Asianet Suvarna News Asianet Suvarna News

ಕಾಶ್ಮೀರ to ಕನ್ಯಾಕುಮಾರಿ; ಭಾರತೀಯ ಸೇನೆಯಿಂದ ಕೊರೋನಾ ವಾರಿಯರ್ಸ್ ಮೇಲೆ ಹೂಮಳೆ!

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ ಗೌರವಿಸಲು ಭಾರತೀಯ ಸೇನೆ ಮುಂದಾಗಿದೆ. ಮೂವರು ಸೇನಾ ಅಧಿಕಾರಿಗಳ ಸುದ್ದಿಗೋಷ್ಠಿಯಲ್ಲಿ ಬಿಪಿನ್ ರಾವತ್ ಭಾರತೀಯ ಸೇನೆ ಕೈಗೊಂಡಿರುವ ಕೆಲ ಮಹತ್ವದ ನಿರ್ಧಾರ ಬಹಿರಂಗ ಪಡಿಸಿದ್ದಾರೆ.

Indian army will showering flower petals to corona warriors says chief Bipin rawat
Author
Bengaluru, First Published May 1, 2020, 7:25 PM IST

ನವದೆಹಲಿ(ಮೇ.01): ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಕೊರೋನಾ ವಾರಿಯರ್ಸ್ ವಿರುದ್ಧ ಆಸ್ಪತ್ರೆ, ಪೊಲೀಸ್, ಸರ್ಕಾರ ಅವಿರತ ಹೋರಾಟ ಮಾಡುತ್ತಿದೆ. ಇದೀಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕೊರೋನಾ ವಾರಿಯರ್ಸ್ ಕೇಂದ್ರದ ಮೇಲೆ ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಹೂ ಮಳೆ ಸುರಿಸಿ ಗೌರವಿಸಲಲಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. 

ಹೋಂ ಕ್ವಾರೆಂಟೈನ್ ಜವಾಬ್ದಾರಿ ತೆಗೆದುಕೊಳ್ಳಲಿದೆಯಾ ಸೇನೆ..? ..

ಆಯಾ ಸೇನಾ ನೆಲೆಗಳಲ್ಲಿರುವ ಹೆಲಿಕಾಪ್ಟರ್ ಮೂಲಕ ಪ್ರತಿ ಜಿಲ್ಲೆಗಳಲ್ಲಿನ ಕೊರೋನಾ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹಾಗೂ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿಗಳ ಮೇಲೆ  ಭಾರತೀಯ ಸೇನೆ ಆಗಸದಿಂದ ಹೂಮಳೆ ಸುರಿಸಲಿದೆ. ಮೇ.03ರ ಭಾನುವಾರ ಸಂಪೂರ್ಣ ಭಾರತದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹೂಮಳೆ ಸುರಿಸಲಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

 

ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ಸೇನಾ ಕಮಾಂಡ್‌!

ಮೇ 3ರಂದು ಪೊಲೀಸರಿಗೂ ಸೇನೆ ಗೌರವ ಸಲ್ಲಿಸಲಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ. ಭಾರತೀಯ ಸೇನೆಯಲ್ಲಿ 14 ಕೊರೋನಾ ಕೇಸ್ ಪತ್ತೆಯಾಗಿತ್ತು. ಇದರಲ್ಲಿ 5 ಮಂದಿ ಸಂಪೂರ್ಣ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾರತೀಯ ಸೇನೆ ಹಲವು ಮುಂಜಾಗ್ರತ ಕ್ರಮ ಕೈಗೊಂಡಿದೆ. ಇಷ್ಟೇ ಅಲ್ಲ ಕೊರೋನಾ ವೈರಸ್ ಎದುರಿಸಲು ಸಿದ್ದವಾಗಿದೆ ಎಂದು ಆರ್ಮಿ ಜನರಲ್ ಚೀಫ್ ಮನೋಜ್ ಎಂ ನರವಾನೆ ಹೇಳಿದ್ದಾರೆ.

ಭಾರತದಲ್ಲಿ ಒಟ್ಟು 35365 ಕೊರೋನಾ ಕೇಸ್ ಪತ್ತೆಯಾಗಿದೆ. ಇದರಲ್ಲಿ 9064 ಮಂದಿ ಗುಣಮುಖರಾಗಿದ್ದಾರೆ. ಆದರೆ 1152 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1755 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಅಲ್ಲದೆ 77 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
 

Follow Us:
Download App:
  • android
  • ios