Asianet Suvarna News Asianet Suvarna News

ಕೈಯಲ್ಲಿ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಕೂಗುತ್ತಾ ನರ್ಮದಾ ನದಿ ದಾಟಿದ ಯುವಕರು!

ಭಾರತ ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ  ಜಬಲ್‌ಪುರದಲ್ಲಿ ಆಯೋಜಿಸಿದ್ದ ವಿಶಿಷ್ಟ ತಿರಂಗಾ ಯಾತ್ರೆಯಲ್ಲಿ ಈಜುಪಟುಗಳ ನರ್ಮದಾ ನದಿಯ ಪ್ರವಾಹದ ವಿರುದ್ಧ ಕೈಯಲ್ಲಿ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಕೂಗುತ್ತ ನದಿ ದಾಟುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ. 

Indian independence day 2024 tiranga yatra in Jabalpur rav
Author
First Published Aug 14, 2024, 5:48 PM IST | Last Updated Aug 14, 2024, 6:01 PM IST

Tiranga Yatra in Jabalpur: ಭಾರತ ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ  ಜಬಲ್‌ಪುರದಲ್ಲಿ ಆಯೋಜಿಸಿದ್ದ ವಿಶಿಷ್ಟ ತಿರಂಗಾ ಯಾತ್ರೆಯಲ್ಲಿ ಈಜುಪಟುಗಳ ನರ್ಮದಾ ನದಿಯ ಪ್ರವಾಹದ ವಿರುದ್ಧ ಕೈಯಲ್ಲಿ ಧ್ವಜ ಹಿಡಿದು ವಂದೇ ಮಾತರಂ ಘೋಷಣೆ ಕೂಗುತ್ತ ನದಿ ದಾಟುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ. 

ಹೌದು ಇಲ್ಲಿ 2005ರಿಂದಲೂ ಪ್ರತಿವರ್ಷ ತಿರಂಗ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ಪ್ರತಿಬಾರಿಯೂ ಸಾವಿರಾರು ಯುವಕರು ಮಹಿಳೆಯರು ಉತ್ಸಾಹದಿಂದ ಭಾಗಿಯಾಗುತ್ತಾರೆ. ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ನರ್ಮದಾ ನದಿಯನ್ನ ದಾಟುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವವಾಗಿದೆ.  ಅಖಂಡ ಭಾರತದ ಸಂದೇಶ ಸಾರುವುದು ಈ ಯಾತ್ರೆಯ ಉದ್ದೇಶವಾಗಿದೆ.

ತಾನೇ ಉಗ್ರರ ಗುಂಡೇಟಿಗೆ ಬಲಿಯಾಗಿ ಭಕ್ತರ ಕಾಪಾಡಿದ ಬಸ್ ಚಾಲಕನಿಗೆ ತಿರಂಗ ಗೌರವ ನಮನ!

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಜಬಲ್‌ಪುರದಲ್ಲಿ ಆಯೋಜಿಸಿದ್ದ ವಿಶಿಷ್ಟವಾದ ತಿರಂಗ ಯಾತ್ರೆಯಲ್ಲಿ ಯುವಕರು ಕೈಯಲ್ಲಿ ಧ್ವಜ ಹಿಡಿದು ನರ್ಮದಾ ನದಿಯನ್ನ ದಾಟಿದ್ದಾರೆ.  ನಾಳೆ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಆಯೋಜನೆಗೊಂಡಿದ್ದ ತಿರಂಗ ಯಾತ್ರೆ. ಜಬಲ್‌ಪುರದ ಜಿಲ್ಹಾರಿ ಘಾಟ್‌ನಿಂದ ಆರಂಭವಾದ ಈ ಪಯಣ ತಿಲ್ವಾರಾ ಘಾಟ್‌ವರೆಗೂ ಸಾಗಿದ್ದು, ಉಕ್ಕಿ ಹರಿಯುವ ನರ್ಮದಾ ನದಿಯ ಪ್ರವಾಹದ ಯುವಕರು ತ್ರಿವರ್ಣ ಧ್ವಜವನ್ನು ಹಿಡಿದು ಈಜುತ್ತಲೇ ಪ್ರಯಾಣ ಮುಗಿಸಿದ್ದಾರೆ.  ಈಜುಪಟುಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಘೋಷಣೆಯನ್ನು ಕೂಗುತ್ತಾ ಈಜಿದ್ದಾರೆ.  ಈ ಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು ಕೂಡ ಕಾಣಸಿಗುತ್ತಾರೆ.  ಆಗಸ್ಟ್ 14 ರಂದು ಈ ಪ್ರವಾಸವನ್ನು ಕೈಗೊಳ್ಳುವ ಮುಖ್ಯ ಉದ್ದೇಶ ಅಖಂಡ ಭಾರತದ ಸಂದೇಶವನ್ನು ತಿಳಿಸುವುದಾಗಿದೆ.

ಬರ್ಗಿ ಅಣೆಕಟ್ಟಿನ ಗೇಟ್ ತೆರೆದ ನಂತರ ನರ್ಮದಾ ನದಿ ಉಕ್ಕಿ ಹರಿಯುತ್ತಿದೆ ಆದರೂ ಪ್ರತಿ ವರ್ಷದಂತೆ ಈ ಬಾರಿಯು ತಿರಂಗ ಯಾತ್ರೆಯಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಜನರ ಉತ್ಸಾಹ ಕಡಿಮೆಯಾಗಿಲ್ಲ. ಒಬ್ಬಿಬ್ಬರಲ್ಲ, ನೂರಾರು ಈಜುಗಾರರು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ನರ್ಮದಾ ನದಿಯ ಪ್ರವಾಹದ ವಿರುದ್ಧ ಈಜಾಡು ಗುರಿಮುಟ್ಟುವುದೆಂದರೆ ಸಾಮಾನ್ಯವಲ್ಲ. ಇಡೀ ನರ್ಮಾದ ನದಿಯಾದ್ಯಂತ ಎಲ್ಲ ವರ್ಗದವರು ಈ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಪ್ರಯಾಣದುದ್ದಕ್ಕೂ ಈಜುಗಾರರ ಉತ್ಸಾಹವನ್ನು ನೋಡಲೆಂದೇ ಸಾವಿರಾರು ಜನರು ಸೇರಿದ್ದರು. ಇಡೀ ನರ್ಮದಾ ನದಿಯುದ್ಧಕ್ಕೂ ವಂದೇ ಮಾತರಂ ಘೋಷಣೆ ಪ್ರತಿಧ್ವನಿಸುತ್ತಿತ್ತು.

ಇನ್ನು ವಿಚಿತ್ರವೆಂದರೆ ಆಗಸ್ಟ್ 14ರಂದು ನಡೆಯುವ ಈ ಯಾತ್ರೆಯಲ್ಲಿ 11 ವರ್ಷದ ಮಕ್ಕಳಿಂದ 71 ವರ್ಷದ ಮುದುಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿದ್ದರು.  ಇಲ್ಲಿ ಎಲ್ಲ ವರ್ಗದವರು ಒಂದಾಗಿ ತಿರಂಗ ಯಾತ್ರೆ ನಡೆಸುವುದು ವಿಶೇಷ. ಪ್ರಯಾಣದುದ್ದಕ್ಕೂ ಈಜುಪಟುಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಈಜಾಡುವುದನ್ನು ನೋಡಲೆಂದೇ ಸಾವಿರಾರು ಜನರು ನೆರೆದಿದ್ದರು. ಈ ತಿರಂಗ ಯಾತ್ರೆ ಮೂಲಕ ದೇಶದ ಸಮಗ್ರತೆ ಭಾವನೆಯನ್ನು ಜಾಗೃತಗೊಳಿಸಬೇಕು ಎಂಬುದಾಗಿದೆ. ಈ ಯಾತ್ರೆಯ ವಿಡಿಯೋ ಕೆಳಗೆ ಕೊಡಲಾಗಿದೆ. ವೀಕ್ಷಿಸಬಹುದು. 

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಾರಿತು ತಿರಂಗ, ಪಾಕ್ ಸೇನೆ ಮೇಲೆ ಸ್ಥಳೀಯರ ದಾಳಿ!

Latest Videos
Follow Us:
Download App:
  • android
  • ios