ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಹತೇಕ ಎಲ್ಲಾ ರಾಷ್ಟ್ರದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಒಟ್ಟು 40 ದಿನದ ಲಾಕ್‌ಡೌನ್‌ನಿಂದ ಭಾರತ 17 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ. ಇದೀಗ ವೈರಸ್ ಹತೋಟಿ ಹಾಗೂ ಆರ್ಥಿಕ ಚೇತರಿಕೆ ಹೇಗೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಉದ್ಯಮಿ ಗೌತಮ್ ಅದಾನಿ ಆಶಾದಾಯಕ ಹೇಳಿಕೆ ನೀಡಿದ್ದಾರೆ.
80 ಸಾವಿರ ಭಾರತೀಯ ನೌಕರರಿಗ ಸ್ಯಾಲರಿ ಹೈಕ್ ಮಾಡಿದ ಫ್ರೆಂಚ್ ಕಂಪನಿ!
ಆರ್ಥಿಕತೆ ಮತ್ತೆ ಸಹಜ ಸ್ಥಿತಿಗೆ ಮರಳು ಸಮಯ ತೆಗೆದುಕೊಳ್ಳಬಹುದು. ಆದರೆ ಖಚಿತವಾಗಿ ಮತ್ತೆ ರಾರಾಜಿಸಲಿದೆ ಎಂದು ಅದಾನಿ ಹೇಳಿದ್ದಾರೆ. ಕೊರೋನಾ ವೈರಸ್‌ನ್ನು ಭಾರತ ಸಮರ್ಥವಾಗಿ ಎದುರಿಸಲಿದೆ. ಇಷ್ಟೇ ಅಲ್ಲ ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಎದುರಾಗುವ ಆರ್ಥಿಕತ ಸವಾಲನ್ನು ಭಾರತ ಅಷ್ಟೇ ನಾಜೂಕಾಗಿ ಎದುರಿಸುತ್ತಿದೆ ಎಂದಿದ್ದಾರೆ.
ಸದ್ಯ ನೆಲಕಚ್ಚಿರುವ ಭಾರತದ ಆರ್ಥಿಕತೆ 2020-21ರಲ್ಲಿ 1.9 % ಏರಿಕೆಯಾಗಲಿದೆ ಎಂದು IMF(ಇಂಟರ್‌ನ್ಯಾಶಲ್ ಮೊನಿಟೆರಿ ಫಂಡ್) ಹೇಳಿದೆ. ವಿಶ್ವಬ್ಯಾಂಕ್ ಭಾರತದ ಆರ್ಥಿಕತೆಯನ್ನು1.5 ಯಿಂದ 2.8 % ರಷ್ಟಿರಲಿದೆ ಎಂದಿದೆ. ಇನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಕ್ ಭಾರತದ ಆರ್ಥಿಕತೆಯನ್ನು 4 % ರಷ್ಟಿರಲಿದೆ ಎಂದು ವಿಶ್ಲೇಷಿಸಿದೆ.
