ನವದೆಹಲಿ, [ಏ.20]: ಭಾರತ ವಾಯುಗಡಿ ದಾಟಿ ಸಾಹಸ ಮೆರೆದಿದ್ದ ಭಾರತೀಯ ವಾಯುಪಡೆಯ ಹೆಮ್ಮೆಯ ಯೋಧ, ವಿಂಗ್​​ ಕಮಾಂಡರ್​ ಅಭಿನಂದನ್​​ ವರ್ಧಮಾನ್ ಅವರನ್ನು​​ ವರ್ಗಾವಣೆ ಮಾಡಲಾಗಿದೆ. 

ಅಭಿನಂದನ್‌ಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ!

ಅಭಿನಂದನ್​​ ವರ್ಧಮಾನ್ ಅವರನ್ನು ಶ್ರೀನಗರ ವಾಯುನೆಲೆಯಿಂದ ದೇಶದ ಮತ್ತೊಂದು ಪ್ರಮುಖ ವಾಯುನೆಲೆಯಾದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ. 

ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಕಾಶ್ಮೀರ ಕಣಿವೆಯಲ್ಲಿ ಅವರ ಭದ್ರತೆ ವಿಚಾರವಾಗಿ ವ್ಯಕ್ತವಾಗಿದ್ದ ಆತಂಕ ಹಿನ್ನೆಲೆಯಲ್ಲಿ ಅವರನ್ನು ವರ್ಗ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಭಾರತ ವಾಯುಗಡಿ ದಾಟಿ ಪಾಕಿಸ್ತಾನದ F16 ವಿಮಾನವನ್ನು ಬೆನ್ನತ್ತಿ ಹೋಗಿ ಪಾಕ್ ಸೈನಿಕರಿಗೆ ಸೆರೆಸಿಕ್ಕಿದ್ದರು. ಬಳಿಕ ಪಾಕ್ ವಾಪಸ್ ಭಾರತಕ್ಕೆ ಕಳುಹಿಸಿದ್ದರು.