ದೆಹಲಿ(ಡಿ.01): ಉಗ್ರರ ದಮನಕ್ಕೆ ಗಡಿಯಾಚೆಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ವಿಶ್ವವನ್ನೇ ಚಕಿತಗೊಳಿಸಿದ ಭಾರತೀಯ ಸೇನೆಯ ಸಾಹಸ ಈಗಾಗಲೇ ಕೇಳಿದ್ದೇವೆ. ಇದೀಗ ಮತ್ತೊಂದು ಸಾಹಸವನ್ನು ಭಾರತೀಯ ಸೇನೆ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರರು ಮಾಡಿದ್ದ ಪ್ಲಾನ್ ಭಾರತೀಯ ಸೇನೆ ಧ್ವಂಸಗೊಳಿಸಿದೆ. 

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ದೀಪಾವಳಿ ಗಿಫ್ಟ್ ನೀಡಿದ ಭಾರತೀಯ ಸೇನೆ!..

ಪಾಕಿಸ್ತಾನ ಗಡಿಯೊಳಗೆ 200 ಮೀಟರ್ ಪ್ರವೇಶಿಸಿದ ಭಾರತೀಯ ಸೇನೆ, ಉಗ್ರರ ಮಾರ್ಗವನ್ನೇ ಬಂದ್ ಮಾಡಿದೆ. ಭಾರತದ ಗಡಿಯೊಳಕ್ಕೆ ನುಸುಳಲು ಉಗ್ರರು ಪಾಕಿಸ್ತಾನ ಗಡಿಯಾಚೆಗಿಂದ ಸಾಂಬಾ ಸೆಕ್ಟರ್ ಬಳಿ ಸುರಂಗ ಮಾರ್ಗ ಕೊರದಿದೆ. ಇದನ್ನು ಗಮನಿಸಿದ ಭಾರತೀಯ ಸೇನೆ, ಸುರಂಗದೊಳಕ್ಕೆ ನುಗ್ಗಿ 200 ಮೀಟರ್ ಪಾಕ್ ಗಡಿಯೊಳಕ್ಕೆ ಪ್ರವೇಶಿಸಿದೆ. 

ಸುರಂಗ ಮಾರ್ಗ ಆರಂಭವಾಗುವ ಸ್ಥಾನಕ್ಕೆ ತೆರಳಿದ ಭಾರತೀಯ ಸೇನೆ, ಸುರಂಗ ಮಾರ್ಗ ಮುಚ್ಚಿದೆ. ಈ ಮೂಲಕ ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಉಗ್ರರ ಕೃತ್ಯಕ್ಕೆ ಭಾರತೀಯ ಸೇನೆ ಬ್ರೇಕ್ ಹಾಕಿದೆ. 

ಇತ್ತೀಚೆಗೆ ಗಡಿಯುದ್ದಕ್ಕೂ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಪಾಕಿಸ್ತಾನ ಪೋಷಿತ ಉಗ್ರರು ಸುರಂಗ ಮಾರ್ಗದ ಮೂಲಕ ಭಾರತದೊಳಕ್ಕೆ ನುಸುಳಲು ಪ್ರಯತ್ನ ನಡೆಸುತ್ತಿದ್ದಾರೆ.