ಭಾರತೀಯ ಮಹಿಳೆಯರು ತಮ್ಮ ಪಾಕಿಸ್ತಾನಿ ಗೆಳತಿಯ ಮದುವೆಗೆ ಹೋಗಲಾಗದೆ ಆನ್‌ಲೈನ್‌ನಲ್ಲಿ ಮದುವೆಯ ವಿಡಿಯೋ ನೋಡಿ ಕಣ್ತುಂಬಿಕೊಂಡಿದ್ದಾರೆ. ದೇಶಗಳ ನಡುವಿನ ವೈರತ್ವ ಹಾಗೂ ಗಡಿ ಸಮಸ್ಯೆಗಳಿಂದಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲವೆಂದು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತ ಪಾಕಿಸ್ತಾನ ನೆರೆ ರಾಷ್ಟ್ರಗಳಾಗಿದ್ದರೂ ಬದ್ಧ ವೈರಿ ದೇಶಗಳಾಗಿವೆ. ಸುಖಾ ಸುಮ್ಮನೆ, ಸಣ್ಣ ಪುಟ್ಟ ವಿಚಾರಕ್ಕೆ ಯಾರನ್ನೂ ಕೂಡ ಗಡಿ ದಾಟಿ ಹೋಗುವುದಕ್ಕೆ ಬಿಡುವುದಿಲ್ಲ. ಆದರೆ, ಇಲ್ಲಿ ಭಾರತೀಯ ಮಹಿಳೆಯರು ತಮ್ಮ ಪಾಕಿಸ್ತಾನಿ ಗೆಳತಿಯ ಮದುವೆಗೆ ಹೋಗಲಾಗದೇ ಆನ್‌ಲೈನ್‌ನಲ್ಲಿ ಮದುವೆಯ ವಿಡಿಯೋ ನೋಡಿ ಕಣ್ತುಂಬಿಕೊಂಡಿದ್ದಾರೆ. ಈ ವೇಳೆ ದೇಶಗಳ ನಡುವಿನ ವೈರತ್ವ ಹಾಗೂ ಗಡಿ ಸಮಸ್ಯೆಗಳಿಂದಾಗಿ ಮದುವೆಗ ಹಾಜರಾಗಲು ಸಾಧ್ಯವಾಗಲಿಲ್ಲವೆಂದು ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದfಲಿ ಭಾರೀ ವೈರಲ್ ಆಗಿದೆ..

ಸಣ್ಣ ಪುಟ್ಟ ಭಾವನೆಗಳಿಯೂ ಕಟ್ಟು ಬೀಳುವ ಮನುಷ್ಯರನ್ನು ಬೇರ್ಪಡಿಸುವುದರಲ್ಲಿ ಧರ್ಮ ಮತ್ತು ದೇಶದ ಗಡಿಗಳ ಪಾತ್ರ ದೊಡ್ಡದು. ಪ್ರತಿ ಜಾಗದಲ್ಲೂ ಬೇರೆ ಬೇರೆ ರೀತಿಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಒಂದು ಸನ್ನಿವೇಶದ ಭಾವನಾತ್ಮಕ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಗೆಳತಿಯ ಮದುವೆಯನ್ನು ಆನ್‌ಲೈನ್ ಆ್ಯಪ್ ಮೂಲಕ ನೋಡಬೇಕಾದ ಭಾರತೀಯ ಗೆಳೆಯರ ವಿಡಿಯೋ ಅದು. ಆ ಭಾವನಾತ್ಮಕ ಕ್ಷಣದಲ್ಲಿ ಜೊತೆಗಿರಲು ಆಗದ ಕಾರಣ ತುಂಬಾ ಬೇಸರವಾಯ್ತು ಎಂದು ಆ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ದೇಶಗಳು ತಮ್ಮನ್ನು ಗಡಿ ದಾಟಲು ಬಿಡದ ಕಾರಣ ಗೆಳತಿಯ ಮದುವೆಯನ್ನು ಫೇಸ್‌ಟೈಮ್ ಮೂಲಕ ನೋಡುವಂತಾಯಿತು ಎಂದು ವಿಡಿಯೋ ಹಂಚಿಕೊಂಡಿದ್ದಾರೆ. 'ಅವಳು ನನ್ನ ಮನಸ್ಸಿಗೆ ಹಾಗೂ ಸಂಬಂಧದಲ್ಲಿ ತುಂಬಾ ಹತ್ತಿರ, ಆದರೆ ಮದುವೆಯ ವೇಳೆ ತುಂಬಾ ದೂರ' ಎಂದು ವಿಡಿಯೋ ಜೊತೆ ಬರೆದಿದ್ದಾರೆ. 'ಬಜರಂಗಿ ಭಾಯಿಜಾನ್, ನನ್ನನ್ನು ಆಕಾಶದ ಮೂಲಕ ನಕ್ಷತ್ರವಾಗಿ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗ್ತೀರಾ? ನನ್ನ ಹೃದಯ ನನ್ನ ದೇಹದ ಹೊರಗೆ ಹೋಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಭಾರತದ ಹುಡುಗಿಗಾಗಿ ಗಡಿದಾಟಿ ಬಂದ ಪಾಕಿಸ್ತಾನಿ ಪ್ರೇಮಿ; ಯುವತಿ ಮಾಡಿದಳು ಮಹಾ ಎಡವಟ್ಟು!

ಇನ್ನು ನನ್ನ ತಂಗಿ ಮದುವೆಯಾಗಿ ಬೇರೊಬ್ಬರ ಹೆಂಡತಿಯಾಗುವುದನ್ನು ನೋಡುವಾಗ, ಇಷ್ಟು ಹತ್ತಿರವಿದ್ದರೂ ಇಷ್ಟೊಂದು ದೂರ ಇದ್ದೀವಲ್ಲಾ ಎನ್ನುವ ನಿಜ ತಿಳಿದು ತುಂಬಾ ಬೇಸರವಾಯಿತು. ಗಡಿಯಾಚೆ ಅವಳು ಯಾವತ್ತೂ ಕೆಟ್ಟ ಪರಿಣಾಮಗಳನ್ನು ಎದುರಿಸದಿರಲಿ, ಪ್ರೀತಿ ಮತ್ತು ಸಮೃದ್ಧಿಯಿಂದ ಆಕೆಯ ಜೀವನ ತುಂಬಿರಲಿ ಎಂದು ಡ್ಯಾನ್ಸರ್ ಮತ್ತು ಕೋರಿಯೋಗ್ರಾಫರ್ ಅನಮಿಕಾ ಅಹುಜಾ ಹಂಚಿಕೊಂಡ ವಿಡಿಯೋವನ್ನು ಈಗಾಗಲೇ 4.80 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

View post on Instagram

ಇಲ್ಲಿ ಮದುವೆಯಾದ ಯುವತಿ ಗಂಡನ ಮನೆಗೆ ಹೋಗುವಾಗ ಆಕೆಯ ಗೆಳತಿಯರು ವಿಡಿಯೋದಲ್ಲಿ ಚಪ್ಪಾಳೆ ತಟ್ಟಿ ಖುಷಿಯಿಂದ ಕಣ್ಣೀರು ಹಾಕುವುದನ್ನು ನೋಡಬಹುದು. ಈ ವಿಡಿಯೋಗೆ ತುಂಬಾ ಜನ ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ನಮಗೆ ಆಗದೇ ಇರೋದು ನಿಮ್ಮ ತಲೆಮಾರಿಗೆ ಆಗಲಿ ಎಂದು ಒಬ್ಬರು ಬರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಬೇರೆಯಾಗಲು ಕಾರಣವಾದ ವಿಷಯಗಳನ್ನು ನಾನು ದ್ವೇಷಿಸುತ್ತೇನೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಒಂದಾದರೆ ಚೀನಾವನ್ನು ಹಿಂದಿಕ್ಕಿ ಸೂಪರ್ ಪವರ್ ಆಗಬಹುದು ಎಂದು ಮತ್ತೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಿ ಚೆಲುವನ ಕೈ ಹಿಡಿದ ಬಾಲಿವುಡ್ ಸುಂದರಿ; ಮದುವೆ ಫೋಟೋಗಳು ಇಲ್ಲಿವೆ