Asianet Suvarna News Asianet Suvarna News

ಅಂದು ಚಪ್ಪಾಳೆ ಇಂದು ಸೇನೆಯಿಂದ ಹೂಮಳೆ: ಕೊರೋನಾ ವಾರಿಯರ್ಸ್‌ಗೆ ಸಲಾಂ!

ಕೊರೋನಾ ವಾರಿಯರ್ಸ್‌ಗೆ ಸೇನಾಪಡೆಯಿಂದ ಹೂಮಳೆ| ಕೊರೋನಾ ಸೋಂಕಿತರ ಚಿಕಿತ್ಸೆಗೆ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ನಿಡುತ್ತಿರುವ ವೈದ್ಯ ಅಧಿಕಾರಿಗಳು| ಹೂಮಳೆ ಬೆನ್ನಲ್ಲೇ ಸಾರ್ಥಕವಾಯ್ತೆಂದ ಅಧಿಕಾರಿಗಳು

Indian Armed forces big thank you to those fighting Coronavirus
Author
Bangalore, First Published May 3, 2020, 12:17 PM IST

ಬೆಂಗಳೂರು(ಮೇ.03): ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸಲು ದೇಶದ ಮೂರೂ ಸಶಸ್ತ್ರ ಪಡೆಗಳು ಭಾನುವಾರ ದೇಶದ ಉದ್ದಗಲಕ್ಕೂ ಕೋವಿಡ್‌ ಆಸ್ಪತ್ರೆಗಳ ಮೇಲೆ ವಿಮಾನಗಳ ಮೂಲಕ ಫ್ಲೈ ಪಾಸ್ಟ್‌ ಹಾಗೂ ಹೆಲಿಕಾಪ್ಟರ್‌ಗಳಿಂದ ಹೂಮಳೆ ಸುರಿಸಿ ಧನ್ಯವಾದ ಸಲ್ಲಿಸಿವೆ.

ವಾಯುಪಡೆಯ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೂ ದಿಬ್ರುಘರ್‌ನಿಂದ ಕಛ್‌ವರೆಗೆ ಹಾರಾಟ ನಡೆಸಿ ಹೂವು ಚೆಲ್ಲಿವಡ. ಭೂಸೇನೆಯ ಸಶಸ್ತ್ರ ಪಡೆಗಳು ಮೌಂಟೇನ್‌ ಬ್ಯಾಂಡ್‌ ನುಡಿಸಿ, ವಿಶೇಷ ಕವಾಯತು ನಡೆಸಿ ವೈದ್ಯರು, ನರ್ಸ್‌ಗಳು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಹಾಗೂ ಪತ್ರಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದು, ನೌಕಾಪಡೆಯು ತನ್ನ ಯುದ್ಧನೌಕೆಗಳಲ್ಲಿ ವಿದ್ಯುತ್‌ ಬೆಳಗಿ ಕೊರೋನಾ ವಾರಿಯರ್‌ಗಳ ಜೊತೆ ದೇಶದ ಯೋಧರೂ ಇದ್ದಾರೆ ಎಂದು ಸಾಂಕೇತಿಕವಾಗಿ ಹೇಳಿದೆ. 

ಈಗಾಗಲೇ ಬೆಳಿಗ್ಗೆ 10ರಿಂದ 11 ಗಂಟೆಯ ನಡುವೆ ಯುದ್ಧವಿಮಾನಗಳು ಹಾಗೂ ಸರಕು ವಿಮಾನಗಳು ಹಾರಾಟ ನಡೆಸಿ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಆಸ್ಪತ್ರೆಗಳ ಮೇಲೆ ಹೂವಿನ ಮಳೆ ಸುರಿಸಿವೆ.

ಬೆಂಗಳೂರಿನಲ್ಲೂ ಹೂಮಳೆ:

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೆ ಭಾರತೀಯ ಸೇನೆಯಿಂದ ಹೂ ಮಳೆ ಸುರಿಸಿ ಗೌರವ ಸಮರ್ಪಣೆ ಮಾಡಿದೆ. ವಾಯು ಪಡೆಯ ಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್‌ಗೆ ಮೇಲೆ ಹೂ ಮಳೆ ಸುರಿದಿದೆ.

ವಾಯು ಸೇನೆಯ ವಿಮಾನಗಳು ಬರುವ ಮೊದಲು ಡಾಕ್ಟರ್‌ಗಳು, ನರ್ಸ್‌ಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆ ಬಿಲ್ಡಿಂಗ್‍ನಿಂದ ಹೊರಭಾಗದಲ್ಲಿ ನಿಂತಿದ್ದರು. ಈ ವೇಳೆ ಹೂ ಮಳೆ ಸುರಿಯಲಾಗಿದೆ. ಇತ್ತ ವೈದ್ಯರು ಹಾಗೂ ದಾದಿಯರು ಕೂಡ ಚಪ್ಪಾಳೆ ತಟ್ಟಿ ವಾಯುಸೇನಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವಿಶೇಷ ಗೌರವದಿಂದ ಕೊರೊನಾ ವಾರಿಯರ್ಸ್ ಮಂದಹಾಸ ಬೀರಿದ್ದು, ಸೇವೆ ಮಾಡಿದ್ದು ಸಾರ್ಥಕವಾಯ್ತೆಂಬ ಭಾವನೆ ಮುಡಿದೆ ಎಂದಿದ್ದಾರೆ. ಹೂ ಮಳೆ ಗೌರವ ಮುಗಿದ ಮೇಲೆ ಸಿಬ್ಬಂದಿ ಘೋಷಣೆ ಕೂಗಿದ್ದಾರೆ. ಇತ್ತ ಕಮಾಂಡ್ ಆಸ್ಪತ್ರೆ ಮೇಲೂ ಸುಮಾರು 8 ನಿಮಿಷಗಳ ಕಾಲ ವಾಯು ಸೇನೆ ಹೂ ಮಳೆ ಸುರಿಸಿದೆ.

ರಾತ್ರಿ ನೌಕಾಸೇನೆಯಿಂದ ಗೌರವ

ಇನ್ನು ರಾತ್ರಿ 7.30ರಿಂದ 11.59ರ ವರೆಗೆ ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾ ಬಳಿ ಐದು ಯುದ್ಧ ನೌಕೆಗಳು ವಿದ್ಯುದ್ದೀಪಗಳನ್ನು ಬೆಳಗಿ ‘ಕೊರೋನಾ ವಾರಿಯರ್‌ಗಳಿಗೆ ಸೆಲ್ಯೂಟ್‌’ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಲಿವೆ.

 
Follow Us:
Download App:
  • android
  • ios