ನಿವೃತ್ತ ಸೇನಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಸೇನಾ ಸಿಬ್ಬಂದಿ... ವಿಡಿಯೋ ನೋಡಿ

  • ಲೆಫ್ಟಿನೆಂಟ್ ಜನರಲ್ ಕನ್ವಾಲ್ ಸಿಂಗ್ ಜೀತ್ ಧಿಲ್ಲೋನ್ ನಿವೃತ್ತಿ
  • ಭಾರತೀಯ ಸೇನೆಯಿಂದ ಸುಂದರ ಬೀಳ್ಕೊಡುಗೆ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Indian Army Officers Give Heartwarming Farewell Lt General Kanwal Singh akb

ನವದೆಹಲಿ(ಫೆ.3): ಉದ್ಯೋಗದಲ್ಲಿರುವ ವ್ಯಕ್ತಿಗೆ ನಿವೃತ್ತಿಯು ವ್ಯಕ್ತಿಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಅದನ್ನು ಆಚರಿಸಬೇಕು ಮತ್ತು ಪಾಲಿಸಬೇಕು. ಅಧಿಕಾರಿಯ ನಿವೃತ್ತಿ ಕ್ಷಣದ ಸುಂದರ ವಿಡಿಯೋವೊಂದು ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ತಮ್ಮ ಸಹೋದ್ಯೋಗಿಗೆ ನಿವೃತ್ತಿಯ ಸಂದರ್ಭದಲ್ಲಿ ಅದ್ಭುತವಾದ ವಿದಾಯವನ್ನು ನೀಡುತ್ತಿರುವುದನ್ನು ಕಾಣಬಹುದು. 

ವೀಡಿಯೊದಲ್ಲಿ, ಲೆಫ್ಟಿನೆಂಟ್ ಜನರಲ್ ಕನ್ವಾಲ್ ಸಿಂಗ್ ಜೀತ್ ಧಿಲ್ಲೋನ್ (Kanwal Singh Jeet Dhillon) ಅವರನ್ನು ಹೃದಯಸ್ಪರ್ಶಿ ಮಿಲಿಟರಿ ಸಂಪ್ರದಾಯದೊಂದಿಗೆ ಬೀಳ್ಕೊಡಲಾಯಿತು. ವಿಡಿಯೋದಲ್ಲಿ ಕಾಣಿಸುವಂತೆ ಸಹೋದ್ಯೋಗಿಗಳು ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿದರು ಮತ್ತು 'ಹಿ ಇಸ್‌ ಜಾಲಿ ಗುಡ್ ಫೆಲೋ, ಸೋ ಸೇ ಆಲ್ ಅಪ್‌ ಅಸ್‌'  ಎಂದು ಹಾಡಿದರು.

 

ಫ್ಟಿನೆಂಟ್ ಜನರಲ್ ಧಿಲ್ಲೋನ್ ಕೂಡ ತಮ್ಮ ಪ್ರೀತಿಯ ಸಹೋದ್ಯೋಗಿಗಳೊಂದಿಗೆ ಕರ್ಚಿಯಲ್ಲಿ ಕುಳಿತು ಚಪ್ಪಾಳೆ ತಟ್ಟುತ್ತಾ ಹಾಡು ಹಾಡಿದರು. ವಿಶೇಷ ಎಂದರೆ ಇದು ಡೈರೆಕ್ಟರ್ ಜನರಲ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ಮತ್ತು ಡೆಪ್ಯೂಟಿ ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ (ಗುಪ್ತಚರ) ಆಗಿ ಸೇವೆ ಸಲ್ಲಿಸಿದ ಜನರಲ್ ಧಿಲ್ಲೋನ್ ಅವರ ವೃತ್ತಿ ಜೀವನದ ಕೊನೆಯ ದಿನವಾಗಿತ್ತು.

ರಾಷ್ಟಪತಿ ಜೊತೆ 2 ದಶಕಗಳ ಕಾಲ ಸೇವೆ ಸಲ್ಲಿಸಿದ ವಿರಾಟ್‌ಗೆ ಭಾವಪೂರ್ಣ ಬೀಳ್ಕೊಡುಗೆ

ದೇಶಕ್ಕಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಜನರು ಅವರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಧನ್ಯವಾದಗಳನ್ನು ಅರ್ಪಿಸಿದರು. ವಿಡಿಯೋ ನೋಡಿದ ಒಬ್ಬರು ಬಳಕೆದಾರರು, 'ಧನ್ಯವಾದಗಳು ಸರ್, ನಿಮ್ಮಂತಹ ಜನರಿಂದಾಗಿ ನಾವು ಸುರಕ್ಷಿತರಾಗಿದ್ದೇವೆ. ಈ ಸಾಲನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಎಷ್ಟೇ ಗಾಜಿಗಳು ಬರಲಿ ಎಷ್ಟೇ ಗಾಜಿಗಳು ಹೋಗಲಿ.  ನಿವೃತ್ತಿ ಜೀವನದ ಶುಭಾಶಯಗಳು ಸರ್ , ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಶುಭವಾಗಲಿ. ಜೈ ಹಿಂದ್' ಎಂದು ಬರೆದಿದ್ದಾರೆ. 

Sania Mirza: ಟೆನಿಸ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ( KJS Dhillon) 'ಟೈನಿ ಧಿಲ್ಲೋನ್' ಎಂದು ಜನಪ್ರಿಯರಾಗಿದ್ದು, ಡಿಸೆಂಬರ್ 1983 ರಲ್ಲಿ ಸೇನೆಗೆ ನೇಮಕಗೊಂಡಿದ್ದರು. ಅವರು ಕಾಶ್ಮೀರ ಮೂಲದ XV ಕಾರ್ಪ್ಸ್‌ನ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಆಪರೇಷನ್ ಮಾ' ಅನ್ನು ಪ್ರಾರಂಭಿಸಿದ್ದಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ಅವರು ವಿಶೇಷವಾಗಿ ಉಗ್ರಗಾಮಿ ಚಟುವಟಿಕೆಗಳಿಗೆ ಸೇರಿದ ಯುವಕರ ಕುಟುಂಬಗಳನ್ನು ಸಂಪರ್ಕಿಸಿ ಅವರ ಮಕ್ಕಳನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಮರಳಿ ತರಲು ಪ್ರಯತ್ನಿಸಿದ್ದರು.

 

Latest Videos
Follow Us:
Download App:
  • android
  • ios