Asianet Suvarna News Asianet Suvarna News

ಹೊಸ ಸೇನಾ ಸಮವಸ್ತ್ರಕ್ಕೆ ಪೇಟೆಂಟ್ ಮಾಡಿಸಿದ ಭಾರತೀಯ ಸೇನೆ

ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸಕ್ಕೆ ಪೇಟೆಂಟ್ ಮಾಡಿಸಿದೆ. ಈ ಮೂಲಕ ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸದ ಬಗ್ಗೆ ವಿಶೇಷ ಬೌದ್ಧಿಕ ಹಕ್ಕುಗಳನ್ನು ಹೊಂದಿದೆ.

Indian army gets patents for its New combat uniform akb
Author
First Published Nov 3, 2022, 9:02 PM IST

ನವದೆಹಲಿ: ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸಕ್ಕೆ ಪೇಟೆಂಟ್ ಮಾಡಿಸಿದೆ. ಈ ಮೂಲಕ ಭಾರತೀಯ ಸೇನೆ ತನ್ನ ಹೊಸ ಸಮರ ಸಮವಸ್ತ್ರದ ವಿನ್ಯಾಸದ ಬಗ್ಗೆ ವಿಶೇಷ ಬೌದ್ಧಿಕ ಹಕ್ಕುಗಳನ್ನು ಹೊಂದಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಷನಲ್‌ ಟೆಕ್ನಾಲಜಿ ಸೇನೆಯ ಈ ಹೊಸ ಸಮರ ಸಮವಸ್ತ್ರವನ್ನು ವಿನ್ಯಾಸಗೊಳಿಸಿದ್ದು, ಇದರ ಬೌದ್ಧಿಕ ಹಕ್ಕನ್ನು ಪೇಟೆಂಟ್ ಮೂಲಕ ನೋಂದಾಯಿಸಿದೆ. 

ತನ್ನ ಹೊಸ ಸಮರ ಸಮವಸ್ತ್ರವನ್ನು ಅನಾವರಣಗೊಳಿಸಿ ತಿಂಗಳುಗಳ ನಂತರ, ಭಾರತೀಯ ಸೇನೆಯು (Indian Army)  ಅದಕ್ಕೆ ಮಾಲೀಕತ್ವವನ್ನು ಸ್ಥಾಪಿಸಲು ಕೋಲ್ಕತ್ತಾ ಮೂಲದ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್‌ನಲ್ಲಿ ಈ ಹೊಸ ವಿನ್ಯಾಸ ಹಾಗೂ ಟ್ರೇಡ್‌ಮಾರ್ಕ್‌ನ್ನು (Trademark) ನೊಂದಾಯಿಸಿತ್ತು.. ಆಕ್ಟೋಬರ್ 21 ರಂದು ಪೇಟೆಂಟ್ ನೀಡುವ ಕಚೇರಿಯ ಅಧಿಕೃತ ಜರ್ನಲ್‌ನಲ್ಲಿ ಈ ನೋಂದಣಿ ವಿಚಾರವನ್ನು ಪ್ರಕಟಿಸುವ ಮೂಲಕ ಖಚಿತಪಡಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಈ ವರ್ಷ ಜನವರಿ 15 ರಂದು ನಡೆದ ಸೇನಾ ದಿನದ ಮೆರವಣಿಗೆಯಲ್ಲಿ ಡಿಜಿಟಲ್ (Digital) ಮಾದರಿಯ ಸೇನೆಯ ಈ ಹೊಸ ಸಮರ ಸಮವಸ್ತ್ರವನ್ನು ಮೊದಲಿಗೆ ಪ್ರದರ್ಶಿಸಲಾಗಿತ್ತು.  

ಹೇಗಿದೆ ಹೊಸ ಸಮರ ಸಮವಸ್ತ್ರ

ಈ ಸುಧಾರಿತ ಸಮವಸ್ತ್ರವು ಸಮಕಾಲೀನ ನೋಟ ಮತ್ತು ಕ್ರಿಯಾತ್ಮಕ ವಿನ್ಯಾಸವನ್ನು ಹೊಂದಿದೆ. ಫ್ಯಾಬ್ರಿಕ್ (Fabric) ಅನ್ನು ಹಗುರವಾದ, ಜೊತೆಗೆ ಬಲವಾದ, ಉಸಿರಾಡುವ, ತ್ವರಿತವಾಗಿ ಒಣಗಿಸಲು ಸಾಧ್ಯವಾಗುವ ರೀತಿ ವಿನ್ಯಾಸಗೊಳಿಸಲಾಗಿದ್ದು, ನಿರ್ವಹಿಸಲು ಸುಲಭವಾಗಿದೆ. ಮಹಿಳಾ ಯೋಧರ ಸಮವಸ್ತ್ರಕ್ಕೆ (Soldiers Uniform) ಲಿಂಗ ನಿರ್ದಿಷ್ಟ ಮಾರ್ಪಾಡುಗಳನ್ನು ಮಾಡುವುದರೊಂದಿಗೆ  ಸಮವಸ್ತ್ರಕ್ಕೆ ವಿಶಿಷ್ಟತೆ ನೀಡಲಾಗಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 


ಪೇಟೆಂಟ್ ಏಕೆ
ವಿನ್ಯಾಸದ ಪೇಟೆಂಟ್ (Patents) ಪಡೆಯುವುದರಿಂದ ಈ ವಿನ್ಯಾಸದ ಸಮವಸ್ತ್ರದ ಬೌದ್ಧಿಕ ಆಸ್ತಿಯ ಹಕ್ಕುಗಳು ಕೇವಲ ಭಾರತೀಯ ಸೇನೆಗೆ ಮಾತ್ರ ಸೇರಿರುತ್ತದೆ. ಯಾವುದೇ ಇತರ ಮಾರಾಟಗಾರರು ಈ ವಿನ್ಯಾಸದ ಸಮವಸ್ತ್ರ/ಬಟ್ಟೆ ಉತ್ಪಾದಿಸುವುದು ಕಾನೂನು ಬಾಹಿರವಾಗಿರುತ್ತದೆ. ಒಂದು ವೇಳೆ ಉತ್ಪಾದಿಸಿದಲ್ಲಿ ಕಾನೂನು ಹೋರಾಟದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಭಾರತೀಯ ಸೇನೆ ಅಂತಹ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು. ಅಲ್ಲದೇ ಅದಕ್ಕೆ ಪ್ರತಿಯಾಗಿ ಪರಿಹಾರವನ್ನು ಪಡೆಯಬಹುದಾಗಿದೆ. 

ಹೊಸ ಮಾದರಿಯ ಸಮವಸ್ತ್ರವನ್ನು ಪರಿಚಯಿಸುವ ಭಾಗವಾಗಿ, ಈಗಾಗಲೇ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ ಮೂಲಕ ಒಟ್ಟು 50,000 ಸೆಟ್ ಸಮವಸ್ತ್ರಗಳನ್ನು ಖರೀದಿಸಲಾಗಿದೆ ಮತ್ತು ದೆಹಲಿ (Delhi), ಲೇಹ್, ಬಿಡಿ ಬಾರಿ (BD Bari), ಶ್ರೀನಗರ (Srinagar), ಉಧಮ್‌ಪುರ, ಅಂಡಮಾನ್ ಮತ್ತು ನಿಕೋಬಾರ್(Andaman and Nicobar), ಜಬಲ್ಪುರ, ಮಸಿಂಪುರ್, ನಾರಂಗಿ, ದಿಮಾಪುರ್, ಬಾಗ್ಡೋಗ್ರಾ, ಲಕ್ನೋ (Lucknow), ಅಂಬಾಲಾ, ಮುಂಬೈ ಮತ್ತು ಖಡ್ಕಿ ಸೇರಿದಂತೆ 15 ಸಿಎಸ್‌ಡಿ ಡಿಪೋಗಳಿಗೆ ತಲುಪಿಸಲಾಗಿದೆ.  

ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಯ ಬೋಧಕರ ಮೂಲಕ ಈ ನಿರ್ದಿಷ್ಟ ವಿನ್ಯಾಸದ ಹೊಸ ಸಮವಸ್ತ್ರವನ್ನು ಹೊಲಿಯಲು ನಾಗರಿಕ ಮತ್ತು ಮಿಲಿಟರಿ ಟೈಲರ್‌ಗಳಿಗೆ ತರಬೇತಿ ನೀಡಲು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
 

Follow Us:
Download App:
  • android
  • ios