ಮೋದಿ ಕೈಯಲ್ಲಿ ಅಸ್ಸಾಲ್ಟ್ ರೈಫಲ್: ಸಿಕ್ಕ ಬಲಕ್ಕೆ ಸೈನಿಕರಿಗೆ ಖುಷಿಯಾಗಿದೆ ಫುಲ್!

ಭಾರತೀಯ ಸೇನೆ ಬತ್ತಳಿಕೆ ಸೇರಿದ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್| ಅಮೆರಿಕ ನಿರ್ಮಿತ ವಿಧ್ವಂಸಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್| 15  ವರ್ಷಗಳ ಸೇನೆಯ ಬೇಡಿಕೆ ಈಡೇರಿಸಿದ ಮೋದಿ ಸರ್ಕಾರ| ಮುಂಚೂಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ರೈಫಲ್ ಪೂರೈಕೆ| ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್| ಅಮೆರಿಕದ ಎಸ್​ಐಜಿ ಸೌರ್ ಸಂಸ್ಥೆಯಿಂದ 72,400 ಅಸಾಲ್ಟ್ ರೈಫಲ್ಸ್​ ಖರೀದಿ|

Indian Army Received First Batch American Assault Rifles

ನವದೆಹಲಿ(ಡಿ.15): ಭಾರತೀಯ ಸೇನೆಯ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಅಮೆರಿಕದ ವಿಧ್ವಸಂಕ ಎಸ್ಐಜಿ-716 ಅಸ್ಸಾಲ್ಟ್ ರೈಫಲ್ಸ್ ಸೈನಿಕರ ಕೈ ಸೇರಿದೆ.

ಸುಮಾರು 15 ವರ್ಷಗಳ ಬಳಿಕ ಭಾರತೀಯ ಸೇನೆಗೆ ಅಮೆರಿಕ ನಿರ್ವಿುತ ಹೊಸ ಎಸ್​ಐಜಿ-716 ಅಸಾಲ್ಟ್ ರೈಫಲ್ ಪೂರೈಕೆಯಾಗುತ್ತಿದೆ. ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಈ ರೈಫಲ್​ಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಮುಂಚೂಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ಮೀಸಲಾಗಿಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಎರಡನೇ ಹಂತದ ನೆಲೆಗಳಲ್ಲಿರುವ ಸೈನಿಕರಿಗೆ ರಷ್ಯಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿರುವ ಕಲಾಶ್ನಿಕೋವ್ ರೈಫಲ್​ಗಳನ್ನು ಪೂರೈಸಲಾಗುವುದು ಎಂದು ಸೇನೆ ಹೇಳಿದೆ. 

ಪ್ರಸ್ತುತ ಬಳಕೆಯಲ್ಲಿರುವ 5.56 ಎಂಎಂ ಇನ್ಸಾಸ್ ರೈಫಲ್​ಗಳನ್ನು ಬದಲಿಸಲು ಸೇನೆ 2005ರಲ್ಲಿ ಬೇಡಿಕೆ ಇಟ್ಟಿತ್ತು. 382 ಬೆಟಾಲಿಯನ್​ಗಳಿಗೆ ಅತ್ಯಾಧುನಿಕ ಗನ್​ಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. 

ಚೀನಾ ಗಡಿಯ ಯೋಧರಿಗೆ 73000 ಅಮೆರಿಕನ್‌ ರೈಫಲ್‌

ಈಗ 15 ವರ್ಷಗಳ ಬಳಿಕ ಈ ರೈಫಲ್ಸ್ ಸೇನೆ ಕೈಸೇರುತ್ತಿವೆ. ನಿರ್ಣಾಯಕ ಕಾರ್ಯಾಚರಣೆಗಳ ಅವಶ್ಯಕತೆಗಳಿಗಾಗಿ ಭಾರತ ಅಮೆರಿಕದ ಎಸ್​ಐಜಿ ಸೌರ್ ಸಂಸ್ಥೆಯಿಂದ 72,400 ಅಸಾಲ್ಟ್ ರೈಫಲ್ಸ್​ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. 

ಇದರಲ್ಲಿ 10 ಸಾವಿರ ಎಸ್​ಐಜಿ-716 ರೈಫಲ್ಸ್ ಸೇನೆ ಈಗಾಗಲೇ ಸ್ವೀಕರಿಸಿದೆ. ಬಾಕಿ ರೈಫಲ್ ಗಳು ಕಾಲಾನುಕ್ರಮದಲ್ಲಿ ಹಂತಹಂತವಾಗಿ ಸೈನಿಕರ ಕೈ ಸೇರಲಿವೆ ಎಂದು ಸೇನೆ ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios