನುಮಾನವಿಲ್ಲ: ಡಾ. ವೈ.ಎ.ನಾರಾಯಣಸ್ವಾಮಿ

ಇದು ಸಮಿತಿಯ 11 ನೇ ವರದಿಯಾಗಿದ್ದು, ಐದು ವರ್ಷಗಳಲ್ಲಿ ಒಂದು ವರದಿಯನ್ನು ಸಲ್ಲಿಸುತ್ತದೆ. ಆದರೆ, ಈ ಬಾರಿ ಮೂರು ವರ್ಷದೊಳಗೆ ಸಮಿತಿ ಎರಡು ವರದಿ ಸಲ್ಲಿಸಿದೆ. ಆದರೂ, ವರದಿಯನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದು ಅಧ್ಯಕ್ಷರ ವಿವೇಚನೆಯಾಗಿದೆ.

Latest Videos
Follow Us:
Download App:
  • android
  • ios