ಶ್ರೀನಗರ(ನ.13): ಜಮ್ಮು ಮತ್ತು ಕಾಶ್ಮೀರದ ಗಡಿಯುದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಶುಕ್ರವಾರ(ನ.13): ಬಾರಾಮುಲ್ಲ ಜಿಲ್ಲೆಯ ಉರಿಯಲ್ಲಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡು ಹಾಗೂ ಶೆಲ್ ದಾಳಿ ನಡೆಸಿತು. ಪರಿಣಾಮ ಇಬ್ಬರು ಭಾರತೀಯ ಸೇನಾ ಯೋಧರು, ಓರ್ವ BSF ಅಧಿಕಾರಿ ಹಾಗೂ ಮೂವರು ನಾಗರೀಕರು ಮೃತಪಟ್ಟಿದ್ದರು. ಶಾಂತವಾಗಿದ್ದ ಭಾರತೀಯ ಸೇನೆಯನ್ನು ಕೆರಳಿಸಿದ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದೆ.

 

ಕಾಶ್ಮೀರ ಎನ್‌ಕೌಂಟರ್‌: 2 ದಿನದಲ್ಲಿ ಐವರು ಉಗ್ರಗಾಮಿಗಳು ಹತ!

ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಈ ದಾಳಿಯಲ್ಲಿ 7 ರಿಂದ 8 ಪಾಕಿಸ್ತಾನ ಯೋಧರು ಮೃತಪಟ್ಟಿರುವುದಾಗಿ ಭಾರತೀಯ ಸೇನೆ ಹೇಳಿದೆ. ಇನ್ನು 10 ರಿಂದ 12 ಪಾಕಿಸ್ತಾನ ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನಾ ಬಂಕರ್, ಸೇನಾ ಪೋಸ್ಟ್‌ಗಳನ್ನು ಗುರಿಯಾಗಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ.

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನೆ!.

ಗುರೆಜ್ ವಲಯದಿಂದ ಜಮ್ಮು ಮತ್ತು ಕಾಶ್ಮೀರದ ಉರಿ ವಲಯದ ವರೆಗೆ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ.  ಪಾಕಿಸ್ತಾನದ ಇಂಧನ ಡಂಪ್‌ಗಳು ಮತ್ತು ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಲಾಗಿದೆ ಎಂದು ಭಾರತೀಯ ಸೇನೆಯ ಮೂಲಗಳು ಹೇಳಿಕೊಂಡಿವೆ.